ಎಂಟನೆ ಸ್ಥಳದಲ್ಲಿಯೂ ಸಿಗದ ಅವಶೇಷಗಳು
ಬೆಳ್ತಂಗಡಿ; ಶುಕ್ರವಾರ ನೇತ್ರಾವತಿ ಸ್ನಾನಘಟ್ಟದಲ್ಲಿ ಅಗೆದ ಎರಡನೆಯ ಸ್ಥಳದಲ್ಲಿಯೂ ಯಾವುದೆ ಅವಶೇಷಗಳು ಪತ್ತೆಯಾಗಿರುವುದಿಲ್ಲ ಎಂದು ತಿಳಿದು ಬಂದಿದೆ.ಸುಮಾರು ಎರಡು ಗಂಟೆಗಳ ಕಾಲ ಇಲ್ಲಿ ಕಾರ್ಯಾಚರಣೆ ನಡೆಅಇ ಹುಡುಕಿದರೂ ಯಾವುದೆ ಅವಶೇಷಗಳು ಕಂಡುಬರಲಿಲ್ಲ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ
ಏಳನೆ ಸ್ಥಳದಲ್ಲಿ ಲಭಿಸದ ಕಳೆಬರ; ಎಂಟನೆ ಸ್ಥಳ ಅಗೆಯಲು ಸಿದ್ದತೆ
ಬೆಳ್ತಂಗಡಿ; ಸಾಕ್ಷಿ ದೂರುದಾರ ಗುರುತಿಸಿದ ಏಳನೆಯ ಸ್ಥಳದಲ್ಲಿ ಯಾವುದೇ ಕಳೆಬರಗಳು ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.ನದಿಬದಿಯಲ್ಲಿಯೇ ಇದ್ದ ಏಳನೆ ಸ್ಥಳದಲ್ಲಿ ಶುಕ್ರವಾರ ಬೆಳಗ್ಗೆ ಎಸ್.ಐ.ಟಿ ತಂಡ ಕಾರ್ಮಿಕರನ್ನು ಉಪಯೋಗಿಸಿ ಅಗೆಯುವ ಕಾರ್ಯ ಆರಂಭಿಸಿದ್ದು ಅಗತ್ಯ ಬಂದರೆ ಉಪಯೋಗಿಸಲು ಹಿಟಾಚಿಯನ್ನು ಇಟ್ಟುಕೊಂಡಿದ್ದಾರೆ.ಆದರೆ ಅಗೆಯವ ಸಂದರ್ಭದಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ
ಬೆಳ್ತಂಗಡಿ : ಐದನೇ ದಿನದ ಕಾರ್ಯಾಚರಣೆಗೆ ಬಂದ ಎಸ್.ಐ.ಟಿ ತಂಡ
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ದಿನ ಆಗಸ್ಟ್1 ರಂದು 11:30 ಗಂಟೆಗೆ ನೇತ್ರಾವತಿ ಅರಣ್ಯ ಪ್ರದೇಶಕ್ಕೆ ಎಸ್.ಐ.ಟಿ ಅಧಿಕಾರಿಗಳು ದೂರುದಾರನನ್ನು ಕರೆದುಕೊಂಡು ಬಂದು ಪೌರಕಾರ್ಮಿಕರಿಂದ ಮತ್ತು ಮಿನಿ ಜೆಸಿಬಿಯಿಂದ 7 ನೇ ಗುರುತು ಮಾಡಿದ ಜಾಗದಲ್ಲಿ ಕಾರ್ಯಾಚರಣೆ ಮಾಡಲು ಇಳಿದಿದ್ದಾರೆ. ಐಪಿಎಸ್ ಜಿತೇಂದ್ರ ಕುಮಾರ್ ದಯಾಮ, ಎಸ್ಪಿ ಸೈಮನ್ , ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಸಾಮಾಜಿಕ ಅರಣ್ಯ ಇಲಾಖೆಯ ಡಿಸಿಎಫ್ ರೋಷಿನಿ, ಐ.ಎಸ್.ಡಿ ವಿಭಾಗ, ಎಫ್.ಎಸ್.ಎಲ್ ವಿಭಾಗ ,ಕಂದಾಯ ವಿಭಾಗ...
