ಧರ್ಮಸ್ಥಳದಲ್ಲಿ 27 ನೇ ವರ್ಷದ ಭಜನಾ ಕಮ್ಮಟ: ಉದ್ಘಾಟನೆ
ಭಜನೆಯಿಂದ ಉತ್ತಮ ಸಂಸ್ಕಾರಯುತ ಆರೋಗ್ಯಪೂರ್ಣ ಸಮಾಜ ನಿರ್ಮಾಣ.ಬೆಳ್ತಂಗಡಿ: ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಪರಿಶುದ್ಧ ದೇಹ ಮತ್ತು ಮನಸಿನಿಂದ ರಾಗ, ತಾಳ, ಲಯಬದ್ಧವಾಗಿ ಭಜನೆ ಮಾಡುವುದರಿಂದ ಉತ್ತಮ ಸಂಸ್ಕಾರಯುತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮೂಡಬಿದ್ರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.ಅವರು ಭಾನುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ 27 ನೇ ವರ್ಷದ ಭಜನಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.ಭಜನೆಯಿಂದ ಸುಲಭದಲ್ಲಿ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು, ಭಜನೆಯಿಂದ ಜನಜಾಗೃತಿ ಉಂಟಾಗಿ ಎಲ್ಲರೂ ಸಮಾನರಾಗಿ, ಗುರು-ಹಿರಿಯರಿಂದ ಮಾರ್ಗದರ್ಶನ, ಪ್ರೇರಣೆ ಪಡೆದು ದೃಢಭಕ್ತಿ ಮತ್ತು...
ಬೆಳ್ತಂಗಡಿ : ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಬೆಳ್ತಂಗಡಿ ಕಚೇರಿಗೆ; ನಾಳೆಯಿಂದ ತನಿಖೆಯಲ್ಲಿ ಆಗಲಿದೆ ಮಹತ್ವದ ಬೆಳವಣಿಗೆ
ಬೆಳ್ತಂಗಡಿ : ಎಸ್.ಐ.ಟಿ ಮುಖ್ಯಸ್ಥ ಪ್ರವವ್ ಮೊಹಂತಿ ಸೆ.14 ರಂದು ಬೆಳಗ್ಗೆ 11:40 ಕ್ಕೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ. ಜೊತೆಯಲ್ಲಿ ಐಪಿಎಸ್ ಜಿತೇಂದ್ರ ಕುಮಾರ್ ದಯಾಮ, ಎಸ್.ಪಿ ಸನ್ ಕೂಡ ಆಗಮಿಸಿದ್ದಾರೆ. ಬೆಳ್ತಂಗಡಿ ಎಸ್.ಐ.ಟಿ ಕಚೇರಿಯಲ್ಲಿ ಪ್ರಣವ್ ಮೊಹಂತಿ ಅವರು ಅಧಿಕಾರಿಗಳೊಂದಿಗೆ ಮಹತ್ವದ ಸಭೆಗಳನ್ನು ನಡೆಸಲಿರುವುದಾಗಿ ತಿಳಿದು ಬಂದಿದೆ.ಸಾಕ್ಷಿ ದೂರುದಾರ ತಂದಿದ್ದ ತಲೆಬುರುಡೆಯ ವಿಚಾರದಲ್ಲಿ ತನಿಖೆ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಈಗಾಗಲೆ ಕಳೆದ ಎರಡು ವಾರಗಳಿಂದ ಈ ಬಗ್ಗೆಯೇ ತನಿಖೆ ನಡೆಯುತ್ತಿತ್ತು. ತನಿಖೆ ಬಳಿಕವಿಠಲ ಗೌಡ ಅವರೊಂದಿಗೆ ಸ್ಥಳತನಿಖೆಯನ್ನು ನಡೆಸಲಾಗಿದ್ದು ಪ್ರದೀಪ್ ನ...
