ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆದ ಸ್ಥಳದ ಸ್ವಚ್ಛತೆ
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಗುರುವಾಯನಕೆರೆಯ ಶಕ್ತಿನಗರ ಮೈದಾನದಲ್ಲಿ ಏಪ್ರಿಲ್ 20ರಂದು ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಇವರ ಉಪಸ್ಥಿತಿಯಲ್ಲಿ, ನಡೆದ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆದ. ಮೈದಾನದ ಸ್ವಚ್ಛತೆಯನ್ನು ಬುಧವಾರ ಮಾಡಲಾಯಿತು. ಈ ಸ್ವಚ್ಛತಾ ಕೆಲಸ ಕಾರ್ಯದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಶೇಖರ್ ಕುಕ್ಕೆಡಿ, ಬ್ಲಾಕ್ ಕಾಂಗ್ರೆಸ್ ನಗರ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ನಾಗೇಶ್ ಕುಮಾರ್...
ಕಾಶ್ಮೀರ ಉಗ್ರಗಾಮಿ ದಾಳಿ: ಶಾಂತಿ ಮತ್ತು ಮಾನವೀಯತೆಗೆ ಎದುರಾದ ಹೊಡೆತ; ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ; ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಉಗ್ರಗಾಮಿ ದಾಳಿ ಆಘಾತಕಾರಿಯಾಗಿದೆ ಈ ಭಯೋತ್ಪಾದಕ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆಈ ಕೂಡಲೇ ಕೇಂದ್ರಸರ್ಕಾರ ನಾವು "ಬಯಸುವ ನ್ಯಾಯ"ವನ್ನು ಒದಗಿಸುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಜಿ ಹಾಗು ಗ್ರಹಸಚಿವರಾದ ಅಮಿತ್ ಷಾ ಕೈಗೊಳ್ಳುತ್ತಾರೆ ಎಂದು ಶಾಸಕ ಹರೀಶ್ ಪೂಂಜ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ನೆನಪಿಡಿ, ಎಲ್ಲಿಯವರೆಗೆ ಮತವೊಂದು ಇತರ ಮತದವರನ್ನು ಕೊಲ್ಲುವುದೇ ತಮ್ಮ ಮತದ ಉಳಿವಿಗೆದಾರಿ ಎಂದು ತನ್ನ ಸಮುದಾಯದವರಿಗೆ ಬೋಧಿಸುತ್ತಿರುತ್ತದೋ, ಅಲ್ಲಿಯವರೆಗೆ ಈ ಎಲ್ಲರಿಗೂ ಆಪತ್ತು ತಪ್ಪಿದ್ದಲ್ಲ.ಎಂದು ಶಾಸಕ ಹರೀಶ್ ಪೂಂಜ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಳ್ತಂಗಡಿ; ಬ್ರಾಹ್ಮಣರ ಮೇಲಿನ ದೌರ್ಜನ್ಯ, ವಿವಿಧ ಬ್ರಾಹ್ಮಣ ಸಂಘಟನೆಗಳಿಂದ ಸರಕಾರಕ್ಕೆ ಮನವಿ
ಬೆಳ್ತಂಗಡಿ; ಬ್ರಾಹ್ಮಣರ ಮೇಲೆ ರಾಜ್ಯದಲ್ಲಿ ಆಗುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಬ್ರಾಹ್ಮಣ ಸಂಘಟನೆಗಳ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ನೂರಾರು ಸಂಖ್ಯೆಯಲ್ಲಿ ಸೇರಿದ್ದ ತಾಲೂಕಿನ ಬ್ರಾಹ್ಮಣ ಸಮುದಾಯದವರು ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಇತ್ತೀಚೆಗೆ ನಡೆದ ಸಿ.ಇ.ಟಿ ಪರೀಕ್ಷೆಯಲ್ಲಿ ಸರಕಾರದ ಆದೇಶ ಇಲ್ಲದಿದ್ದರೂ ಪವಿತ್ರವಾದ ಜನಿವಾರವನ್ನು ತುಂಡರಿಸಿ ಅದನ್ನು ಪರಿಕ್ಷಾ ಪ್ರವೇಶಕ್ಕೆ ನಿರ್ಬಂಧವಾಗಿ ಪರಿಗಣಿಸಿ ದೇಹದಿಂದ ತೆಗೆದಿರುವ ಅಧಿಕಾರಿಗಳ ಕ್ರಮವನ್ನು ವಿಪ್ರಸಮಾಜವು ತೀವ್ರವಾಗಿ ಖಾಂಡಿಸುತ್ತದೆ. ಈರೀತಿಯ ವರ್ತನೆಗಳು ಸಮಾಜದಲ್ಲಿ ವಿಘಟನೆಯನ್ನು ಉಂಟುಮಾಡುವ...
