ಭಾರೀ ಮಳೆ ತುಂಬಿ ಹರಿದ ಕಪಿಲ ನದಿ ಶಿಶಿಲೇಶ್ವರ ದೇವಸ್ಥಾನ ಜಲಾವೃತ
ಬೆಳ್ತಂಗಡಿ: ತಾಲೂಕಿನಲ್ಲಿ ಇಂದು ಬಾರಿ ಮಳೆ ಸುರಿದ ಪರಿಣಾಮ ಬೆಳ್ತಂಗಡಿ ತಾಲೂಕಿನ ಶಶಿಲದ ಕಪಿಲ ನದಿಯಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಮತ್ಸ್ಯ ಕ್ಷೇತ್ರವೆಂದೇ ಪ್ರಸಿದ್ಧವಾಗಿರುವ ಶಿಶಿಲೇಶ್ವರ ದೇವಾಲಯಕ್ಕೆ ನೀರು ನುಗ್ಗಿದ್ದು ದೇವಸ್ಥಾನ ಜಾಲಾವೃತಗೊಂಡಿದೆ. ನದಿನೀರಿನ ಮಟ್ಟ ಏರಿಕೆಯಾದ ಪರಿಣಾಮ ನದಿ ನೋರು ಗರ್ಭಗುಡಿ ಪ್ರವೇಶಿಸಿದೆ. ಪಕ್ಕದಲ್ಲೇ ಇರುವ ಕಿಂಡಿ ಆಣೆಕಟ್ಟು (ದೇವಳದ ಸಂಪರ್ಕ ರಸ್ತೆ) ನೀರಿನಿಂದ ಸಂಪೂರ್ಣ ಮುಳುಗಡೆ ಗೊಂಡಿದ್ದು ಅಲ್ಲಿರುವ ತೂಗು ಸೇತುವೆ ವರೆಗೂ ನೀರು ಹರಿಯುತ್ತಿದೆ.ನೀರು ಪ್ರವಾಹದ ರೀತಿ ಹರಿಯುತ್ತಿರುವುದರಿಂದ ಆ ಭಾಗದ ಜನರಿಗೆ ಸಂಚಾರಕ್ಕೆ ಕಷ್ಟವಾಗಿದೆ . ಮಳೆ...
ಬೆಳ್ತಂಗಡಿ; ದಾರಿ ತಪ್ಪಿ ಬಂದ ಗೇರುಕಟ್ಟೆಗೆ ಬಂದ ಕಾಜೂರಿನ ವೃದ್ದೆಯನ್ನು ಸುರಕ್ಷಿತವಾಗಿ ಮನೆ ಸೇರಿಸಿದ ಅಬ್ದುಲ್ ಕರೀಂ
ಬೆಳ್ತಂಗಡಿ; ತಾಲೂಕಿನ ಕಾಜೂರು ಸಮೀಪದ ನಿವಾಸಿ ಸುಮಾರು 85 ವರ್ಷ ಪ್ರಾಯದ ಅಲಿಮಮ್ಮ ಎಂಬವರು ಸಂಬಂಧಿಕರ ಮನೆ ಬೋಳಿಯಾರಿಗೆಂದು ಒಬ್ಬರೇ ಕಾಜೂರಿನಿಂದ ಹೊರಟವರು ಬೆಳ್ತಂಗಡಿಯಿಂದ ದಿಕ್ಕು ತಪ್ಪಿ ಪುತ್ತೂರುಗೆ ಹೋಗುವ ಸರಕಾರಿ ಎಕ್ಸ್ ಪ್ರೆಸ್ ಬಸ್ಸಿಗೆ ಹತ್ತಿದರು. ವಯೋವೃದ್ದೆಯ ಮಾತು ಕಂಡಕ್ಟರ್ ಗೆ ಅರ್ಥವಾಗದೇ ಗೇರುಕಟ್ಟೆಯಲ್ಲಿ ಇಳಿಸಿಬಿಟ್ಟರು.ಈ ವೃದ್ದೆಗೆ ದಿಕ್ಕು ದೋಚದಾಯಿತು.ಬಸ್ಸಿನಲ್ಲಿ ಪುತ್ತೂರು ಕಡೆ ಪ್ರಯಾಣಿಸುತ್ತಿದ್ದ ಈ ಹಿಂದೆ ಬೆಳ್ತಂಗಡಿ ಠಾಣೆಯಲ್ಲಿ ಫೋಲಿಸ್ ಆಗಿದ್ದ ಸದ್ರಿ ಮಂಗಳೂರಿನ ಸೈಬರ್ ಕ್ರೈಮ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಸತೀಶ್ ಹಾಗೂ ಸಾಮಾಜಿಕ ಕಾರ್ಯಕರ್ತ ಬೆಳಾಲಿನ...
