ಧರ್ಮಸ್ಥಳದಲ್ಲಿ ಯಾಂತ್ರೀಕೃತ ಕೃಷಿಗೆ ಡಾ.ಹೆಗ್ಗಡೆಯವರಿಂದ ಚಾಲನೆ
ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಸೋಮವಾರ ಧರ್ಮಸ್ಥಳದ ಗದ್ದೆಯಲ್ಲಿ ಯಾಂತ್ರೀಕೃತ ಕೃಷಿಗೆ ಚಾಲನೆ ನೀಡಲಾಯಿತು.ಯಾಂತ್ರೀಕೃತ ಕೃಷಿಯಿಂದ ರೈತರು ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ಮತ್ತು ಲಾಭ ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿ ಹೆಗ್ಗಡೆಯವರು ಶುಭ ಹಾರೈಸಿದರು.ಯಂತ್ರಶ್ರೀ ಯೋಜನೆಯಲ್ಲಿ ರಾಜ್ಯದ 96 ೯೬ ತಾಲ್ಲೂಕುಗಳಲ್ಲಿ 44119 ರೈತರನ್ನು ಪ್ರೇರೆಪಿಸಿ 1,00,254 ಎಕ್ರೆ ಕೃಷಿ ಭೂಮಿಯನ್ನು ಈಗಾಗಲೆ ಹದಗೊಳಿಸಲಾಗಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿವಾಹಕ ನಿರ್ದೇಶಕ ಅನಿಲ್ ಕುಮಾರ್ ತಿಳಿಸಿದರು.
ಎಸ್.ಎಂ.ಎ ವತಿಯಿಂದ ನೂತನ ಮದರಸ ಕಟ್ಟಡ ಉದ್ಘಾಟನೆ
ಬೆಳ್ತಂಗಡಿ: ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಕರ್ನಾಟಕ ರಾಜ್ಯ ಸಮಿತಿಯ ಮದರಸ ನಿರ್ಮಾಣ ಯೋಜನೆಯಡಿಯಲ್ಲಿ ಗುರುವಾಯನಕೆರೆ ಸಮೀಪದ ಪೆರಳ್ದರಕಟ್ಟೆಯ ಕಾಂತಿಜಾಲ್ ಎಂಬಲ್ಲಿ ನಿರ್ಮಾಣಗೊಂಡ ಎಸ್ ಎಂ ಎ 3ನೇ ಮದರಸದ ಉದ್ಘಾಟನೆ ನಡೆಯಿತು.ಎಸ್ ಎಂ ಎ ರಾಜ್ಯ ಸಮಿತಿಯ ಅಧ್ಯಕ್ಷರಾದ ಸೆಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ನೂತನ ಮದರಸ ಕಟ್ಟಡವನ್ನು ಉದ್ಘಾಟಿಸಿದರು.ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಉದ್ಘಾಟಿಸಿದರು. ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಹಾಜಿ ಕೊಡುಂಗಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಜೆ...
ಬಂದಾರು; ಮುಂಡೂರಿನಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ; ಶಾಸಕ ಹರೀಶ್ ಪೂಂಜ ಭೇಟಿ
ಬಂದಾರು : ತಾಲೂಕಿನಲ್ಲಿ ಸುರಿಯುತ್ತಿರುವ ವಿಪರೀತ ಮಳೆಯ ಪರಿಣಾಮ ಬಂದಾರು ಗ್ರಾಮ ಮೈರೋಳ್ತಡ್ಕ ಮುಂಡೂರು ನಿವಾಸಿ ಗಿರಿಯಪ್ಪರವರ ಮನೆಗೆ ಬೃಹತ್ ಗಾತ್ರದ ಗುಡ್ಡ ಕುಸಿದು ಮನೆಗೆ ಹಾನಿಯಾಗಿದ್ದು ವಾಸಕ್ಕೆ ತುಂಬಾ ಕಷ್ಟ ಸಾಧ್ಯವಾಗಿದ್ದು ಮರ, ಹಾಗೂ ಗುಡ್ಡ ಕುಸಿದು ಮನೆಗೆ ಸಂಪೂರ್ಣ ಹಾನಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಪರಿಶೀಲನೆ ನಡೆಸಿ,ಆರ್ಥಿಕ ಸಹಾಯ ನೀಡಿ, ಸರಕಾರದಿಂದ ಶೀಘ್ರ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ,...
