ಬೆಳ್ತಂಗಡಿ; ಕಲ್ಪತರು ನರ್ಸಿಂಗ್ ಸ್ಕೂಲ್ನಲ್ಲಿ ಲ್ಯಾಂಪ್ ಲೈಟಿಂಗ್ ಮತ್ತು ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ
ಬೆಳ್ತಂಗಡಿ; ಕಲ್ಪತರು ನರ್ಸಿಂಗ್ ಸ್ಕೂಲ್ ಜೂನ್ 23 ರಂದು ಶ್ರದ್ಧೆಯೊಂದಿಗೆ ಲ್ಯಾಂಪ್ ಲೈಟಿಂಗ್ ಮತ್ತು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಲಾರೆನ್ಸ್ ಮುಕ್ಕುಯಿಯವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ತಮ್ಮ ಆಶೀರ್ವಚನ ನೀಡಿ ಮಾತನಾಡುತ್ತಾ “ನೀವು ಇಂದು ಈ ದೀಪವನ್ನು ಮಾತ್ರವಲ್ಲ, ರೋಗಿಗಳಿಗಾಗಿ ಪ್ರೀತಿಯ ದೀಪವನ್ನೂ ಬೆಳಗಿಸಲು ಕರೆಹೊಂದಿದವರಾಗಿದ್ದೀರಿ. ಈ ಸೇವೆಗೆ ಸಮರ್ಪಿತ ಮನಸ್ಸು ಅತ್ಯಗತ್ಯ. ಈ ದೀಪ ನಿಮ್ಮ ಜೀವನದ ದಿಕ್ಕನ್ನು ತೋರಿಸುವ ಬೆಳಕು ಆಗಲಿ” ಎಂದು ಆಶೀರ್ವದಿಸಿದರು.ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಂಜಾತ್,...
ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿಯಿರುವ ವ್ಯಕ್ತಿ ಠಾಣೆಗೆ ಶರಣಾಗತಿ; ಎಸ್.ಪಿ ಸ್ಪಷ್ಟನೆ
ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಪ್ರಕರಣಗಳ ಬಗ್ಗೆ ವ್ಯಕ್ತಿಯೊಬ್ಬ ಧರ್ಮಸ್ಥಳ ಠಾಣೆಗೆ ಬಂದು ಮಾಹಿತಿ ನೀಡುತ್ತಾನೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಬಗ್ಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಸ್ಪಷ್ಟನೆ ನೀಡಿದ್ದಾರೆ.ಧರ್ಮಸ್ಥಳ ಪೊಲೀಸರು ಈ ಪತ್ರದ ಬಗ್ಗೆ ಸದ್ರಿ ವಕೀಲರುಗಳನ್ನು ಸಂಪರ್ಕಿಸಿದ್ದು ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಥ ಕೃತ್ಯಗಳ ಬಗ್ಗೆ ತನಗೆ ಮಾಹಿತಿಯಿರುವುದಾಗಿ ಹಾಗೂ ತಾನು ಪೊಲೀಸ್ ಠಾಣೆಗೆ ಶರಣಾಗಿ ಮಾಹಿತಿಯನ್ನು ನೀಡಲು ಸಿದ್ದನಿರುವುದಾಗಿ ತಿಳಿಸಿರುತ್ತಾರೆ. ಎಂದು ವಕೀಲರು ಪೊಲೀಸರುಲಿಗೆ ಮಾಹಿತಿ ನೀಡಿದ್ದಾರೆ....
ಬೆಳ್ತಂಗಡಿ; ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಲಾಯಿಲದ ಸಿರಿಲ್ ಜೋಸೆಪ್ ಗೆ ಚಿನ್ನದ ಪದಕ
ಬೆಳ್ತಂಗಡಿ; ಮಣಿಪಾಲ್ ನಲ್ಲಿ ನಡೆದ 9 ನೆಯ ರಾಷ್ಟ್ರೀಯ ಮಾಟ್ಟದ ಐಬಿಎಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ದೃಷ್ಟಿ ಸಮಸ್ಯೆ ಇರುವವರ ( visually impaired) ಸ್ಪರ್ಧೆಯಲ್ಲಿ ಲಾಯಿಲ ನಿವಾಸಿ ಸಿರಿಲ್ ಜೋಸೆಫ್ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.ಜೂನ್ 21 ಹಾಗೂ 22 ರಂದು ರಾಷ್ಟ್ರ ಮಟ್ಟದ ಈ ಪಂದ್ಯಾಟ ಮಣಿಪಾಲ್ ನಲ್ಲಿ ನಡೆದಿತ್ತು. ಸಿರಿಲ್ ಜೋಸೆಫ್ ಅವರು ಪ್ರಸ್ತುತ ಬೆಳ್ತಂಗಡಿಯ ಫಿಟ್ನೆಸ್ ಪಾರ್ಕ್ ಮಲ್ಟಿ ಜಿಮ್ ನಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಚ್ಚಿನ; ಪಾಲಡ್ಕ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ
ಮಚ್ಚಿನ :ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಝರ್ಸ್ ಲಿಮಿಟೆಡ್ ಪಣಂಬೂರು, ಮಂಗಳೂರು ಇದರ ಸಿ ಎಸ್ ಆರ್ ಆಕ್ಟಿವಿಟಿ 2024- 25 ರ ಮಂಗಳ ಅಕ್ಷರ ಮಿತ್ರ ಅಂಗನವಾಡಿ ನಿರ್ಮಾಣ ಯೋಜನೆ ಅಡಿಯಲ್ಲಿ 29ಲಕ್ಷ ಅನುದಾನದಲ್ಲಿ ಮಚ್ಚಿನ ಗ್ರಾಮದ ಪಾಲಡ್ಕ ಇಲ್ಲಿ ನಿರ್ಮಿಸಲಾದ ನೂತನ ಅಂಗನವಾಡಿ ಕೇಂದ್ರದ ಲೋಕಾರ್ಪಣಾ ಕಾರ್ಯಕ್ರಮ ಜೂ 22 ರಂದು ನೆರವೇರಿತು.ಎಂಸಿಎಫ್ ನ ಮುಖ್ಯ ಉತ್ಪಾದನಾಧಿಕಾರಿ ಎಸ್. ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಇವರು ನೂತನ ಅಂಗನವಾಡಿ ಕೇಂದ್ರವನ್ನು ಲೋಕಾರ್ಪಣೆಗೈದು ಶುಭ ಹಾರೈಸಿದರು....
