ಮೃತದೇಹ ಹೂತ ಪ್ರಕರಣ ಗುರುತಿಸಿದ ಜಾಗದಲ್ಲಿ 24ಗಂಟೆ ಎ.ಎನ್ ಎಫ್ ಪಡೆ ಕಾವಲು
ಬೆಳ್ತಂಗಡಿ; ಧರ್ಮಸ್ಥಳ ನೇತ್ರಾವತಿ ಸ್ನಾನಘಟದ ಸಮೀಪ ಸಾಕ್ಷಿದೂರುದಾರ ಈಗಾಗಲೇ 13ಸ್ಥಳಗಳನ್ನು ಗುರುತಿಸಿ ಮಾರ್ಕ್ ಮಾಡಲಾಗಿದ್ದು ಇದೀಗ ಈ ಸ್ಥಳಗಳು ಸಂಪೂರ್ಣ ಪೊಲೀಸ್ ಕಣ್ಗಾವಲಿನಲ್ಲಿದೆ. ಇಲ್ಲಿಗೆ ಯಾರೂ ಪ್ರವೇಶ ಮಾಡದಂತೆ ಹಾಗೂ ಸ್ಥಳದ ಸಂರಕ್ಷಣೆಗಾಗಿ ಬಿಗುವಾದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ 13 ಸ್ಥಳದಲ್ಲಿ 30 ಜನ ಕಾರ್ಕಳದ ಎ.ಎನ್.ಎಫ್ ತಂಡದ ಸಿಬ್ಬಂದಿಗಳು ಕಾವಲು ಕಾಯುತ್ತಿದ್ದಾರೆ. ರಾತ್ರಿ ಹಾಗು ಹಗಲು ಇಲ್ಲಿ ಕಾವಲು ವ್ಯವಸ್ಥೆ ಮಾಡಲಾಗಿದ್ದು ಸ್ಥಳ ಅಗೆದು ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೆ ಈ ತಂಡ ಕಾವಲು ಮುಂದುವರಿಸಲಿದೆ.
ಧರ್ಮಸ್ಥಳ ಸ್ನಾನಘಟ್ಟದ ಸಮೀಪ ದಟ್ಟ ಅರಣ್ಯದ ನಡುವೆ ನಡೆಯುತ್ತಿದೆ ಸ್ಥಳ ಪರಿಶೀಲನೆ.
ಬೆಳ್ತಂಗಡಿ: ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ದಟ್ಟ ಅರಣ್ಯದ ನಡುವೆ ಎಸ್.ಐ.ಟಿ ತಂಡದ ಅಧಿಕಾರಿಗಳು ಸಾಕ್ಷಿ ದೂರುದಾರನ್ನನ್ನು ಕರೆದೊಯ್ದಿದ್ದು ಸ್ಥಳ ಪರಿಶೀಲನೆ ನಡೆಸುತ್ತುದ್ದಾರೆ.ಮಧ್ಯಾಹ್ನದ ವೇಳೆ ಬಿಗು ಪೊಲೀಸ್ ಬಂದೋಬಸ್ತ್ ನಲ್ಲಿ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟಕ್ಕೆ ಸಾಕ್ಷಿ ದೂರುದಾರನನ್ನು ಕರೆತಂದರು.ಸ್ನಾನಘಟ್ಟದ ಸಮೀಪವೇ ಒಂದು ಸ್ಥಳವನ್ನು ಆತ ತೋರಿಸಿದ್ದು ಅದನ್ನು ಗುರುತಿಸಿ ಟೇಪ್ ಹಾಕಿದ್ದಾರೆ. ಬಳಿಕ ಇದೀಗ ತಂಡ ದಟ್ಟ ಅರಣ್ಯದಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಕಳೆದ ಸುಮಾರು ಒಂದು ಗಂಟೆಯದ ಅರಣ್ಯದಲ್ಲಿ ಪರಿಶೀಲನಾ ಕಾರ್ಯ ನಡೆಯುತ್ತಿದೆ.ಈ ಕಾಡಿನ ಒಳಗೆ ಆತ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ...
ಇಂದು ತಲೆಬುರುಡೆಯ ಸ್ಥಳ ಮಹಜರು ಪ್ರಕ್ರಿಯೆ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮತ್ತು ಎಸ್ಪಿ ಸೈಮನ್ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮನ; ಅರಣ್ಯ ಇಲಾಖೆಯ ರೇಂಜರ್ ತ್ಯಾಗರಾಜ್ ಎಸ್.ಐಟಿ ಕಚೇರಿಯಲ್ಲಿ
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಬುರುಡೆ ತೆಗೆದ ಜಾಗದಲ್ಲಿ ಎಸ್.ಐ.ಟಿ ಅಧಿಕಾರಿಗಳು ದೂರುದಾರನ ಜೊತೆ ಜುಲೈ28 ರಂದು ಹೋಗಿ ಸ್ಥಳ ಮಹಜರು ನಡೆಸಲಿದ್ದಾರೆ. ಮೊದಲು ಎಸ್.ಐ.ಟಿ ಅಧಿಕಾರಿಗಳು ಬೆಳ್ತಂಗಡಿ ಕಚೇರಿಗೆ ಬಂದಿದ್ದು. ದೂರುದಾರನನ್ನು ಕರೆಸಿಕೊಂಡಿದ್ದು ಕೆಲವು ದಾಖಲೆಗಳಿಗೆ ದೂರುದಾರ ಸಹಿ ಹಾಕಿ ಬಳಿಕ ಬಿಗಿ ಭದ್ರತೆಯಲ್ಲಿ ಧರ್ಮಸ್ಥಳದಲ್ಲಿ ಬುರುಡೆ ತೆಗೆದ ಜಾಗಕ್ಕೆ ಹೋಗ ಮಹಜರು ನಡೆಸಲಿದ್ದಾರೆ.