‘ದಸ್ಕತ್’ ತುಳು ಚಿತ್ರಕ್ಕೆ ಪ್ರಶಸ್ತಿಗಳ ಹಿರಿಮೆ; ಈ ವರ್ಷದ ಉತ್ತಮ ತುಳು ಚಲನಚಿತ್ರ ದಸ್ಕತ್.
ಬೆಳ್ತಂಗಡಿ; ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಸಭಾಭವನದಲ್ಲಿ ನಡೆದ ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ 2025 ನಲ್ಲಿ ದಸ್ಕತ್ ಸಿನೆಮಾವು ಈ ವರ್ಷದ ಉತ್ತಮ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.ಇದೆ ಸಿನೆಮಾದ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಉತ್ತಮ ನಿರ್ದೇಶಕ ಪ್ರಶಸ್ತಿ ಮತ್ತು ಉತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಹಾಗೂ ಸಂತೋಷ್ ಆಚಾರ್ಯ ಗುಂಪಲಾಜೆ ಉತ್ತಮ ಛಾಯಾಗ್ರಾಹಕ, ದೀಕ್ಷಿತ್ ಕೆ ಪೂಜಾರಿ ಉತ್ತಮ ನಟ, ಯಶ್ ಶೆಟ್ಟಿ ಉತ್ತಮ ಖಳ ನಟ, ಸಮರ್ಥನ್ ರಾವ್ ಉತ್ತಮ ಹಿನ್ನೆಲೆ ಸಂಗೀತ, ಉತ್ತಮ ಪೋಷಕ ನಟ ಮೋಹನ್ ಶೆಣೈ...
ಧರ್ಮಸ್ಥಳ ಕನ್ಯಾಡಿ ಯುವಕ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ; ಧರ್ಮಸ್ಥಳ ಕನ್ಯಾಡಿಯ ಮತ್ತಿಲ ನಿವಾಸಿ ಶಿವರಾಜ್ ಮತ್ತಿಲ(33) ತನ್ನ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂನ್ 23ರಂದು ಸಂಭವಿಸಿದೆ.ಈತ ಕೂಲಿ ಕೆಲಸ ಮಾಡಿಕೊಂಡಿದ್ದ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈತ ಈ ಹಿಂದೆಯೂ ಆತ್ಮಹತ್ಯೆಗೆ ವಿಫಲ ಪ್ರಯತ್ನ ನಡೆಸಿದ್ದ ಎನ್ನಲಾಗಿದೆ ಧರ್ಮಸ್ಥಳ ಪೊಲೋಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಜಿರೆ ಪೇಟೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಬೆಳ್ತಂಗಡಿ; ಉಜಿರೆ ಪೇಟೆಯಲ್ಲಿ ಮಂಗಳವಾರ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರ ಉಜಿರೆ ಪೇಟೆಯಲ್ಲಿ ಮೃತದೇಹ ಪತ್ತೆಯಾಗಿದ್ದು ಗ್ರಾಮಪಂಚಾಯತು ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಮಾರು 45ರಿಂದ 50ವರ್ಷ ಪ್ರಯಾದ ವ್ಯಕ್ತಿಯ ಮೃತದೇಹ ಇದಾಗಿದ್ದು ಎಡ ಕೈಯಲ್ಲಿ G MAHESH ಎಂದೂ ಬಲ ಕೈಯಲ್ಲಿ ABGTK ಎಂದೂ ಬರೆಯಲಾಗಿದೆ.