ಛತ್ತೀಸ್ ಗಡ್ ನಲ್ಲಿ ಕ್ರೈಸ್ತ ಸನ್ಯಾಸಿನಿಯರ ಬಂಧನ, ದೌರ್ಜನ್ಯ ಆ 3 ರಂದು ಬೆಳ್ತಂಗಡಿ ಯಲ್ಲಿ ಬೃಹತ್ ಪ್ರತಿಭಟನೆ
ಬೆಳ್ತಂಗಡಿ: ಛತ್ತೀಸ್ ಗಡ್ ನಲ್ಲಿ ಕ್ರೈಸ್ತ ಧರ್ಮದ ಸನ್ಯಾಸಿನಿಯರನ್ನು ಅನ್ಯಾಯವಾಗಿ ಬಂಧಿಸಿರುವುದನ್ನು ವಿರೋಧಿಸಿ ಕ್ರೈಸ್ತರ ವಿರುದ್ದ ದೇಶದಾದ್ಯಂತ ನಡೆಯುತ್ತಿರುವ ದಾಳಿಗಳನ್ನು ಖಂಡಿಸಿ ಕಥೋಲಿಕ್ ಸಭಾ ಬೆಳ್ತಂಗಡಿ ವಲಯ ಹಾಗೂ ಕೆ.ಎಸ್.ಎಂ.ಸಿ ಎ ಬೆಳ್ತಂಗಡಿ, ಕ್ರೈಸ್ತ ಸಂಘಟನೆಗಳ ಒಕ್ಕೂಟ ಬೆಳ್ತಂಗಡಿ ಇದರ ನೇತೃತ್ವದಲ್ಲಿ ನ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆ 3 ಭಾನುವಾರ ನಡೆಸಲಾಗುವುದು ಎಂದು ಸಂಘಟನೆಯ ಮುಖಂಡರುಗಳು ತಿಳಿಸಿದ್ದಾರೆ.ಆಗಸ್ಟ್ 3 ರಂದು ಸಂಜೆ 4ಗಂಟೆಗೆ ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ ನಿಂದ ಬೆಳ್ತಂಗಡಿ ಸಿ.ಎಸ್.ಐ ಚರ್ಚ್ ನ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ...
ತುಳು ಅಧಿಕೃತ ಭಾಷೆ : ಆಂಧ್ರ ಪ್ರದೇಶಕ್ಕೆ ಅಧ್ಯಯನ ತಂಡ: ಸರಕಾರದ ಆದೇಶ
ಬೆಳ್ತಂಗಡಿ; ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳ ಬಗ್ಗೆ ಆಂಧ್ರಪ್ರದೇಶ ರಾಜ್ಯಕ್ಕೆ ತೆರಳಿ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಸಮಿತಿಯನ್ನು ರಚಿಸಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ಸಹಿತ 5 ಮಂದಿಯ ತಂಡವನ್ನು ಎರಡನೇ ಭಾಷೆಯನ್ನು ಅಧಿಕೃತ ಭಾಷೆ ಎಂದು ಘೋಷಿಸಲು ಅನುಸರಿಸಿರುವ ಮಾನದಂಡಗಳ ಅಧ್ಯಯನ ಮಾಡುವ ಸಲುವಾಗಿ ರಚನೆ ಮಾಡಲಾಗಿದೆ.ಆಂಧ್ರ ಪ್ರದೇಶಕ್ಕೆ ಅಧ್ಯಯನ ನಡೆಸಲು ನಿಯೋಜಿಸಿರುವ ಸಮಿತಿಯ ಅಧ್ಯಕ್ಷರಾಗಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಗಾಯಿತ್ರಿ...