ಪುದುವೆಟ್ಟು ಅಕ್ರಮ ಮದ್ಯ ಮಾರಾಟ ಕೇಂದ್ರಕ್ಕೆ ಪೊಲೀಸ್ ದಾಳಿ ಆರೋಪಿ ವಶಕ್ಕೆ
ಬೆಳ್ತಂಗಡಿ : ಅಕ್ರಮವಾಗಿ ಮಧ್ಯ ಸಂಗ್ರಹಿಸಿ ಮನೆಯ ತೋಟದಲ್ಲಿ ಶೇಖರಿಟ್ಟು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವೊಂದನ್ನು ಧರ್ಮಸ್ಥಳ ಪೊಲೀಸರು ಪತ್ತೆಹಚ್ವಿ ಮದ್ಯವಶಪಡಿಸಿಕೊಂಡು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಬೆಳ್ಳನಾರು ನಿವಾಸಿ ಪುರುಷೋತ್ತಮ ಎಂಬಾತನ ಮನೆಯ ತೋಟದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಮದ್ಯ ಸಂಗ್ರಹಿಸಿಟ್ಟ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಜೂ.16 ರಂದು ಸಂಜೆ 6 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಸಮರ್ಥ ಆರ್ ಗಾಣಿಗೇರ ಮತ್ತು ಸಿಬ್ಬಂದಿ ಪುರುಷೋತ್ತಮ ಎಂಬಾತನ...
ಬೆಳ್ತಂಗಡಿ; ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ; 28ದೂರುಗಳ ಸಲ್ಲಿಕೆ
ಬೆಳ್ತಂಗಡಿ : ಕಂದಾಯ, ತಾಲೂಕು ಪಂಚಾಯತ್, ಅರಣ್ಯ, ಕೋಪರೇಟಿವ್ ಸೊಸೈಟಿ, ಸಮಾಜ ಕಲ್ಯಾಣ, ಸರ್ವೇ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಬಗ್ಗೆ ಒಟ್ಟು 28 ದೂರುಗಳು ಸಲ್ಲಿಕೆಯಾಗಿದ್ದು ಈ ಪೈಕಿ ಎರಡು ದೂರುಗಳನ್ನು ಫಾರ್ಮ್ 1,2ರಲ್ಲಿ ರಿಜಿಸ್ಟರ್ ಮಾಡಿ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ಇನ್ನೂ ಉಳಿದ ದೂರಗಳಿಗೆ ಕಾಲಮಿತಿಯಲ್ಲಿ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಲೋಕಾಯುಕ್ತ ಪ್ರಭಾರ ಅಧೀಕ್ಷಕ ಕುಮಾರಚಂದ್ರ ಹೇಳಿದರು. ಜೂ.16ರಂದು ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ನಡೆದ "ಲೋಕಾಯುಕ್ತ ಜನ ಸಂಪರ್ಕ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,...
ದಿಡುಪೆ ರಸ್ತೆಗೆ ಮರ ಬಿದ್ದು ವಾಹನ ಸಂಚಾರ ಸ್ಥಗಿತ
ಬೆಳ್ತಂಗಡಿ; ಕಾಜೂರಿನಿಂದ ದಿಡುಪೆಗೆ ಹೋಗುವ ರಸ್ತೆಗೆ ಭಾರೀ ಮಳೆಗೆ ಹೆಮ್ಮರವೊಂದು ಉರುಳಿ ಬಿದ್ದು ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.ಬಳಿಕ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು. ಪ್ರತಿದಿನ ಹತ್ತಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಮರ ಬಿದ್ದಾಗ ರಸ್ತೆಯಲ್ಲಿ ಯಾವುದೇ ವಾಹನಗಳಿರದಿದ್ದ ಕಾರಣ ಅನಾಹುತ ತಪ್ಪಿದೆ.
ಬೆಳ್ತಂಗಡಿ; ಸವಣಾಲು ಹಿತ್ತಲಪೇಲ ನದಿಯಲ್ಲಿ ಕೊಚ್ಚಿ ಹೋದ ಬೈಕ್ ಸವಾರರು. ಪವಾಡ ಸದೃಶ ಪಾರು
ಬೆಳ್ತಂಗಡಿ; ಸವಣಾಲು ಗ್ರಾಮದ ಹಿತ್ತಿಲಪೇಲ ಕೂಡುಜಾಲು ಸಮೀಪದ ನದಿಯಲ್ಲಿ ಯುವಕರೀರ್ವರು ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿ ಪವಾಡ ಸದೃಶ ರೀತಿಯಲ್ಲಿ ಬದುಕಿ ಉಳಿದ ಘಟನೆ ಆದಿತ್ಯವಾರ ನಡೆದಿದೆ. ಸವಣಾಲು ಗ್ರಾಮದ ಮಂಜದಬೆಟ್ಟುವಿನಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಪ್ರದೇಶವನ್ನು ಸಂಪರ್ಕಿಸುವ ಕೂಡುಜಾಲು ಎಂಬಲ್ಲಿ ಹರಿಯುತ್ತಿರುವ ಹಿತ್ತಿಲಪೇಲ ಪ್ರದೇಶದ ಕೆಳಗಿನ ಪೇಲ ಎಂಬಲ್ಲಿನ ನಿವಾಸಿ ಕರಿಯ ಮಲೆಕುಡಿಯ ಎಂಬವರ ಮಗ ಸತೀಶ್ ಮತ್ತು ಸಹ ಸವಾರ ಸುಳ್ಯೋಡಿ ನಿವಾಸಿ ಸಂಜೀವ ಪೂಜಾರಿ ಎಂಬವರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಈ ನದಿಯನ್ನು ಬೈಕ್ ಸಮೇತ...