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಖಂಡನೀಯ ಬಿಷಪ್ ಲಾರೆನ್ಸ್ ಮುಕ್ಕುಯಿ
ಬೆಳ್ತಂಗಡಿ; ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನುಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪರಮ ಪೂಜ್ಯ ಲಾರೆನ್ಸ್ ಮುಕ್ಕಿಯಿ ಅವರು ತೀವ್ರವಾಗಿ ಖಂಡಿಸಿದಾರೆ."ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯು ಅಮಾನುಷಕ ಕೃತ್ಯವಾಗಿದೆ ಮತ್ತು ನಾನು ಅದನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ದಾಳಿಯಲ್ಲಿ ಕರ್ನಾಟಕದವರು ಪೀಡಿತರಾಗಿದೆ ಎಂಬುದು ನನ್ನ ದುಃಖವನ್ನು ಇಮ್ಮಡಿಗೊಳಿಸಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ಅರ್ಥಹೀನ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡ...
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯು ತೀವ್ರ ದುಃಖಕರ ಮತ್ತು ಖಂಡನೀಯ; ರಕ್ಷಿತ್ ಶಿವರಾಂ
ಬೆಳ್ತಂಗಡಿ; ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯು ತೀವ್ರ ದುಃಖಕರ ಮತ್ತು ಖಂಡನೀಯ. ಅಮಾನವೀಯವಾಗಿದೆ. ಈ ದಾಳಿಯಲ್ಲಿ ಮೃತರಾದವರಿಗೆ ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಉಗ್ರಗಾಮಿಗಳ ನಿಯಂತ್ರಣಕ್ಕೆ ಕೇಂದ್ರ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದುಒತ್ತಾಯಿಸುತ್ತೇನೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ
ಬೆಳ್ತಂಗಡಿ : ಬೆಳಾಲು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗೋಲ್ಮಾಲ್; ಸಿಬ್ಬಂದಿಗಳಿಬ್ಬರಿಂದ ಲಕ್ಷಾಂತರ ರೂಪಾಯಿ ವಂಚನೆ
ಬೆಳ್ತಂಗಡಿ : ಸಹಕಾರಿ ಸಂಘದಲ್ಲಿ ಇಬ್ಬರು ಸಿಬ್ಬಂದಿಗಳು ಸಂಘದ ಅಕೌಂಟ್ ನಿಂದ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆ ಬಗ್ಗೆ ಮಾಹಿತಿ ಪಡೆದ ಬ್ಯಾಂಕ್ ಮ್ಯಾನೇಜ್ ಮೆಂಟ್ ಅವ್ಯವಹಾರಬ ಮಾಡಿದರಿಂದ ಈಗಾಗಲೇ 50% ಹಣವನ್ನು ವಾಪಸ್ ಸಂಘಕ್ಕೆ ಕಟ್ಟಿಸಿದ್ದಾರೆ. ಉಳಿದ ಹಣವನ್ನು ಕೂಡ ಕಟ್ಟುವುದಾಗಿ ಒಪ್ಪಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ಆಂತರಿಕ ಪರಿಶೀಲನೆ ನಡೆಯುತ್ತಿದೆ ಎಂದು ಬ್ಯಾಂಕ್ ಆಡಳಿತಮಂಡಳಿ ಮಾಹಿತಿ ನೀಡಿದೆ.ಬೆಳ್ತಂಗಡಿ ತಾಲೂಕಿನ ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ಅಕೌಂಟ್ ನಿಂದ ಪ್ಲ್ಯಾನ್ ಮಾಡಿ ಸಿಬ್ಬಂದಿಗಳಿಬ್ಬರು...