ಸ್ನಾನಘಟ್ಟದಲ್ಲಿ ಪತ್ತೆಯಾದ ಪಾನ್ ಕಾರ್ಡ್ ಮೂಲ ಹುಡುಕಿದ ಎಸ್.ಐ.ಟಿ
ಬೆಳ್ತಂಗಡಿ: ಹೆಣ ಹೂತಿಟ್ಟಿದ್ದೇನೆಂದು ಹೇಳಿರುವ ವ್ಯಕ್ತಿ ಗುರುತಿಸಿದ ಮೊದಲ ಜಾಗದಲ್ಲಿ ಪತ್ತೆಯಾಗಿದ್ದ ಪ್ಯಾನ್ ಕಾರ್ಡ್ ಬಗ್ಗೆ ಎಸ್. ಐ. ಟಿ ಅಧಿಕಾರಿಗಳು ಮಾಹಿತಿ ಕಲೆಹಾಕಿರುವುದಾಗಿ ತಿಳಿದು ಬಂದಿದೆ. ಅದು 2025ರಲ್ಲಿ ಸತ್ತ ಪುರುಷನ ಪ್ಯಾನ್ ಕಾರ್ಡ್ ಆಗಿದ್ದು, ಆತ ತನ್ನಹಳ್ಳಿಯ ಮನೆಯಲ್ಲಿ ಜಾಂಡೀಸ್ ನಲ್ಲಿ ಮೃತನಾಗಿದ್ದಾನೆಂದು, ಎಸ್‌ಐಟಿ ಅಧಿಕಾರಿಗಳು ಆತನ ತಂದೆಯನ್ನು ಸಂಪರ್ಕಿಸಿದಾಗ ಮಾಹಿತಿ ಸಿಕ್ಕಿರುವುದಾಗಿ ಎಸ್. ಐ. ಟಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ
ಸ್ನಾನಘಟ್ಟದಲ್ಲಿ ಪತ್ತೆಯಾದ ಪಾನ್ ಕಾರ್ಡ್ ಮೂಲ ಹುಡುಕಿದ ಎಸ್.ಐ.ಟಿ
ಬೆಳ್ತಂಗಡಿ: ಹೆಣ ಹೂತಿಟ್ಟಿದ್ದೇನೆಂದು ಹೇಳಿರುವ ವ್ಯಕ್ತಿ ಗುರುತಿಸಿದ ಮೊದಲ ಜಾಗದಲ್ಲಿ ಪತ್ತೆಯಾಗಿದ್ದ ಪ್ಯಾನ್ ಕಾರ್ಡ್ ಬಗ್ಗೆ ಎಸ್. ಐ. ಟಿ ಅಧಿಕಾರಿಗಳು ಮಾಹಿತಿ ಕಲೆಹಾಕಿರುವುದಾಗಿ ತಿಳಿದು ಬಂದಿದೆ. ಅದು 2025ರಲ್ಲಿ ಸತ್ತ ಪುರುಷನ ಪ್ಯಾನ್ ಕಾರ್ಡ್ ಆಗಿದ್ದು, ಆತ ತನ್ನಹಳ್ಳಿಯ ಮನೆಯಲ್ಲಿ ಜಾಂಡೀಸ್ ನಲ್ಲಿ ಮೃತನಾಗಿದ್ದಾನೆಂದು, ಎಸ್‌ಐಟಿ ಅಧಿಕಾರಿಗಳು ಆತನ ತಂದೆಯನ್ನು ಸಂಪರ್ಕಿಸಿದಾಗ ಮಾಹಿತಿ ಸಿಕ್ಕಿರುವುದಾಗಿ ಎಸ್. ಐ. ಟಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ
ಆರನೆಯ ಸ್ಥಳದಲ್ಲಿ ಅವಶೇಷಗಳು ಪತ್ತೆ
ಬೆಳ್ತಂಗಡಿ; ನೇತ್ರಾವತಿ ಸ್ನಾನ ಘಟ್ಟದ ಸಮೀಪ ನಡೆಯುತ್ತಿರುವ ಮೃತದೇಹಗಳ ಹುಡುಕಾಟದಲ್ಲಿ ಆರನೆಯ ಸ್ಥಳದಲ್ಲಿ ಕೆಲವು ಅವಶೆಷಗಳು ಸಿಕ್ಕಿರುವುದಾಗಿ ಮಾಹಿತಿ ಲಭ್ಯವಾಗುತ್ತಿದೆ.ಈ ವಿಚಾರವನ್ನು ಇನ್ನೂ ಎಸ್.ಐ.ಟಿ ತಂಡ ಖಚಿತ ಪಡಿಸಿಲ್ಲ.ಕೆಲವು ಎಲುಬಿನ ಚೂರುಗಳು ಇಲ್ಲಿ ಲಭಿಸಿರುವ ಬಗ್ಗೆ ಎಸ್.ಐ.ಟಿ ತಂಡ ಖಚಿತ ಪಡಿಸಿದೆ