ಸುಲ್ಕೇರಿ; ಮಳೆಹಾನಿ ಪ್ರದೇಶಕ್ಕೆ ಶಾಸಕ ಹರೀಶ್ ಪೂಂಜ ಭೇಟಿ
ಬೆಳ್ತಂಗಡಿ; ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಸುಲ್ಕೇರಿ ಗ್ರಾಮದ ಮುಳ್ಳಗುಡ್ಡೆ ನಿವಾಸಿ ಯಮುನಾ ಅಣ್ಣು ಪೂಜಾರಿಯವರ ಮನೆಯ ಮೇಲ್ಭಾವಣಿಗೆ ಹಾನಿಯಾಗಿದ್ದು ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಸಂತ್ರಸ್ತರಿಗೆ ವೈಯಕ್ತಿಕ ಸಹಾಯ ನೀಡಿದರು,ಸರಕಾರದಿಂದ ಶೀಘ್ರ ಪರಿಹಾರ ಒದಗಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು
ನೆಲ್ಯಾಡಿ ಲಾವತ್ತಡ್ಕದಲ್ಲಿ ನಿಲ್ಲಿಸಿದ್ದ ಹಿಟಾಚಿಗೆ ಖಾಸಗಿ ಬಸ್ ಡಿಕ್ಕಿ ಓರ್ವ ಸಾವು ಹಲವರಿಗೆ ಗಾಯ
ಬೆಳ್ತಂಗಡಿ; ನಿಲ್ಲಿಸಿದ್ದ ಹಿಟಾಚಿಗೆ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಹಲವರು ಗಂಭೀರ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ರವಿವಾರ ತಡ ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಕಾರ್ಕಳ ಹೆರ್ಮುಂಡೆ ನಿವಾಸಿ ಶಂಕರ ನಾರಾಯಣ ಭಟ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಸ್ವೀಪರ್ ಬಸ್ ಲಾವತ್ತಡ್ಕ ಎಂಬಲ್ಲಿ ಹೆದ್ದಾರಿ ಬದಿ ಲಾರಿಯಲ್ಲಿ ನಿಲ್ಲಿಸಲಾಗಿದ್ದ ಹಿಟಾಚಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಹತ್ತಕ್ಕೂ ಹೆಚ್ವು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಗಂಭೀರ ಗಾಯಗೊಂಡ...
ರೆಖ್ಯ; ಮನೆಯಲ್ಲಿ ಇರಿಸಲಾಗಿದ್ದ 2.60ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ
ಬೆಳ್ತಂಗಡಿ : ಮನೆಯ ಕಪಾಟಿನಲ್ಲಿಟ್ಟಿದಚಿನ್ನಾಭರಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿದ ಘಟನೆ ಜೂ.14 ರಂದು ಬೆಳ್ತಂಗಡಿಯ ರೆಖ್ಯಾದಲ್ಲಿ ಬೆಳಕಿಗೆ ಬಂದಿದೆ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಘಟನಾ ಸ್ಥಳಕ್ಕೆ ಧರ್ಮಸ್ಥಳ ಸಬ್ ಇನ್ಸೆಕ್ಟರ್ ಸಮರ್ಥ ಆರ್ ಗಾಣಿಗೇರ ಮತ್ತು ತಂಡ,ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದು.ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.ಚಿನ್ನ ಕಳೆದುಕೊಂಡಿರುವ ಕುಸುಮರವರು ತನ್ನ ಗಂಡ ಅಣ್ಣಿ @ ಆನಂದ ಗೌಡ ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ಕಟ್ಟೆ ಎಂಬಲ್ಲಿ ವಾಸವಿದ್ದು ಇಬ್ಬರು ದಿನಾ...