ಹೊಸಂಗಡಿ ಗಾಳಿ,ಮಳೆಗೆ ಹಾನಿ
ಬೆಳ್ತಂಗಡಿ: ಹೊಸಂಗಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ಮಳೆಯೊಂದಿಗೆ ಬೀಸಿದ ಭಾರಿ ಗಾಳಿಗೆ ಹಲವೆಡೆ ಹಾನಿ ಸಂಭವಿಸಿದೆ.ದೇರಾರ್ ಶಾರದಾ ಪೂಜಾರಿ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಹಾನಿ ಉಂಟಾಗಿ ದೆ.ಇನ್ನೊಂದು ತೆoಗಿನ ಮರ ಬಚ್ಚಲು ಕೊಟ್ಟಿಗೆಗೆ ಬಿದ್ದು ಅದು ಧರಾಶಾಯಿ ಆಗಿದೆ. ಪ್ರಶಾಂತ್ ಎಂಬವರ ಮನೆಯ 20 ಶೀಟ್ ಗಳು ಗಾಳಿಗೆ ಹಾರಿ ಹೋಗಿ ಹಾನಿಯಾಗಿದೆ,.ಕೇಶವ ಎಂಬವರ ಮನೆಯ ಮೇಲೆ ಅಡಕೆ ಮರ ಬಿದ್ದು ಹಾನಿಯಾಗಿದೆ. ನೂರಾರು ಅಡಕೆ ರಬ್ಬರ್ ಮರಗಳು ಮುರಿದು ಬಿದ್ದಿವೆ.ಪಿಡಿಒ ಗಣೇಶ್ ಶೆಟ್ಟಿ, . ಈ ಸಂದರ್ಭ...
ಪೋಪ್ ಫ್ರಾನ್ಸಿಸ್ ರ ನಿಧನಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯದಿಂದ ತೀವ್ರ ಸಂತಾಪ; 9 ದಿನಗಳ ಶೋಕಾಚರಣೆ
ಬೆಳ್ತಂಗಡಿ; ಪೋಪ್ ಫ್ರಾನ್ಸಿಸ್ ರ ನಿಧನಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯವು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಪೋಪರ ನಿಧನದ ಹಿನ್ನಲೆಯಲ್ಲಿ 9 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಧರ್ಮಪ್ರಾಂತ್ಯಕ್ಕೆ ಸಂಬಂದಪೆಟ್ಟ ಎಲ್ಲಾ ಹಬ್ಬ ಆಚರಣೆಗಳನ್ನು ಸರಳವಾಗಿ ನಡೆಸಲೆಂದು ಘೋಷಿಸಲಾಗಿದೆ. ಇಂದು ಮುಂಜಾನೆ ಬೆಳ್ತಂಗಡಿ, ಸಂತ ಲಾರೆನ್ಸರ ಕ್ಯಾಥಿಡ್ರಲ್ ದೇವಾಲಯದಲ್ಲಿ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಲಾರೆನ್ಸ್ ರವರು ವಿಶೇಷ ಪೂಜೆ ಸಲ್ಲಿಸಿ ಪೂಪರಿಗಾಗಿ ಪ್ರಾರ್ಥನೆ ಮಾಡಿದರು. ಧರ್ಮಕ್ಷೇತ್ರದ ಬಿಷಪ್ ಹೌಸ್ ಮತ್ತು ಪಾಲನಾ ಕೇಂದ್ರದ ಎಲ್ಲ ಧರ್ಮಗುರುಗಳು, ಕನ್ಯಾಸ್ತ್ರೀಯರು ಹಾಗು ವಿಶ್ವಾಸಿಗಳು ಹಾಜರಿದ್ದರು. ವಿಶೇಷ ಪೂಜೆಯ ಸಂದೇಶದ ಸಮಯದಲ್ಲಿ...
