ತೆಕ್ಕಾರು ಜುಮ್ಮಾ ಮಸೀದಿ ಆವರಣ ಗೋಡೆ ಕುಸಿತ
ಬೆಳ್ತಂಗಡಿ; ಭಾರೀ ಮಳೆಗೆ ತೆಕ್ಕಾರು ಗ್ರಾಮದ ತೆಕ್ಕಾರು ಜುಮ್ಮಾ ಮಸೀದಿಯ ಆವರಣ ಗೋಡೆ ಕುಸಿದು ಬಿದ್ದಿದೆ.ಆವರಣ ಗೋಡೆಯ ಒಂದು ಬದಿ ಕುಸಿದು ಬಿದ್ದಿದ್ದು ಸ್ಥಳಕ್ಕೆ ಗ್ರಾ.ಪಂ ಸದಸ್ಯ ರಜಾಕ್ ತೆಕ್ಕಾರು ಭೇಟಿ ನೀಡಿದರು.
ಧರ್ಮಸ್ಥಳ ಸಿಡಿಲು ಬಡಿದು ವ್ಯಕ್ತಿಗೆ ಗಾಯ
ಬೆಳ್ತಂಗಡಿ;ತಾಲೂಕಿನಲ್ಲ ಭಾರೀ ಮಳೆ ಮುಂದುವರಿದಿದ್ದುವ ಧರ್ಮಸ್ಥಳ ಗ್ರಾಮದ ಪೂರ್ಜೆ ಬೈಲಿನಲ್ಲಿ ಸಿಡಿಲುಬಡಿದು ವ್ಯಕ್ತೊಯೊಬ್ಬ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ಭವಿಸಿದೆ.ಗಾಯಾಳು ಸ್ಥಳೀಯ ನಿವಾಸಿ ಶೀನ ಮಲೆಕುಡಿಯ ಎಂಬಾತನಾಗಿದ್ದಾನೆಮನೆಯಲ್ಲಿ ಇದ್ದವೇಳೆ ಒಂಬತ್ತು ಗಂಟೆ ಸುಮಾರಿಗೆ ಸಿಡಿಲು ಬಡಿದಿದೆ.ಗಾಯಾಳುವನ್ನು ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದೆ.ಆಸ್ಪತ್ರೆಗೆ ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಮ್ ಭೇಟಿ ನೀಡಿದ್ದಾರೆ.
ಕಲ್ಮಂಜ; ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿ ಬಿದ್ದ ಲಾರಿ
ಬೆಳ್ತಂಗಡಿ: ಕಲ್ಮಂಜ ಗ್ರಾಮದ ನಿಡಿಗಲ್ ಸೇತುವೆಯ ಸಮೀಪ ದನದ ಮೇವು ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿರುವ ಘಟನೆ ಇಂದು (ಮೇ. 26) ಮುಂಜಾನೆ ನಡೆದಿದೆ. ಚಾರ್ಮಾಡಿಯಿಂದ ಉಜಿರೆ ಕಡೆಗೆ ದನದ ಮೇವು ತುಂಬಿಕೊಂಡು ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳ್ತಂಗಡಿ; ಮುಂದುವರಿದ ಭಾರೀ ಗಾಳಿ ಮಳೆ; ಹಲವು ಮನೆಗಳಿಗೆ ಹಾನಿ
ಬೆಳ್ತಂಗಡಿ; ತಾಲೂಕಿನಲ್ಲಿ ಭಾರೀ ಮಳೆ ಮುಂದುವರಿದಿದ್ದು ನದಿಗಳು ತುಂಬಿ ಹರಿಯುತ್ತಿದೆ. ದಿನವಿಡೀ ಸುರಿದ ಮಳೆಯಿಂದಾಗಿ ಜನ ಜೀವವನ ಅಸ್ತವ್ಯಸ್ತಗೊಂಡಿದೆ.ಹಲವೆಡೆ ತೋಟಗಳಿಗೆ ನೀರು ನುಗ್ಗಿದ್ದು ರಾತ್ರಿಯೂ ಮುಂದುವರಿದ ಮಳೆ ಜನರಲ್ಲಿ ಆತಂಕ ಮೂಡಿಸಿದೆ.ತಾಲೂಕಿನಲ್ಲಿ ಭಾರೀ ಮಳೆಗೆ ಹಲವೆಡೆ ಭೂಕುಸಿತಗಳಾಗಿದ್ದು ಮನೆಗಳು ಅಪಾಯದಲ್ಲಿದೆ.ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿನ ನಿವಾಸಿ ವಸಂತಿ ಎಂಬವರ ಮನೆಯ ಹಿಂಬದಿಯ ಗುಡ್ಡ ಕುಸಿದಿದ್ದು ಮನೆಯ ಹಿಂಭಾಗಕ್ಕೆ ಹಾಗೂ ಕೊಟ್ಟಿಗೆಗೆ ಹಾನಿ ಸಂಭವಿಸಿದೆ.ನಾವೂರು ಗ್ರಾಮದ ಕಾರ್ಮಿನಡ್ಕ ಎಂಬಲ್ಲಿ ದೇಜಪ್ಪ ಶೆಟ್ಟಿಗಾರ್ ಎಂಬವರ ಮನೆಯ ಸಮೀಪ ಮಣ್ಣು ಕುಸಿದು ಬಿದ್ದಿದೆ ವಾಸ್ತವ್ಯದ ಮನೆಗೆ ಹೆಚ್ಷಿನ...