ಧರ್ಮಸ್ಥಳ ಬೊಳಿಯಾರಿನಲ್ಲಿ ಬೆಳಗ್ಗೆ ಶಾಲಾ ಮಕ್ಕಳತ್ತ ನುಗ್ಗಿದ ಕಾಡಾನೆ; ಭಯದಲ್ಲಿ ನಾಗರಿಕರು
ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ಬೊಳಿಯರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ ರಸ್ತೆಗೆ ಕಾಡಾನೆ ಬಂದಿದ್ದು ರಸ್ತೆಯಲ್ಲಿ ಬಸ್ ಕಾಯುತ್ತಿದ್ದ ಮಕ್ಕಳು ಸಾರ್ವಜನಿಕರು ಓಡಿ ತಪ್ಪಿಸಿಕೊಂಡು ಓಡಿದ್ದಾರೆ. ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಈ ವೇಳೆ ರಸ್ತೆಯಲ್ಲಿ ಯಾವುದೇ ವಾಹನವೂ ಓಡಾಡುತ್ತಿರಲಿಲ್ಲ ಎಂದು ಸ್ಥಳೀಯ ರು ಮಾಹಿತಿ ನೀಡಿದ್ದಾರೆ.ಕಳೆದ ಒಂದು ವಾರದಿಂದ ಇಲ್ಲಿ ಕಾಡಾನೆ ತಿರುಗಾಟ ನಡೆಸುತ್ತಿದ್ದು ಜನರು ಭಾಯದಲ್ಲಿ ಬದುಕುತ್ತಿದ್ದಾರೆ.
ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಭಗೀರಥ ಜಿ ಆಯ್ಕೆ
ಬೆಳ್ತಂಗಡಿ; ತಾಲೂಕಿನ ಪ್ರತಿಷ್ಠಿತ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಭಗೀರಥ ಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷರಾಗಿ ಜಗದೀಶ್ಚಂದ್ರ ಡಿ.ಕೆ ಅವರು ಆಯ್ಕೆಯಾಗಿದ್ದಾರೆ.ತಾಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಬಿ.ವಿ ಪ್ರತಿಮಾ ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ನಿರ್ದೇಶಕ ರುಗಳು ಉಪಸ್ಥಿತರಿದ್ದರು.
ಎಸ್.ಐ.ಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿ ಮಂಗಳೂರಿಗೆ ಆಗಮನ ಸಾಕ್ಷಿ ದೂರು ದಾರನ ವಿಚಾರಣೆ ಆರಂಭ
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಎಸ್.ಐ.ಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿಯವರು ಖುದ್ದು ದೂರುದಾರನ ವಿಚಾರಣೆ ನಡೆಸಲು ಜುಲೈ 27 ರಂದು 12 ಗಂಟೆಗೆ ಮಂಗಳೂರು ಐಬಿಗೆ ಆಗಮಿಸಿದ್ದಾರೆ. ಇದರ ಜೊತೆಗೆ ದೂರುದಾರ ಕೂಡ ತನ್ನ ಇವತ್ತು ಮೂವರು ವಕೀಲರ ಜೊತೆ ಕಾರಿನಲ್ಲಿ ಬಂದು ತನಿಖೆಗೆ ಹಾಜರಾಗಿದ್ದಾನೆ.ಬೆಳಗ್ಗೆ 10.30ರ ಸಮಾರಿಗೆ ಸಾಕ್ಷಿ ದೂರುದಾರ ತನ್ನ ವಕೀಲರೊಂದಿಗೆ ಮಂಗಳೂರಿನ ಎಸ್..ಐ.ಟಿ ಕಚೇರಿಗೆ ಬಂದಿದ್ದಾನೆ 12 ಗಂಟೆಯ ಸುಮಾರಿಗೆ ಪ್ರಣವ್ ಕುಮಾರ್ ಮೊಹಂತಿ ಅವರು ಕಚೇರಿಗೆ ಆಗಮಿಸಿದ್ದು ಆತನಿಂದ...
