ಬೆಳ್ತಂಗಡಿ : ಉಜಿರೆ ಜನಾರ್ದನ ದೇವಸ್ಥಾನದ ದ್ವಾರದ ಬಳಿಯಿರುವ ಮೂರು ಅಂಗಡಿಗಳಿಗೆ ಕಳ್ಳರು ನುಗ್ಗಿ ನಗದು ಹಣ ಕಳ್ಳತನ ಮಾಡಿದ ಘಟನೆ ಜೂ.7 ರಂದು ರಾತ್ರಿಯ ವೆಳೆ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ಅಂಗಡಿಯ ಶಟರ್ ಗೆ ಹಾಕಿದ್ದ ಬೀಗಕ್ಕೆ ಸುತ್ತಿಗೆಯಿಂದ ಮುರಿದು ಒಳನುಗ್ಗಿ ಒಟ್ಟು 38 ಸಾವಿರ ರೂಪಾಯಿ...
ಕಡಬ: ಕಡಬ ತಾಲೂಕಿನಲ್ಲಿ ಇಚ್ಚಂಪಾಡಿ ಗ್ರಾಮದ ಸೇತುವೆ ಬಳಿ  ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.ಮೃತಪಟ್ಟ ಯುವಕನು ಚೇತನ್ ಶೆಟ್ಟಿ (21) ಎಂದು ಗುರುತಿಸಲಾಗಿದ್ದು, ಇವನು ಇಚ್ಚಂಪಾಡಿ ಗ್ರಾಮದ ಪಾನ ಕೆಡೆಂಬೇಲು ಮನೆ ನಿವಾಸಿ ರಾಮಣ್ಣ ಶೆಟ್ಟಿ ಎಂಬವರ ಪುತ್ರ. ಯುವಕನು ಮಂಗಳೂರಿನಲ್ಲಿ  ಮೆಡಿಕಲ್ ರೆಪ್  ಕೆಲಸ ಮಾಡುತ್ತಿದ್ದು ರಜೆಯ...
ಬೆಳ್ತಂಗಡಿ: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆಪ್ರಕರಣದ‌ತನಿಖೆಯನ್ನು ಎನ್.ಐ.ಎ ಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿರುವುದಾಗಿ ತಿಳಿದು ಬಂದಿದೆ. ತನಿಖೆಗೆ ಆದೇಶ ಹೊರಡಿಸಿರುವ ಬಗ್ಗೆ ಎ.ಎನ್.ಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಬೆಳ್ತಂಗಡಿ;  ಆಟೋ ರಿಕ್ಷಾದ ಮೇಲೆ ಕಾಡಾನೆ ದಾಳಿ ನಡೆಸಿ ಆಟೋ ರಿಕ್ಷಾವನ್ನು ಜಖಂ ಗೊಳಿಸಿದ ಘಟನೆ ನಡೆದ ಧರ್ಮಸ್ಥಳ ಗ್ರಾಮದ ಬೋಳಿಯಾರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು  ಶನಿವಾರ ಭೇಟಿ ನೀಡಿದರು. ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾದ ಆಟೋ ಚಾಲಕ ದಿನೇಶ್ ಮತ್ತು ಕುಟುಂಬಸ್ಥರನ್ನು ಭೇಟಿಯಾದ ಅವರು ಘಟನೆಯ ಬಗ್ಗೆ ಮಾಹಿತಿ ತಿಳಿದುಕೊಂಡರು. ಈ...
ಬೆಳ್ತಂಗಡಿ; ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಮಾನಭಂಗಕ್ಕೆ ಯತ್ನಿಸಿದ ಪ್ರಕರಣ ಸಂಬಂಧ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಹುಕ್ರೋಟ್ಟು ರಸ್ತೆಯಲ್ಲಿ ಮಹಿಳೆಯೊಬ್ಬರು ಜೂ.6 ರಂದು ಸಂಜೆ ತನ್ನ ಮನೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುವಕನೊಬ್ಬ ಹಿಂಬಾಲಿಸಿಕೊಂಡು ಬಂದು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದ ಬಗ್ಗೆ ನೊಂದ ಮಹಿಳೆ ಧರ್ಮಸ್ಥಳ ಪೊಲೀಸ್‌...
ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ಬೊಳಿಯಾರ್ ಎಂಬಲ್ಲಿ ನಡೆದ ಆನೆ ದಾಳಿಗೆ ಚಾಲಕ ದಿನೇಶ್ ಎಂಬವರ ರಿಕ್ಷಾ ಸಂಪೂರ್ಣ ದಾಳಿಗೆ ತುತ್ತಾಗಿದ್ದು ಈ ಬಗ್ಗೆ ಮಾಹಿತಿ ತಿಳಿದು ಇವರ ಮನೆಗೆ ಸಾಮಾಜಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ ನೀಡಿ ಕುಶಲೋಪರಿ ವಿಚಾರಿಸಿ ಆರ್ಥಿಕ ಸಹಾಯ ಮಾಡಿದರು.
ಬೆಳ್ತಂಗಡಿ; ಶುಕ್ರವಾರ ಬೆಳಗಿನ ಜಾವ ಧರ್ಮಸ್ಥಳ ಸಮೀಪದ ಬೊಳಿಯಾರಿನಲ್ಲಿ ಕಾಡಾನೆ ರಿಕ್ಷಾ ಮೇಲೆ ದಾಳಿ ಮಾಡಿದ ಪರಿಣಾಮ ರಿಕ್ಷಾ ಸಂಪೂರ್ಣ ಜಖಂ ಆದ ಘಟನೆ ನಡೆದಿದ್ದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್ ಎಫ್ ಒ ತ್ಯಾಗರಾಜು ಟಿ.ಎನ್.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇಲಾಖೆಯಿಂದ...
ಬೆಳ್ತಂಗಡಿ; ಮನುಷ್ಯರಲ್ಲಿರುವ ಪರಸ್ಪರ ವಿಶ್ವಾಸ ನಷ್ಟ ಹೊಂದಿದೆ ಎಂದರೆ ಅದು ಲೋಕಾವಸಾನದ ಕುರುಹು ಆಗಿದೆ ಇಂದು ಮಕ್ಕಳಿಗೆ ತಂದೆ ತಾಯಿಯಲ್ಲೂ ಪರಸ್ಪರ ಸ್ನೇಹಿತರೆಲ್ಲೂ ಇಂದು ವಿಶ್ವಾಸ ನಷ್ಟ ಹೊಂದಿದೆ ಸಹಾಯ ಮಾಡಿದ ಗೆಳೆಯನನ್ನೇ ಕೊಚ್ಚಿ ಕೊಚ್ಚಿ ಕೊಂದು ಹಾಕುವಂತಹ ಕಾಲವಿದು ಇಂತಹ ಕಾಲದಲ್ಲಿ ನಾವಿಂದು ಜೀವಿಸುತ್ತಿದ್ದೇವೆಪರಸ್ಪರ ವಿಶ್ವಾಸ ನಷ್ಟ ಹೊಂದಿರುವ ಕಾಲ ಬಂತೆಂದಾದರೆ ಅದು...
ಬೆಳ್ತಂಗಡಿ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪ ತಿರುವಿನಲ್ಲಿ ಶನಿವಾರ (ಜೂನ್ 7) ಬೆಳಗಿನ ಜಾವ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ರಸ್ತೆ ಬದಿಗೆ ಉರುಳಿದ್ದು, 16...
ಬೆಳ್ತಂಗಡಿ : ಗಡಾಯಿಕಲ್ಲು ಕಡಮಗುಂಡಿ, ಬೊಳ್ಳೆ ಜಲಪಾತ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಜೂ.7 ರಿಂದ ಎಂದಿನಂತೆ ಪ್ರವೇಶ ಮಾಡಲು ಅನುಮತಿ ನೀಡಲಾಗಿದೆ ಎಂದು ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದಿಂದ ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಹವಮಾನ ಇಲಾಖೆಯ ಮುನ್ಸೂಚನೆಯಂತೆ ರೆಡ್ ಅಲರ್ಟ್ ಘೋಷಣೆಯಾಗಿದ್ದರಿಂದ ಜಲಪಾತ ಪ್ರದೇಶದ ಸುತ್ತಮುತ್ತ ತೀರಾ ಕಡಿದಾದ...