ತೆಕ್ಕಾರು ಗೋಪಾಲಕೃಷ್ಣ ದೇವರ ಬ್ರಹ್ಮಕಲಶೋತ್ಸವಕ್ಕೆ ತಾಲೂಕಿನಿಂದ ಹೊರೆ ಕಾಣಿಕೆ
ಬೆಳ್ತಂಗಡಿ; ದಿನಾಂಕ 25.04.2025 ನೇ ಶುಕ್ರವಾರದಿಂದ ರಿಂದ 3.5. 2025 ನೇ ಶನಿವಾರದವರೆಗೆ ತೆಕ್ಕಾರು ಗ್ರಾಮದಲ್ಲಿರುವ ಶ್ರೀ ಗೋಪಾಲಕೃಷ್ಣದೇವರ ಬ್ರಹ್ಮಕಲಶೋತ್ಸವಕ್ಕೆ ತಾಲೂಕು ಮಟ್ಟದಿಂದ ಹೊರ ಕಾಣಿಕೆ ಸಮರ್ಪಿಸುವ ಬಗ್ಗೆ ಸಮಾಲೋಚನ ಸಭೆಯನ್ನು ನಡೆಸಲಾಯಿತು. ತಾಲೂಕಿನ ಪ್ರತಿ ಗ್ರಾಮದಿಂದ ಹೊರೆ ಕಾಣಿಕೆ ತೆಗೆದುಕೊಂಡು ಬರುವುವಂತೆ ವಿನಂತಿಸಲಾಯಿತು.ದಿನಾಂಕ 27.04.2025 ಆದಿತ್ಯವಾರ ಬೆಳಿಗ್ಗೆ ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನ ಹಾಗೂ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಿಂದ ಏಕಕಾಲದಲ್ಲಿ ಹೊರೆ ಕಾಣಿಕೆ ಉದ್ಘಾಟನೆಗೊಳ್ಳಲಿದ್ದು ಪ್ರತಿ ಗ್ರಾಮದ ಭಕ್ತರು ಹೊರೆಕಾಣಿಕೆ ಸಮರ್ಪಿಸಬೇಕೆಂದು ಹಾಗೂ 30.04.2025ನೇ ಬುಧವಾರದಂದು ಪ್ರತಿಷ್ಠಾ ದಿವಸದಂದು ತಾಲೂಕಿನ...
ನಾಲ್ಕೂರು; ಬೈಕ್ ಅಪಘಾತ ಮಹಿಳೆ ಮೃತ್ಯು
ನಾಲ್ಕೂರು: ನಿನ್ನೆ ತಡರಾತ್ರಿ ನಾಲ್ಕೂರು ಗ್ರಾಮದ ಸೂಳಬೆಟ್ಟು ಸನಿಹ ಬೊಕ್ಕಸ ಬಸ್ ನಿಲ್ದಾಣದ ಬಳಿ ಬೈಕ್ ಸ್ಕಿಡ್ ಆಗಿ ಸಹಸವಾರೆ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ. ಶಿರ್ಲಾಲುವಿನ ಅಸುಪಾಸಿನಲ್ಲಿ ನಡೆಯುತ್ತಿರುವ ಶುಭಕಾರ್ಯಕ್ರಮಕ್ಕೆ ಹೋಗಿ ಹಿಂದೆ ಬರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.ಮೃತ ಮಹಿಳೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಕೊಡಿಮಜಲು ಪ್ರತಿಮಾ (37ವರ್ಷ) ಎಂದು ತಿಳಿದು ಬಂದಿದೆ.ಪೋಲೀಸರು ಸ್ಥಳಕ್ಕಾಗಮಿಸಿ ಕೇಸು ದಾಖಲಿಸಿಕೊಂಡಿದ್ದಾರೆ.