ಬೆಳ್ತಂಗಡಿ; ಬದುಕು ಕಟ್ಟೋಣ ತಂಡದಿಂದ ಯಶೋವಿಜಯ ಬದುಕು-ನೆನಪು-ಸ್ಮರಣೆ ಕಾರ್ಯಕ್ರಮ
ಬೆಳ್ತಂಗಡಿ: ಕೀರ್ತಿಶೇಷ ಡಾ. ಬಿ.ಯಶೋವರ್ಮ ಮತ್ತು ವಿಜಯರಾಘವ ಪಡ್ವೆಟ್ನಾಯರ ಸರಳ ಹಾಗೂ ಶಿಸ್ತುಬದ್ಧ ಜೀವನ, ಸೇವೆ-ಸಾಧನೆ ಸಾರ್ವಕಾಲಿಕ ಮೌಲ್ಯ ಹೊಂದಿದ್ದು ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಸೋನಿಯ ಯಶೋವರ್ಮ ಹೇಳಿದರು.ಅವರು ಭಾನುವಾರ ಉಜಿರೆಯಲ್ಲಿ ಕೃಷ್ಣಾನುಗ್ರಹ ಸಭಾಭವನದಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಬೆಳ್ತಂಗಡಿ ರೋಟರಿಕ್ಲಬ್, ಎಸ್.ಡಿ.ಎಂ. ಕಾಲೇಜು ರಾಷ್ಟ್ರೀಯ ಸೇವಾಯೋಜನೆ ಘಟಕ, ಎಸ್.ಡಿ.ಎಂ. ಕ್ರೀಡಾಸಂಘ ಹಾಗೂ ಸ್ಥಳೀಯ ಸಂಘಟನೆಗಳ ಸಹಯೋಗದಲ್ಲಿ ಯಶೋವಿಜಯ: ಬದುಕು-ನೆನಪು-ಸ್ಮರಣೆ ಕಾರ್ಯಕ್ರಮ ಹಾಗೂ ಸರ್ಕಾರಿ ಶಾಲಾವಿದ್ಯಾರ್ಥಿಗಳಿಗೆ ಚೀಲ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಡಾ. ಪ್ರದೀಪ್ ನಾವೂರು,...