ಮಾಲಾಡಿ; ಶಾಸಕ ಹರೀಶ್ ಪೂಂಜ ಅವರಿಂದ ಪೆರ್ಡೆ ಕ್ರಾಸ್ ನಿಂದ ಊರ್ಲ 1 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಉದ್ಘಾಟನೆ
ಬೆಳ್ತಂಗಡಿ; ಮಾಲಾಡಿ ಗ್ರಾಮ ಊರ್ಲ ಪರಿಸರದ ನಾಗರಿಕರ ಹಲವು ದಶಕಗಳ ಬೇಡಿಕೆಯಾದ ಪೂಂಜಾಲಕಟ್ಟೆ ನೈನಾಡ್ ಸಂಪರ್ಕ ರಸ್ತೆಯಲ್ಲಿ ಪೇರ್ಡೆಯಿಂದ ಊರ್ಲದವರೆಗಿನ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯಯ ಪೂರ್ಣಗೊಂಡಿದ್ದು ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ಅವರು ಸೆ 14ರಂದು ನೆರವೇರಿಸಿದರು.
ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದುಕೊಂಡ ಶಾಕ ಹರೀಶ್ ಪೂಂಜ
ಬೆಳ್ತಂಗಡಿ; ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬೆಳ್ತಂಗಡಿಗೆ ಆಗಮಿಸಿದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಶ್ರೀ ಜೈನಮಠ ಶ್ರವಣಬೆಳಗೊಳ ಇವರನ್ನು ಭೇಟಿ ಮಾಡಿದ ಶಾಸಕ ಹರೀಶ್ ಪೂಂಜ ಅವರು ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರೂ ಇದ್ದರು
ಕೆ.ಪಿ.ಸಿ.ಸಿ ಕಾರ್ಮಿಕ ಘಟಕದ ದ.ಕ ಮತ್ತು ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ಅಬ್ದುಲ್ ರಹಿಮಾನ್ ಪಡ್ಪು ನೇಮಕ
ಬೆಳ್ತಂಗಡಿ; ಕೆ.ಪಿ.ಸಿ.ಸಿ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಅಬ್ದುಲ್ ರಹಿಮಾನ್ ಪಡ್ಪು ರವರನ್ನು ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಮಾನ್ಯ ಡಿ.ಕೆ.ಶಿವಕುಮಾರ್ ಮತ್ತು ಕೆ.ಪಿ ಸಿ.ಸಿ.ಕಾರ್ಯಾಧ್ಯಕ್ಷರಾದ ಜೆ.ಇ.ಚಂದ್ರಶೇಖರ್ ರವರ ಆದೇಶದಂತೆ,ರಾಜ್ಯ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ಕಾರ್ಮಿಕ ಘಟಕದ ದ.ಕ ಮತ್ತು ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಕೆ ಪುಟ್ಟಸ್ವಾಮಿಗೌಡ ನೇಮಕಗೊಳಿಸಿರುತ್ತಾರೆ. ಮುಂದಿನ ದಿನಗಳಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಮಿಕ ಘಟಕದ ಬ್ಲಾಕ್ ಪದಾಧಿಕಾರಿಗಳನ್ನು, ಬೂತ್ ಮಟ್ಟದ ಸಮಿತಿಯನ್ನು ,ಘಟಕದ ಎಲ್ಲಾ ವಿಭಾಗದ ಸಮಿತಿಯನ್ನು ರಚಿಸಿ...
ಸ್ನೇಹಮಯಿ ಕೃಷ್ಣ ವಿರುದ್ದ ಬೆಳ್ತಂಗಡಿ ಪೊಲೀಸರಿಗೆ ದೂರು
ಬೆಳ್ತಂಗಡಿ; 2012ರಲ್ಲಿ ಕೊಲೆಯಾದ ಸೌಜನ್ಯಳನ್ನು ಆಕೆಯ ಮಾವ ವಿಠಲ ಗೌಡ ಕೊಲೆ ಮಾಡಿದ್ದಾನೆ ಎಂದು ಆರೋಪ ಮಾಡಿ ಹೇಳಿಕೆ ನಿಡಿದ್ದ ಸ್ನೇಹಮಯಿ ಕೃಷ್ಣ ವಿರುದ್ದ ಬೆಳ್ತಂಗಡಿ ವೃತ್ತ ನಿರೀಕ್ಷಕರಿಗೆ ವೆಂಕಪ್ಪ ಕೋಟ್ಯಾನ್ ದೂರು ನೀಡಿದ್ದಾರೆ.ಸ್ನೇಹಮಯಿ ಕೃಷ್ಣ ಅವರು ವಿಠಲ ಗೌಡ ಅವರ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿ ಬಳಿಕ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದು ಇದು ಸೌಜನ್ಯ ಕೊಲೆಗಾರರನ್ನು ಪತ್ತೆ ಹಚ್ಚಬೇಕು ಎಂದು ನಡೆಯುತ್ತಿರುವ ಹೋರಾಟವನ್ನು ದಾರಿ ತಪ್ಪಿಸುವ ದುರುದ್ದೇಶದಿಂದ ಮಾಡಿರುವುದಾಗಿದೆ ಈತನನ್ನು ಮೈಸೂರಿನಿಂದ ಕರೆಸಿ ಈ ರೀತಿ ಹೇಳಿಕೆ ನೀಡಿರುವುದರ ಹಿಂದೆ...
