ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ತಲವಾರು ಮತ್ತು ಬಂದೂಕು ಪತ್ತೆ; ಎಸ್.ಐ.ಟಿ ಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

0

ಬೆಳ್ತಂಗಡಿ : ಬುರುಡೆ ಚಿನ್ನಯ್ಯನ ಪ್ರಕರಣ ಸಂಬಂಧ ಎಸ್.ಐ.ಟಿ ಅಧಿಕಾರಿಗಳು ನ್ಯಾಯಾಲಯದಿಂದ ವಾರಂಟ್ ಪಡೆದು ಉಜಿರೆ ಮಹೇಶ್ ಶೆಟ್ಟಿ ಮನೆಯಲ್ಲಿ ಆಗಸ್ಟ್ 26 ರಂದು ಶೋಧ ಕಾರ್ಯ ನಡೆಸಿದಾಗ ಒಟ್ಟು 44 ವಸ್ತುಗಳನ್ನು ಮಹಜರು ನಡೆಸಿ ವಶಪಡಿಸಿಕೊಳ್ಳಲಾಗಿತ್ತು. ಈ ವೇಳೆ ಎರಡು ಮರದ ಹಿಂದು ಇರುವ ತಲವಾರ್ ಮತ್ತು ಒಂದು ಬಂದೂಕು ಪತ್ತೆಯಾಗಿತ್ತು. ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಲಾಗಿತ್ತು. ಈ ಸಂಬಂಧ ಎಸ್.ಐ.ಟಿ ಎಸ್ಪಿ ಸಿ.ಎ.ಸೈಮನ್ ಸೆ.16 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಅಕ್ರವಾಗಿ...

ಬೆಳ್ತಂಗಡಿ : ಬಂಗ್ಲೆಗುಡ್ಡೆಯಲ್ಲಿ ಮೂರು ತಲೆಬರುಡೆ ಪತ್ತೆ

0

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ‌ ಸಂಬಂಧಿಸಿದಂತೆ ನಡೆಯುತಗತಿರುವ  ಎಸ್.ಐ‌.ಟಿ ಕಾರ್ಯಾಚರಣೆಯಲ್ಲಿ  ನೇತ್ರಾವತಿ ಸ್ನಾನಘಟ್ಟದ ಸಮೀಪ ಬಂಗ್ಲೆ ಗುಡ್ಡದಲ್ಲಿ ಮೂರು ಮಾನವನ ತಲೆಬರುಡೆ ಹಾಗೂ ಒಂದು ಐಡಿ ಕಾರ್ಡ್ ಪತ್ತೆಯಾಗಿರುವುದಾಗಿ ಎಸ್.ಐ.ಟಿ ಮೂಲಗಳು ತಿಳಿಸಿದೆ. ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸೆ.16 ರಂದು 5 ಗಂಟೆ ವೇಳೆಗೆ ಎಸ್‌.ಐ.ಟಿ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಮಾನವನ ಮೂರು ತಲೆ ಬುರುಡೆ ಮತ್ತು ಒಂದು ಗಂಡಸ್ಸಿನ ಹಿರಿಯ ನಾಗರಿಕ ಐಡಿ ಕಾರ್ಡ್ ಪತ್ತೆಯಾಗಿದ್ದು ಮಹಜರು ಕಾರ್ಯ ನಡೆಸುತ್ತಿದ್ದಾರೆ.