ಮೃತರ ವಾರಿಸುದಾರರು ಯಾರಾದರೂ ಇದ್ದಲ್ಲಿ ಬೆಳ್ತಂಗಡಿ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಬೆಳ್ತಂಗಡಿ; ಕೊಯ್ಯೂರು ನಿವಾಸಿ ಮಹಿಳೆ ನಾಪತ್ತೆ
ಬೆಳ್ತಂಗಡಿ: ಕೊಯ್ಯರು ಮಲೆಬೆಟ್ಟು ನಿವಾಸಿಯಾಗಿರುವ ರಝೀನ(24ವ) ಎಂಬವರು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಿ.ಸಿ.ರೋಡಿನ ಕಾರಿಂಜದ ಮಹಮ್ಮದ್ ಸಲೀಂ ಎಂಬವರ ಪತ್ನಿಯಾದ ರಝೀನರ 2ವರ್ಷದ ಮಗ 40 ದಿನಗಳ ಹಿಂದೆ ಸಾವನ್ನಪ್ಪಿದ್ದರು. ಬಳಿಕ ಅವರು ಕೊಯ್ಯರಿನ ತಾಯಿ ಮನೆಯಲ್ಲಿದ್ದರು. ರಝೀನ 22-06-2025ರಂದು ಸಂಜೆ 4.00ಗಂಟೆಗೆ ಗಂಡನ ಮನೆಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋಗಿದ್ದಳು ಆದರೆ ಆಕೆ ಗಂಡನ ಮನೆಗೆ ಹೋಗದಿರುವುದರಿಂದ ಸಂಬಂಧಿಕರು,ಸ್ನೇಹಿತರ ಮನೆಯಲ್ಲಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ರಝೀನ ಮನೆಯವರು ಬೆಳ್ತಂಗಡಿ ಠಾಣೆಯಲ್ಲಿ ದೂರು...
ನೆರಿಯ: ಸಾಕು ನಾಯಿ ಮೇಲೆ ಚಿರತೆ ದಾಳಿ
ಬೆಳ್ತಂಗಡಿ:ಮನೆಯಂಗಳ ಪ್ರವೇಶಿಸಿದ ಚಿರತೆ ಸಾಕುನಾಯಿಯ ಮೇಲೆ ದಾಳಿ ಮಾಡಿದ ಘಟನೆ ನೆರಿಯದಲ್ಲಿ ನಡೆದಿದೆ.ಇಲ್ಲಿನ ಅಂಕೊತ್ಯಾರ್ ಎಂಬಲ್ಲಿ ಸಿಜು ಎಂಬವರ ಮನೆಯಂಗಳಕ್ಕೆ ಜೂ. 24ರ ಮುಂಜಾನೆ 3.30ರ ಸುಮಾರಿಗೆ ಚಿರತೆ ಆಗಮಿಸಿದ್ದು ನಾಯಿ ಮೇಲೆ ದಾಳಿ ಮಾಡಿದಾಗ ಅದು ಬೊಬ್ಬೆ ಹೊಡೆಯುವ ಶಬ್ದಕ್ಕೆ ಮನೆಯವರು ಎಚ್ಚೆತ್ತು ಹೊರಗೆ ಬರುತ್ತಿದ್ದಂತೆ ನಾಯಿಯನ್ನು ಗಾಯಗೊಳಿಸಿ ಚಿರತೆ ಸಮೀಪದ ಅರಣ್ಯದತ್ತ ಹೋಗಿದೆ ಎಂದು ಮನೆಯವರು ತಿಳಿಸಿದ್ದಾರೆ.ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ನೆರಿಯ ಶಾಖೆಯ ಡಿಆರ್ ಎಫ್ ಒ ರವಿಚಂದ್ರ,ಚಿಬಿದ್ರೆ ಶಾಖೆಯ ಡಿಆರ್ ಎಫ್ ಒ ನಾಗೇಶ್...
ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ ಮತ್ತು ಅಧಿಕಾರಿಗಳಿಗೆ ಬೆದರಿಕೆ ವಿರುದ್ಧ ಬೆಳ್ತಂಗಡಿಯಲ್ಲಿ ಎಸ್‌ಡಿಪಿಐ ಪ್ರತಿಭಟನೆ
ಬೆಳ್ತಂಗಡಿ (ಜೂ-24): ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ ಮತ್ತು ಅಧಿಕಾರಿಗಳಿಗೆ ಬೆದರಿಕೆ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಯಿತು. ಸರಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಮುಸ್ಲಿಮರು ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿ ತಮ್ಮ ಹೆಸರಿಗೆ ಜಮೀನು ನೋಂದಣಿ ಮಾಡುವಂತೆ ಅಧಿಕಾರಿಗಳಲ್ಲಿ ಕೋರಿದ ಹಿನ್ನಲೆಯಲ್ಲಿ ಈ ಕುರಿತು ರೈತರು ಮಹದೇವಪುರದಲ್ಲಿ ಶ್ರೀರಂಗ ಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಜೊತೆ ನಡೆದ ಸಭೆಯಲ್ಲಿ, ಮುಸ್ಲಿಮರಿಗೆ ಕಂದಾಯ ಇಲಾಖೆ ಅಧಿಕಾರಿಗಳು...
ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ವತಿಯಿಂದ ನಮಿತಾ ಪೂಜಾರಿ ಅವರಿಗೆ ಅಭಿನಂದನೆ.
ಬೆಳ್ತಂಗಡಿ. ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ವಾದ ನಮಿತಾ ಪೂಜಾರಿ ಅವರಿಗೆ ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ವತಿಯಿಂದ ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಸಭಾಂಗಣದಲ್ಲಿ ಅಭಿನಂದನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲಿಯನ್, ಜಿಲ್ಲಾ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಶೇಖರ್ ಕುಕ್ಕೆಡಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ, ಪಕ್ಷದ ಪ್ರಮುಖರಾದ ಶ್ರೀಮತಿ ಲೋಕೇಶ್ವರಿ ವಿನಯ...
ಅಳದಂಗಡಿ; ಡೋಂಗ್ರೇ ಕುಟುಂಬಸ್ಥರು ಕೊಡಮಾಡುವ ಶೈಕ್ಷಣಿಕ ಪರಿಕರಗಳ 17 ನೇ ವರ್ಷದ ಉಚಿತ ವಿತರಣಾ ಸಮಾರಂಭ
ಬೆಳ್ತಂಗಡಿ: ಡೋಂಗ್ರೇ ಕುಟುಂಬಸ್ಥರು ಕೊಡಮಾಡುವ ಶೈಕ್ಷಣಿಕ ಪರಿಕರಗಳ 17 ನೇ ವರ್ಷದ ಉಚಿತ ವಿತರಣಾ ಸಮಾರಂಭ ಸೋಮವಾರ ನಾಲ್ಕೂರು ಗ್ರಾಮದ ಸೂಳಬೆಟ್ಟು ಸ.ಕಿ.ಪ್ರಾ.ಶಾಲೆಯಲ್ಲಿ ನಡೆಯಿತು.ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಭಾರತೀಯ ದಂತ ವೈದ್ಯಕೀಯ ಸಂಘ( ಐ.ಡಿ.ಎ.)ದ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ರೋಟರಿ ನಿಯೋಜಿತ ಅಧ್ಯಕ್ಷ ಉಜಿರೆ ಎಸ್.ಡಿ.ಎಂ.ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಫ್ರೊ. ಪಿ.ಪಿ.ಪ್ರಭು ಉದ್ಘಾಟಿಸಿದರು.ಐ.ಡಿ.ಎ.ಪುತ್ತೂರು ಘಟಕದ ಅಧ್ಯಕ್ಷೆ ಡಾl ಆಶಾ ಪಿದಮಲೆ, ಬೆಳ್ತಂಗಡಿ ಸ್ವಾತಿ ದಂತ ಚಿಕಿತ್ಸಾಲಯದ ಡಾl ಶಶಿಧರ ಡೋಂಗ್ರೆ, ಬಳಂಜ ಗ್ರಾ.ಪಂ.ಮಾಜಿ ಅಧ್ಯಕ್ಷ ವಿಶ್ವನಾಥ ಡೋಂಗ್ರೆ , ಡಾl ರಾಘವೇಂದ್ರ...