ಮುಂಡಾಜೆ ಪ್ಯಾಕ್ಸ್ ಮಹಾಸಭೆ; 2.39 ಕೋಟಿ ರೂ. ಲಾಭ, ಶೇ.16 ಡಿವಿಡೆಂಟ್ ಘೋಷಣೆ
ಬೆಳ್ತಂಗಡಿ; "ಕಳೆದ ಆರ್ಥಿಕ ವರ್ಷದಲ್ಲಿ ಸಂಘವು 1,439 ಕೋಟಿ ರೂ. ವ್ಯವಹಾರ ನಡೆಸಿದ್ದು 2.39 ಕೋಟಿ ರೂ. ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಶೇ.16 ಡಿವಿಡೆಂಟ್ ನೀಡಲು ನಿರ್ಣಯಿಸಲಾಗಿದೆ" ಎಂದು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ ನಾರಾಯಣ್ ತಿಳಿಸಿದರು.ಮುಂಡಾಜೆ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಜರಗಿದ ಸಂಘದ 105ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂಘವು 6,071 ಮಂದಿ ಸದಸ್ಯರನ್ನು ಹೊಂದಿದ್ದು 7.96 ಕೋಟಿ ರೂ ಪಾಲು ಬಂಡವಾಳ ಹೊಂದಿದೆ. 77. 23 ಕೋಟಿ...
ಯುಟ್ಯೂಬರ್ ಅಭಿಷೇಕ್ ಮತ್ತೊಮ್ಮೆ ವಿಚಾರಣೆಗಾಗಿ ಎಸ್.ಐ.ಟಿ ಕಚೇರಿಗೆ ಹಾಜರು
ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್.ಐ.ಟಿ ಕಚೇರಿಗೆ ಯುಟ್ಯೂಬರ್ ಅಭಿಷೇಕ್ ವಿಚಾರಣೆಗಾಗಿ ಮತ್ತೆ ಸೆ.13ರಂದು ಮದ್ಯಾಹ್ನ ಹಾಜರಾಗಿದ್ದಾರೆ.ಒಂದುವಾರಕ್ಕೂ ಹೆಚ್ಚು ಕಾಲ ವಿಚಾರಣೆ ಎದುರಿಸಿದ್ದ ಅಭಿಷೇಕ್ ಹೇಳಿಕೆಗಳನ್ನು ನೀಡಿ ಬಳಿಕ ವಿಚಾರಣೆಗೆ ಕರೆದಾಹ ಹಾಜರಾಗುವಂತೆ ಸೂಚಿಸಿ ಕಳುಹಿಸಲಾಗಿತ್ತು. ಇದೀಗ ಶನಿವಾರ ಈತನನ್ನು ಮತ್ತೆ ವಿಚಾರಣೆಗಾಗಿ ಎಸ್.ಐ.ಟಿ ತಂಡ ಕರೆಸಿಕೊಂಡಿದೆ. ಬಂಗ್ಲೆ ಗುಡ್ಡದಿಂದ ಬುರುಡೆ ತೆಗೆದ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೆ ಪ್ರದೀಪ ನ್ಯಾಯಾಲಯದ ಮುಂದೆ ಹೇಳಿಕೆಯನ್ನು ನೀಡಿದ್ದಾನೆ ಇದಾದ ಬಳಿಕ ಇದೀಗ ವಿಠಲ ಗೌಡ ಹಾಗೂ ಅಭಿಷೇಕ್ ಅವರನ್ನು ಎಸ್.ಐ.ಟಿ ತಂಡ ವಿಚಾರಣೆಗಾಗಿ...
ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣ ವಿಚಾರಣೆಗೆ ಹಾಜರಾದ ಗಿರೀಶ್ ಮಟ್ಟಣ್ಣನವರ್, ಜಯಂತ್.ಟಿ ಹಾಗೂ ಪ್ರದೀಪ್
ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಂತರ ವಜಚಾರಣೆಯನ್ನು ಎಸ್.ಐ.ಟಿ ತಂಡ ನಡೆಸುತ್ತಿದ್ದು ಸೆ 13ರಂದು ವಿಚಾರಣೆಗಾಗಿ ಗಿರಿಶ್ ಮಟ್ಟಣ್ಣನವರ್ ಹಾಗೂ ಪ್ರದೀಪ್ ಹಾಗೂ ಜಯಂತ್.ಟಿ ಎಸ್.ಐ.ಟಿ ಕಚೇರಿಗೆ ಬಂದಿದ್ದಾರೆ.ಸೆ.12 ರಂದು ಪ್ರದೀಪ ನನ್ನು ನ್ಯಾಯಾಲಾಯಕ್ಕೆ ಕರೆದೊಯ್ದು ಆತನ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸಲಾಗಿತ್ತು. ಮುಚ್ಚಿ ಕೊಠಡಿಯಲ್ಲಿ ಪ್ರದೀಪನ ಹೇಳಿಕೆ ದಾಖಲಿಸಲಾಗಿತ್ತು.ಬಳಿಕ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು ಈ ಹಿನ್ನಲೆಯಲ್ಲಿ ಪ್ರದೀಪ್ ಇಂದು ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ. ಆತನೊಂದಿಗೆ ಗಿರೀಶ್ ಮಟ್ಟಣ್ಣನವರ್ ಹಾಗೂ ಜಯಂತ್.ಟಿ ಅವರು ಕೂಡಾ ವಿಚಾರಣೆಗೆ ಹಾಜರಾಗಿದ್ದಾರೆ.
ಸೆ. 14 ರಿಂದ 21 ರವರೆಗೆ ಧರ್ಮಸ್ಥಳದಲ್ಲಿ ಭಜನಾ ಕಮ್ಮಟ
ಉಜಿರೆ: ಧರ್ಮಸ್ಥಳದಲ್ಲಿ ಇಪ್ಪತ್ತೇಳನೆ ವರ್ಷದ ಭಜನಾ ಕಮ್ಮಟ ಸೆ. 14 ರಿಂದ 21 ರ ವರೆಗೆ ನಡೆಯಲಿದೆ ಎಂದು ಭಜನಾ ಕಮ್ಮಟದ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್ ಮತ್ತು ಕಾರ್ಯದರ್ಶಿ ಎ.ವಿ. ಶೆಟ್ಟಿ ತಿಳಿಸಿದ್ದಾರೆ.ಖ್ಯಾತ ಗಾಯಕರಾದ ಶಂಕರ್‌ಶಾನ್‌ಭಾಗ್, ಅರ್ಚನಾ ಉಡುಪ, ರಾಮಕೃಷ್ಣ ಕಾಟುಕುಕ್ಕೆ, ಉಷಾ ಹೆಬ್ಬಾರ್, ಮಣಿಪಾಲ, ಸೌಮ್ಯ ಸುಭಾಷ್, ಧರ್ಮಸ್ಥಳ, ಮಂಗಲದಾಸ ಗುಲ್ವಾಡಿ, ವಿದುಷಿ ಚೈತ್ರಾ, ಉಜಿರೆ, ಸುನಿಲ್ ಶೆಟ್ಟಿ, ಧರ್ಮಸ್ಥಳ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಕಮ್ಮಟದಲ್ಲಿ ಮಾಹಿತಿ, ಮಾರ್ಗದರ್ಶನ ನೀಡುವರು.ಪ್ರತಿ ದಿನ ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಧಾರ್ಮಿಕ ಉಪಾನ್ಯಾಸ,...