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ನೇತ್ರಾವತಿ  ಬಂಗ್ಲೆ ಗುಡ್ಡೆಯಲ್ಲಿ ಒಂಬತ್ತು ಜಾಗದಲ್ಲಿ ಮಾನವನ ಅವಶೇಷಗಳು ಪತ್ತೆ

0

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಎಸ್‌.ಐ.ಟಿ ಕಾರ್ಯಾಚರಣೆ ವೇಳೆ ಒಂಬತ್ತು ಸ್ಥಳಗಳಲ್ಲಿ ಮಾನವನ ಮೂಳೆಗಳ ಅವಶೇಷಗಳು ಪತ್ತೆಯಾಗಿರುವುದಾಗಿ ಎಸ್‌.ಐ.ಟಿ ಮೂಲಗಳಿಂದ ಮಾಹಿತಿ ಲಭ್ಯವಾಗುತ್ತಿದೆ.ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಸೆ.17 ರಂದು ಎಸ್.ಐ.ಟಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಒಂಬತ್ತು ಸ್ಥಳಗಳಲ್ಲಿ ಮಾನವನ ಅವಶೇಷಗಳು ಪತ್ತೆಯಾಗಿದ್ದು ಅದನ್ನು ಅಧಿಕಾರಿಗಳು ಮಹಜರು ನಡೆಸುತ್ತಿದ್ದಾರೆ ಎಂದು ತಿಳೊದು ಬಂದಿದೆ.

ಧರ್ಮಸ್ಥಳ ಪ್ರಕರಣ ಮಹತ್ವದ ಬೆಳವಣಿಗೆ; ಇಡೀ ಬಂಗ್ಲೆ ಗುಡ್ಡೆ ಅರಣ್ಯ ಪರಿಶೀಲನೆ ಆರಂಭಿಸಿದ ಎಸ್.ಐ.ಟಿ

0

ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ ಸ್ನಾನಘಟ್ಟದ ಬಂಗ್ಲೆ ಗುಡ್ಡೆಯಲ್ಲಿ ಹಲವಾರು ಮೃತದೇಹಗಳ ಅವಶಿಷ್ಟಗಳಿವೆ ಎಂಬ ಹೇಳಿಕೆಗಳ ಹಿನ್ನಲೆಯಲ್ಲಿ ಎಸ್.ಐ.ಟಿ ತಂಡ ಇಡೀ ಬಂಗ್ಲೆ ಗುಡ್ಡೆ ಅರಣ್ಯವನ್ನು ಹುಡುಕುವ ಕಾರ್ಯ ಆರಂಭಿಸಿದ್ದಾರೆ. ಸಾಕ್ಷಿ ದೂರುದಾರ ಚಿನ್ನಯ್ಯ ತಂದಿದ್ದ ತಲೆಬುರುಡೆ ಇದೇ ಬಂಗ್ಲೆ ಗುಡ್ಡದಿಂದ ತಂದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ‌ ಇದೆ ಸ್ಥಳ ಮಹಜರು ನಡೆಸಲು ತೆರಳಿದ ವೇಳೆ ಹಲವಾರು ಮೃತದೇಹಗಳ ಅವಶೇಷಗಳು ಇಲ್ಲಿ ಕಂಡುಬಂದಿರುವುದಾಗಿ ವಿಠಲ ಗೌಡ ಹೇಳಿಕೆ ನೀಡಿದ್ದರು ಈ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಇಲ್ಲಿ ಸ್ಥಳಪರಿಶೀಲನೆ ನಡೆಸುವ ಬಗ್ಗೆ ಎಸ್.ಐ.ಟಿಯ ಅಧಿಕಾರಿಗಳು...

ಸಹಕಾರ ಸಂಘಗಳು ರೈತಪರವಾಗಿ ಕಾರ್ಯನಿರ್ವಹಿಸಲಿ; ಹರಿದಾಸ್

0

ಸಹಕಾರ ಸಂಘಗಳು ಕೇವಲ ಹಣಕಾಸು ವ್ಯವಹಾರ ನಡೆಸದೆ ರೈತಪರ ಕಾರ್ಯಚಟುವಟಿಕೆಗಳನ್ನು ನಡೆಸಿದರೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಸಹಕಾರ ರಂಗಕ್ಕೆ ವಿಶೇಷ ಕೊಡುಗೆ ನೀಡಬಹುದು ಎಂದು ಹಿರಿಯ ಸಹಕಾರಿ , ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಇದರ ಅಧ್ಯಕ್ಷ ಹರಿದಾಸ್ ಎಸ್. ಎಂ ಹೇಳಿದರು. ಬೆಳ್ತಂಗಡಿ ಅನನ್ಯ ಸಭಾಂಗಣದಲ್ಲಿ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಮತ್ತು ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕರ ಸಂಘ ಇದರ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು‌. ದೇಶದ ಜೀವನಾಡಿ...