ಬದ್ಯಾರ್ ರಿಕ್ಷಾ ಅಪಘಾತ ವ್ಯಕ್ತಿ ಸಾವು
ಬೆಳ್ತಂಗಡಿ; ಬದ್ಯಾರ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಆಟೋರಿಕ್ಷಾವೊಂದು ಮಗುಚಿ ಬಿದ್ದು ಗಂಭೀರವಾಗಿ ಗಾಯಗೊಂಡು ರಿಕ್ಷಾ ಚಾಲಕ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ.ಮೃತ ವ್ಯಕ್ತಿ ಮಾಲಾಡಿ ನಿವಾಸಿ ಶಿವಾನಂದ ಪಿ ಮಾಳವ (33) ಎಂಬವರಾಗಿದ್ದಾರೆ.ಗುರುವಾಯನಕೆರೆಯಿಂದ ಅಳದಂಗಡಿ ಗೆ ಪ್ರಯಾಣಿಸುತ್ತಿದ್ದ ವೇಳೆ ಆಟೋ ರಿಕ್ಷಾ ಅಪಘಾತ ಸಂಭವಿಸಿದೆ. ಕೂಡಲೇ ಗಂಭೀರವಾಗಿ ಗಾಯಗೊಂಡ ಇವರನ್ನು ಸ್ಥಳೀಯರ ಸಹಕಾರದೊಂದಿಗೆ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಆವೇಳೆಗೆ ಆತ ಮೃತ ಪಟ್ಟಿದ್ದ ಎನ್ನಲಾಗಿದೆ. ಆಟೋದಲ್ಲಿದ್ದ ಇನ್ನೊಬ್ಬರು ಗಾಯಗೊಂಡಿದ್ದು ಆವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು...
ಮುಂಡಾಜೆ:ವಿದ್ಯುತ್ ಶಾಕ್ ಗಬ್ಬದ ಹಸು ಸಾವು
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಗಬ್ಬದ ಹಸು ಸಾವನ್ನಪ್ಪಿದ ಘಟನೆ ನಡೆದಿದೆ.ಮುಂಡಾಜೆ ಗ್ರಾಮದ ಗುಂಡಿ ಸೇತುವೆ ಸಮೀಪ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಹಸುವಿನ ಕೊಂಬಿಗೆ ತಾಗಿದ್ದು ಈ ವೇಳೆ ತಂತಿಯನ್ನು ಎಳೆದಾಡಿದ ಹಸು ಶಾಕ್ ನಿಂದ ಸ್ಥಳದಲ್ಲೇ ಮೃತಪಟ್ಟಿತು.ಸ್ಥಳೀಯ ಕೊಂಬಿನಡ್ಕದ ಶಿವಪ್ಪ ಶೆಟ್ಟಿ ಎಂಬವರ 4ವರ್ಷ ಪ್ರಾಯದ ಹಸು ಇದಾಗಿದ್ದು,ಮೆಸ್ಕಾಂ ಅಧಿಕಾರಿಗಳು,ಪಶು ಇಲಾಖೆ ಅಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ದಲಿತ ಮುಖಂಡ ಚಂದು ಎಲ್ ರವರ ಪ್ರಥಮ ವರ್ಷದ ಪುಣ್ಯ ಸ್ಮರಣಾ ಕಾರ್ಯಕ್ರಮ
ಬೆಳ್ತಂಗಡಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ(ರಿ) ಇದರ ಸಂಘಟನಾ ಸಂಚಾಲಕರಾಗಿದ್ದಚಂದು ಎಲ್ ರವರಪ್ರಥಮ ವರ್ಷದ ಪುಣ್ಯ ಸ್ಮರಣೆಯು ಜೂ22ರಂದು ಬೆಳ್ತಂಗಡಿಯಶ್ರೀ ನಾರಾಯಣಗುರು ಸಭಾ ಭವನದಲ್ಲಿ ನೆರವೇರಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ(ರಿ) ಇದರ ತಾಲೂಕು ಪ್ರಧಾನ ಸಂಚಾಲಕ ರಮೇಶ್ ಆರ್ ಅಧ್ಯಕ್ಷತೆವಹಿಸಿದ್ದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ(ರಿ) ಇದರ ರಾಜ್ಯ ಸಂಘಟನಾ ಸಂಚಾಲಕರಾಗಿದ್ದ ಮಲ್ಲೇಶ್ ಅಂಬುಗ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಚಂದು ಎಲ್ ಅವರ ಒಡನಾಟದ ದಿನಗಳನ್ನು ಸ್ಮರಿಸಿಕೊಂಡು ಚಂದು ಅವರ ಅಭಿಮಾನಿಗಳಾಗಬೇಡಿ...
ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಆಳ್ವಾಸ್ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಬೆಳ್ತಂಗಡಿ; ಆಳ್ವಾಸ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಿಜಾರ್ ಮತ್ತು ರಾಜ್ಯ ಪ್ರಶಸ್ತಿ ಪಡೆದ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ 22.06.2025 ರಂದು ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸಭಾ ಭವನದಲ್ಲಿ ನಡೆಯಿತು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿ ಫ್ರೆಂಡ್ಸ್ ಕ್ಲಬ್ ಸದಾ ಗ್ರಾಮಸ್ಥರ ಆರೋಗ್ಯದ ಬಗ್ಗೆ ಒತ್ತುಕೊಟ್ಟು ಆಳ್ವಾಸ್ ಆಸ್ಪತ್ರೆವತಿಯಿಂದ ವಾರಕ್ಕೊಮ್ಮೆ ಅರೋಗ್ಯ ತಪಾಸಣೆ ಮತ್ತು ಉಚಿತ ಚಿಕಿತ್ಸೆ ಯ ಏರ್ಪಾಡು ಮಾಡುತ್ತಿದೆ.50 ವರ್ಷಗಳು ಮೇಲ್ಪಟ್ಟವರ ರಕ್ತದೊತ್ತಡ...
ಮಂಗಳೂರಿನಲ್ಲಿ ಅಪಘಾತ ಬೆಳ್ತಂಗಡಿ ಯ ವ್ಯಕ್ತಿ ಮೃತ್ಯು
ಬೆಳ್ತಂಗಡಿ; ಮಂಗಳೂರು ಬಳಿಯ ಫರಂಗಿಪೇಟೆಯಲ್ಲಿ ಶನಿವಾರ ಸಂಜೆ ನಡೆದ ಕಂಟೈನರ್ ಹಾಗೂ ದ್ವಿಚಕ್ರ ವಾಹನದ ನಡುವಿನ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಪುತ್ತಿಲ ನಿವಾಸಿವ ಇಬ್ರಾಹಿಂ ಎಂಬವರು ಮೃತಪಟ್ಟ ಘಟನೆ ಸಂಭವಿಸಿದೆ.ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ಸವಾರ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಳೆಂಜಿಬೈಲು ನಿವಾಸಿ ಇಬ್ರಾಹಿಮ್ ಎನ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುತ್ತಾರೆ.ಮೃತದೇಹ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿದೆ.
ತೋಟತ್ತಾಡಿ ನಿವಾಸಿ ರೋಸಮ್ಮ ಜೋಸೆಫ್ ನಿಧನ
ಬೆಳ್ತಂಗಡಿ; ತೋಟತ್ತಾಡಿ ನಿವಾಸಿ ಕುರುಪ್ಪನಾಟ್ ರೋಸಮ್ಮ ಜೋಸೆಫ್ (90ವ) ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತರು ಮಗ ಬಿಜು.ಕೆ ಜೋಸೆಫ್, ಸೊಸೆ ಶೀನಾ ಜೋಸೆಫ್, ಮಗಳು ಲಿನ್ಸಿ ಅಳಿಯ ಸಾಜನ್ , ಮಗಳು ಬಿನ್ಸಿ ಹಾಗು ಅಳಿಯ ರೆಜಿ ಮೊಮ್ಮಕ್ಕಳು ಹಾಗೂ ಅಪಾರ ಕುಟುಂಬ ವರ್ಗವನ್ನು ಅಗಲಿದ್ದಾರೆ.ಮೃತರ ಅಂತ್ಯ ಸಂಸ್ಕಾರ ಭಾನುವಾರ 3ಗಂಟೆಗೆ ತೋಟತ್ತಾಡಿ ಸೈಂಟ್ ಆಂಟನಿ ಫೊರೋನಾ ಚರ್ಚನಲ್ಲಿ ನಡೆಯಲಿದೆ.