ಬಳೆಂಜ ಗಾಳಿ ಮಳೆಗೆ ಮನೆಗೆ ಹಾನಿ; ಸಂಕಷ್ಟದಲ್ಲಿದ್ದ ಮನೆಯವರಿಗೆ ನೆರವಾದ ಕಾಂಗ್ರೆಸ್ ಟಾಸ್ಕ್ ಫೋರ್ಸ್
ಬೆಳ್ತಂಗಡಿ; ಬಳೆಂಜ ಗ್ರಾಮದ ದರ್ಬೆ ಎಂಬಲ್ಲಿ ಗಾಳಿ ಮಳೆಗೆ ಮನೆಯ ಹಂಚು ಹಾರಿ ಹೋಗಿ ಸಂಕಷ್ಟದಲ್ಲಿದ್ದ ಮನೆಯವರಿಗೆ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮತಿ ನೆರವಿಗೆ ಬಂದಿದ್ದು ಮನೆಯ ತಾತ್ಕಾಲಿಕ ದುರಸ್ತಿ ಮಾಡಿಕೊಟ್ಟಿದ್ದಾರೆ.ಮನೆಗೆ ಹಾನಿಯಾಗಿರುವುದು ತಿಳಿದ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರುಗಳಾದ ಮುಸ್ತಾಫ ಕಟ್ಟೆ, ಸದಾನಂದ ತೋಟದ ಪಲ್ಕೆ, ಪುರುಷೋತ್ತಮ ಆಚಾರಿ, ಹಾಗೂ ಇತರರು ಸೇರಿ ಅಗತ್ಯವಿರುವ ಹಂಚುಗಳನ್ನು ತಂದು ಗಾಳಿಗೆ ಹಾನಿಗೀಡಾಗಿದ್ದ ಮನೆಯ ಮೇಲ್ಛಾವಣಿಯ ನ್ನು ದುರಸ್ತಿ ಮಾಡಿ ಕೊಟ್ಟಿದ್ದಾರೆ.
ಬೆಳ್ತಂಗಡಿ; ಭಾರತೀಯರನ್ನು ನಿಂದಿಸಿದ ಶಾಸಕ ಹರೀಶ್ ಪೂಂಜ ವಿರುದ್ದ ಸೋಮವಾರ ಪ್ರತಿಭಟನೆ; ಬಿ.ಎಂ ಭಟ್
ಬೆಳ್ತಂಗಡಿ; ಇತ್ತೀಚೆಗೆ ತೆಕ್ಕಾರಿಲ್ಲಿ ದಾರ್ಮಿಕ ಸಭೆಯನ್ನು ದುರುಪಯೋಗ ಪಡಿಸಿಕೊಂಡು ಬೆಳ್ತಂಗಡಿ ಶಾಸಕರು ಭಾರತೀಯ ಪ್ರಜೆಗಳನ್ನು ಅತ್ಯಂತ ಕೀಳು ಶಬ್ದದಿಂದ ಸಂಬೋದಿಸುತ್ತಾ ನಿಂದಿಸಿ ಅವಮಾನಿಸಿರುತ್ತಾರೆ. ಭಾರತದ ಪ್ರಜೆಗಳನ್ನೇ ಕೆಟ್ಟದಾಗಿ ಕಾಣುವ ಇಂತಹವರು ಶಾಸಕ ಸ್ಥಾನದಲ್ಲಿ ಮುಂದುವರಿಯಲು ಅನರ್ಹರು ಅವರನ್ನು ಸಂವಿದಾನಿಕ ಸ್ಥಾನದಿಂದ ಉಚ್ಚಾಟಿಸಬೇಕು ಎಂದು ಸರಕಾರವನ್ನು ಒತ್ತಾಯಸಿ 26.05.2025 ಸೋಮವಾರ ಬೆಳಿಗ್ಗೆ ಬೆಳ್ತಂಗಡಿ ಮಿನಿವಿಧಾನ ಸೌಧ ಆವರಣದಲ್ಲಿ ಸಮಾನ ಮನಸ್ಕರ ವೇದಿಕೆಯಡಿ ಬೃಹತ್ ಪ್ರತಿಭಟನೆ ನಡೆಯಲಿದೆ.ಎಂದು ಕಾರ್ಮಿಕ ಮುಖಂಡ ನ್ಯಾಯವಾದಿ ಬಿ.ಎಂ.ಭಟ್ ತಿಳಿಸಿದ್ದಾರೆ.ಇದರೊಂದಿಗೆ ಕುವೆಟ್ಟು ಪಂಚಾಯತು ಅಧ್ಯಕ್ಷೆಯೂ ಅದೇ ರೀತಿ ಮಾತುಗಳನ್ನಾಡುತ್ತಾ ಅವಮಾನಕರವಾಗಿ ಮಾತಾಡಿರುವುದು...