ಲಾಯಿಲ; ರಸ್ತೆಬದಿಯಲ್ಲಿ ಕಸ ಎಸೆದು ಪರಾರಿ; ದಂಡ ಹಾಕಿ ಹೆಕ್ಕಿಸಿದ ಗ್ರಾ.ಪಂ

0

ಬೆಳ್ತಂಗಡಿ: ರಸ್ತೆ ಬದಿ ಕಸ ಬಿಸಾಡಿ ಹೋದವರನ್ನು ಪತ್ತೆ ಹಚ್ಚಿ ಅವರಿಗೆ ದಂಡ ವಿಧಿಸಿ ಅವರಿಂದಲೇ ಕಸ ವಿಲೇವಾರಿ ಮಾಡಿಸಿದ ಘಟನೆ ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೆ ,16 ಮಂಗಳವಾರ ನಡೆದಿದೆ.ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆರ್ಕೆ ಎಂಬಲ್ಲಿ ವಾಹನವೊಂದರಲ್ಲಿ ಕಸವನ್ನು ತಂದು ರಸ್ತೆ ಬದಿ ಸುರಿದು ಹೋಗಿದ್ದು ಇದನ್ನು ಗಮನಿಸಿದ ಸ್ಥಳೀಯರು ಲಾಯಿಲ ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡಿದ್ದು ಈ ಬಗ್ಗೆ ಸ್ಪಂದಿಸಿದ ಪಂಚಾಯತ್ ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ...

ಸುಬ್ರಹ್ಮಣ್ಯ ಸ್ವಾಮೀಜಿ ಧರ್ಮಸ್ಥಳಕ್ಕೆ ಭೇಟಿ

0

ಧರ್ಮಸ್ಥಳ: ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಮಂಗಳವಾರ ಧರ್ಮಸ್ಥಳಕ್ಕೆ ಆಗಮಿಸಿದಾಗ ಅವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.ಬಳಿಕ ಹೆಗ್ಗಡೆಯವರ ಬೀಡಿನಲ್ಲಿ ಸ್ವಾಮೀಜಿಯವರ ಪಾದಪೂಜೆ ನಡೆಸಲಾಯಿತು.ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಮೀಜಿಯವರಿಗೆ ಮಾಲಾರ್ಪಣೆ ಮಾಡಿ, ಶಾಲು ಹೊದಿಸಿ, ಫಲಕಾಣಿಕೆ ನೀಡಿ ಗೌರವಿಸಿದರು.ಸ್ವಾಮೀಜಿಯವರು ಹೆಗ್ಗಡೆಯವರಿಗೆ ಸುಬ್ರಹ್ಮಣ್ಯದ ಪ್ರಸಾದ ನೀಡಿ ಶುಭ ಹಾರೈಸಿದರು.ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.ಪೂಜ್ಯ ಸ್ವಾಮೀಜಿಯವರು ದೇವರ ದರ್ಶನ ಪಡೆದು ಹಿಂತಿರುಗಿದರು.

ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನ ಜಾಮೀನು ಅರ್ಜಿ ವಜಾ

0

ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಚಿನ್ನಯ್ಯನ ಜಾಮೀನು ಅರ್ಜಿ ಸೆ.16 ಕ್ಕೆ ವಜಾಗೊಂಡಿದೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತುಹಾಕಿರುವುದಾಗಿ ಹೇಳಿ ಬುರುಡೆ ಜೊತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ ಬಳಿಕ ಹಲವಾರು ಬೆಳವಣಿಗಳು ನಡೆದಿದ್ದವು. ಬೆಳ್ತಂಗಡಿ ಎಸ್‌‌‌ಐಟಿ ಅಧಿಕಾರಿಗಳು ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 23 ರಂದು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ 12 ದಿನಗಳ ಕಾಲ ಕಸ್ಟಡಿಗೆ ಪಡೆದ ತನಿಖೆ ನಡೆಸಿ ಸೆ.3 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿ ಚಿನ್ನಯ್ಯನನ್ನು ಮತ್ತೆ...