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಎಸ್.ಐ.ಟಿ ವಿಚಾರಣೆ ಮುಗಿಸಿ ವಾಪಸ್
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಜುಲೈ 26 ರಂದು ಮಂಗಳೂರು ಐಬಿ ಯಲ್ಲಿ ಎಸ್.ಐ.ಟಿ ತನಿಖೆಗೆ ದೂರುದಾರ ವ್ಯಕ್ತಿ ಇಬ್ಬರು ವಕೀಲರ ಜೊತೆ ಬೆಳಗ್ಗೆ 11 ಗಂಟೆಗೆ ಹಾಜರಾಗಿದ್ದು ಸಂಜೆ 7:30 ಕ್ಕೆ ವಿಚಾರಣೆ ಮುಗಿಸಿ ವಕೀಲರ ಜೊತೆ ವಾಪಸ್ ತೆರಳಿರುವುದಾಗಿ ತಿಳಿದು ಬಂದಿದೆ. ಸುಮಾರು 8 ಗಂಟೆ 30 ನಿಮಿಷಗಳ ಕಾಲ ಎಸ್.ಐ.ಟಿ ಅಧಿಕಾರಿಗಳೊಂದಿಗೆ ಈತ ಕಳೆದಿದ್ದು ಎಲ್ಲ ವಿಚಾರಗಳಬಗ್ಗೆ ವಿಚಾರಣೆಗೆ ನಡೆಸಿದ್ದಾರೆ. ಇದೀಗ ಈತ ವಕೀಲರುಗಳೊಂದಿಗೆ ಹಿಂತಿರುಗಿದ್ದು ಎಸ್.ಐ.ಟಿ ಅಧಿಕಾರಿಗಳ ಮುಂದಿನನಡೆ ಏನು...
ನಡಗ್ರಾಮದಲ್ಲಿ ಗಾಳಿ ಮಳೆಗೆ ಹಾನಿಯಾದ ಮನೆಗಳಿಗೆ ರಕ್ಷಿತ್ ಶಿವರಾಂ ಭೇಟಿ
ಬೆಳ್ತಂಗಡಿ; ನಡ ಗ್ರಾಮದ ಲತೀಫ್ ಅವರ ಮನೆಯು ತೀವ್ರ ಸ್ವರೂಪದ ಗಾಳಿ ಮಳೆಗೆ ಸಂಪೂರ್ಣ ಕುಸಿದಿದ್ದು ಬಿದ್ದಿದ್ದು ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರು ಅಝರ್ ನಾವೂರು. ಸ್ಥಳೀಯ ಕಾಂಗ್ರೆಸ್ ಮುಖಂಡ ಝಕೀರ್. ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಉಪಾಧ್ಯಕ್ಷರು ನವೀನ್ ಗೌಡ ಸವಣಾಲು .ಹಾಗೂ ಸ್ಥಳೀಯರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಕುವೆಟ್ಟು ರಸ್ತೆಗೆ ಬಿದ್ದ ಹೆಮ್ಮರ ಸಂಚಾರ ಅಸ್ತವ್ಯಸ್ತ
ಬೆಳ್ತಂಗಡಿ: ತಾಲೂಕಿನಾದ್ಯಂತ ಭಾರೀ ಗಾಳಿ ಮಳೆಗೆ ಕುವೆಟ್ಟು ಗ್ರಾಮದ ವರಕಬೆ ಬಳಿ ರಸ್ತೆಗೆ ಬೃಹತ್ ಗಾತ್ರದ ಮರಬಿದ್ದು ರಸ್ತೆ ಸಂಪೂರ್ಣ ಬ್ಲಾಕ್ ಆದ ಘಟನೆ ಇಂದು (ಜು. 26) ನಡೆದಿದೆ. ರಸ್ತೆ ಸಂಪೂರ್ಣ ಬ್ಲಾಕ್ ಆಗಿದ್ದು, ವಾಹನ ಸವರಾರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರು ಸೇರಿ ತೆರವು ಕಾರ್ಯ ನಡೆಯುತ್ತಿದೆ.
ಬೆಳ್ತಂಗಡಿ : ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹುತಾತ್ಮ ವೀರ ಯೋಧ ಏಕನಾಥ್ ಶೆಟ್ಟಿಯವರ ಪುತ್ಥಳಿಗೆ ನುಡಿ ನಮನ
ಬೆಳ್ತಂಗಡಿ :ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಬೆಳ್ತಂಗಡಿ ಯುವ ಮೋರ್ಚಾ ವತಿಯಿಂದ ಜುಲೈ 26 ರಂದು ವೀರ ಯೋಧರಿಗೊಂದು ನಮನ ಕಾರ್ಯಕ್ರಮದ ಸಲುವಾಗಿ ಹುತಾತ್ಮ ವೀರ ಯೋಧ ಏಕನಾಥ್ ಶೆಟ್ಟಿಯವರ ಮನೆಯಲ್ಲಿ ಅವರ ಪುತ್ಥಳಿಗೆ ಗೌರವ ನಮನ ಹಾಗೂ ನುಡಿ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಯೋಧ ಏಕನಾಥ್ ಶೆಟ್ಟಿಯವರ ಪತ್ನಿ ಜಯಂತಿ ಶೆಟ್ಟಿ,ಮಗ ಅಕ್ಷಯ್, ಬೆಳ್ತಂಗಡಿ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಮಂಡಲ ಯುವಮೋರ್ಚಾ ಉಪಾಧ್ಯಕ್ಷರಾದ ಗಣೇಶ್....