ಬೆಳ್ತಂಗಡಿ; ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಪದಗ್ರಹಣ ಅಂಬುಲೆನ್ಸ್ ಲೋಕಾರ್ಪಣೆ ಸಾಧಕರಿಗೆ ಸನ್ಮಾನ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ 'ಟ್ರಸ್ಟ್ ನ ಪದಗ್ರಹಣ ಸಮಾರಂಭ, ಅಂಬುಲೆನ್ಸ್ ಲೋಕಾರ್ಪಣೆ, ಅಶಕ್ತರಿಗೆ ನೆರವು ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮೆ. 25 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಸಂಭ್ರಮದಿಂದ ನಡೆಯಿತು. ಮಂಗಳೂರು ಕಾವೂರು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ರಾಜ್ಯದಲ್ಲಿ ಒಕ್ಕಲಿಗ ಸಮಾಜ ದೊಡ್ಡ ಸಮುದಾಯವಾಗಿದೆ ಸಮುದಾಯಸ್ವಾಭಿಮಾನ ಬೆಳೆಸಿಕೊಂಡು ವ್ಯಕ್ತಿಯ ಚಿಂತನೆ, ಸಮಾಜದ ಚಿಂತನೆ ಸಮಾಜಮುಖಿಯಾಗಿ...
ಸಿ.ಇ.ಟಿ ಫಲಿತಾಂಶ; ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ
ಬೆಳ್ತಂಗಡಿ; ಇಂಜಿನಿಯರಿಂಗ್ , ನ್ಯಾಚುರೋಪತಿ, ಫಾರ್ಮಸಿ, ಪಶು ವೈದ್ಯಕೀಯ, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ - ಸಿ ಇ ಟಿಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.ಪ್ರವಣ್ ಪೊನ್ನಪ್ಪ - 18, ನಿಶಾನ್ ಜೈನ್- 160, ಕೃಪಾ ಸಾಂಚಿ ಮೌರ್ಯ - 436,ಅನುಷ್ ಬಿ - 482, ಸಫ್ವಾನ್ -572 ,ಅನುಜ್ ಕೆ ಎಸ್ - 596, ಪ್ರತೀಕ್ಷಾ ಎಸ್ - 616, ಶಾಂತವ್ವ...
ಧರ್ಮಸ್ಥಳದಲ್ಲಿ ಹತ್ತನಾವಧಿ (ತುಳು: ಪತ್ತನಾಜೆ) ಉತ್ಸವ
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಹತ್ತನಾವಧಿ (ತುಳು: ಪತ್ತನಾಜೆ) ನಿಮಿತ್ತ ಶನಿವಾರ ದೇವಸ್ಥಾನದಲ್ಲಿ ರಂಗಪೂಜೆ, ಬಲಿ ಉತ್ಸವ, ವಸಂತ ಪೂಜೆ, ಅಷ್ಟಾವಧಾನ ಸೇವೆಗಳು ನಡೆದವು.ಧ್ವಜಮರ ಅವರೋಹಣ ನಡೆಯಿತು.ದೀಪಾವಳಿ ವರೆಗೆ ದೇವಸ್ಥಾನದಲ್ಲಿ ರಂಗಪೂಜೆ, ಉತ್ಸವ ಮೊದಲಾದ ವಿಶೇಷ ಸೇವೆಗಳು ನಡೆಯುವುದಿಲ್ಲ.ಧರ್ಮಸ್ಥಳ ಯಕ್ಷಗಾನ ಮೇಳದ ಶ್ರೀ ಮಹಾಗಣಪತಿ ದೇವರ ಮೂರ್ತಿಯನ್ನು ಶನಿವಾರ ಸಂಜೆ ಬಿಡಾರದ ಮಣೆಗಾರರ ಮನೆಯಿಂದ ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು.ಕ್ಷೇತ್ರದ ಆನೆಗಳು, ಬಸವ, ಹೂವಿನ ಕೋಲು, ವಾದ್ಯ ಮೇಳ, ಚೆಂಡೆ ಮೇಳ, ಶಂಖ-ಜಾಗಟೆ ವಾದನ ಮೆರವಣಿಗೆಗೆ ವಿಶೇಷ ಮೆರುಗನ್ನು ನೀಡಿತು.ದೇವಸ್ಥಾನದ ಎದುರು ದರ್ಶನ ಸೇವೆ ನಡೆಸಿದ ಬಳಿಕ...