ವಿದ್ಯಾದಾನದ ಮೂಲಕ ಸಮಾಜಕ್ಕೆ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅಪಾರ; ವೀರು ಶೆಟ್ಟಿ

0

ಧರ್ಮಸ್ಥಳ: ಪ್ರಾಥಮಿಕ ಶಿಕ್ಷಣದಿಂದ ಆರಂಭಗೊಂಡು ಸ್ನಾತಕೋತ್ತರ ಪದವಿ, ವೃತ್ತಿಪರ ಶಿಕ್ಷಣ ಸೇರಿದಂತೆ ಶಿಕ್ಷಣ ಐವತ್ತಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಮುನ್ನಡೆಸುತ್ತಿರುವಡಾ. ಡಿ. ವೀರೇಂದ್ರ ಹೆಗ್ಗಡೆಯವರು ರಾಜ್ಯಾದ್ಯಂತ ಮೌಲ್ಯಾಧಾರಿತ ಶಿಕ್ಷಣ ಒದಗಿಸುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ರೀ ಧರ್ಮಸ್ಥಳ ಭಜನಾ ಕಮ್ಮಟದ ಕಾರ್ಯದರ್ಶಿ ಎ. ವೀರು ಶೆಟ್ಟಿ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ೨೭ನೇ ವರ್ಷದ ಭಜನಾ ತರಬೇತಿ ಕಮ್ಮಟದ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದಿಂದ ನಡೆಯುವ ವಿದ್ಯಾದಾನ ಕುರಿತು ವಿಶೇಷ ಉಪನ್ಯಾಸ ನೀಡಿದರು.ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಡಾ. ಹೆಗ್ಗಡೆಯವರು...

ಚಿನ್ನಯ್ಯನ ಜಾಮೀನು ಅರ್ಜಿ ಇಂದು (ಸೆ.16) ತೀರ್ಪು ಪ್ರಕಟ

0

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರು ದಾರನಾಗಿ ಬಂದು ಇದೀಗ ಶಿವಮೊಗ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸಾಕ್ಷಿ ದೂರುದಾರ ಚಿನ್ನಯ್ಯನ ಜಾಮೀನು ಅರ್ಜಿಯಲ್ಲಿ ಸೆ 16‌ ರಂದು ಬೆಳ್ತಂಗಡಿ ನ್ಯಾಯಾಲಯ‌ ತೀರ್ಪು ಪ್ರಕಟಿಸಲಿದೆ.ಸೆ.12 ರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆನಡೆಸಿದ ನ್ಯಾಯಾಲುವು ತೀರ್ಪನ್ನು ಸೆ 16 ಕ್ಕೆ ಕಾಯ್ದಿರಿಸಿತ್ತು.ಪ್ರಕರಣದ ವಿಚಾರಣೆ ವೇಳೆ ಎಸ್.ಐ.ಟಿ ಯಿಂದ ಜಾಮೀನು ನೀಡದಂತೆ ಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸಿದ್ದರು. ಚಿನ್ನಯ್ಯ ಪರ ಉಚಿತ ಕಾನೂನು ಸೇವಗಳ ಪ್ರಾಧಿಕಾರದ ವಕೀಲರು ವಾದ ಮಂಡಿಸಿದ್ದರು.ಪ್ರಕರಣದ ವಿಚಾರಣೆ ಆಲಿಸಿದ ನ್ಯಾಯಾಧೀಶರು ಜಾಮೀನು...