ಹೆಣ ಹೂತು ಹಾಕಿದ ಪ್ರಕರಣ; 3ನೇ ದಿನದ ಶೋಧ ಕಾರ್ಯಾಚರಣೆ ಆರಂಭ
ಬೆಳ್ತಂಗಡಿ, ಜು.31: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ 3ನೇ ದಿನಕ್ಕೆ ಕಾಲಿಟ್ಟಿದೆ.ಎಸ್ಐಟಿ ಅಧಿಕಾರಿಗಳು ಗುರುವಾರ ಪೂರ್ವಾಹ್ನ 11:30ರ ಸುಮಾರಿಗೆ ನೇತ್ರಾವತಿ ಸ್ನಾನಘಟ್ಟದಲ್ಲಿ 3ನೇ ದಿನದ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಇದೀಗ ನೇತ್ರಾವತಿ ನದಿಯ ಬದಿಯಲ್ಲಿಯೇ ಅಗೆಯುವ ಕಾರ್ಯ ನಡೆಯುತ್ತಿದೆ. ಈ ವರೆಗೆ ಅಗೆದಿರುವ ಎಲ್ಲ ಸ್ಥಳಗಳೂ ನದಿ ಬದಿಯಲ್ಲಿಯೇ ಇದ್ದು, ಎಲ್ಲೂ ಮೃತದೇಹದ ಅವಶೇಷಗಳು ಪತ್ತೆಯಾಗಿಲ್ಲ. ಈ ನಡುವೆ ಅಗೆಯುವ ಕಾರ್ಯಾಚರಣೆ 3ನೇ ದಿನಕ್ಕೆ ಕಾಲಿಟ್ಟಿದೆ....
ಬೆಳ್ತಂಗಡಿ ತಾಲೂಕು ಮಟ್ಟದ ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಮೂರು ಕೋಟಿ ಅನುದಾನ; ಸಚಿವರಿಗೆ ಅಭಿನಂದನೆ
ಬೆಳ್ತಂಗಡಿ.ಬೆಳ್ತಂಗಡಿ ತಾಲೂಕು ಮಟ್ಟದ ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಮೂರು ಕೋಟಿ ಅನುದಾನ ವನ್ನು ಮಂಜೂರು ಗೊಳಿಸಿದ, ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ ರವರಿಗೆ ಇಂದು ಬೆಂಗಳೂರಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬೆಳ್ತಂಗಡಿಯ ದಲಿತ ಮುಖಂಡರುಗಳಾದ ಬಿ.ಕೆ ವಸಂತ್ ಬೆಳ್ತಂಗಡಿ, ವೆಂಕಣ್ಣ ಕೊಯ್ಯಾರು, ಸಂಜೀವ ಆರ್, ಬೆಳ್ತಂಗಡಿ, ರಮೇಶ್ ಆರ್ ಬೆಳ್ತಂಗಡಿ, ಎಸ್ ಪ್ರಭಾಕರ್ ಶಾಂತಿಕೋಡಿ ಓಡಿಲ್ನಾಳ ಉಪಸ್ಥಿತರಿದ್ದರು.













