ಬೆಳ್ತಂಗಡಿ; ಒಂದು ವಾರದಿಂದ ಬಿಡುವು ನೋಡಿದ್ದ ಮಳೆ ಕರಾವಳಿಯಾದ್ಯಂತ ಮತ್ತೆ ಬಿರುಸುಗೊಂಡಿದೆ. ಬೆಳ್ತಂಗಡಿ ತಾಲೂಕಿನಲ್ಲಿಯು ಬುಧವಾರ ಸಂಜೆಯಿಂದ ನಿರಂತರ ಮಳೆ ಆರಂಭಗೊಂಡಿದ್ದು ಜಿಲ್ಲೆಯಲ್ಲಿ ಐದು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಜೂ.12ರಿಂದ 16ರವರೆಗೆ ರಾಜ್ಯ ಕರಾವಳಿಯ ದಕ್ಷಿಣ...
ಬೆಳ್ತಂಗಡಿ; ವಿದ್ಯೆ, ಕಲೆ, ಸಾಹಿತ್ಯ ಸಂಸ್ಕೃತಿ, ಜಾನಪದ, ತರಬೇತಿ, ನಾಟಕ, ಕ್ರೀಡೆ ಹೀಗೆ ಬಹುವಿಧ ಪ್ರಾಕಾರಗಳಲ್ಲಿ ಜಯರಾಂ ಕೆ ಅವರು ತೊಡಗಿಸಿಕೊಂಡಿದ್ದರು. ಹಲವರಿಗೆ ಬದುಕುವ ದಾರಿ ತೋರಿದ್ದ ಅವರ ಈ ಎಲ್ಲಾ ಪೌಢಿಮೆ ಅನುಕರಣೀಯವಾದುದು ಎಂದು ಮುಂಡಾಜೆ ಭಿಡೆ ಮನೆಯ ಹಿರಿಯ ಮುತ್ಸದ್ದಿ ಶ್ರೀಧರ ಜಿ ಭಿಡೆ ಹೇಳಿದರು.ಇತ್ತೀಚೆಗೆ ಅಗಲಿದ ಕಲಾರಾಧಕ, ಹವ್ಯಾಸಿ ಶಿಕ್ಷಕ,...
ಬೆಳ್ತಂಗಡಿ. ತಾಲೂಕಿನ ಸುಮಾರು 60 ವರ್ಷ ಹಳೆಯದಾದ ಬೆಳ್ತಂಗಡಿಯ ನ್ಯಾಯಾಲಯದ ಕಟ್ಟಡನಾದುರಸ್ತಿಯಲ್ಲಿದ್ದು ಹೊಸ ನ್ಯಾಯಾಲಯದ ಕಟ್ಟಡಕ್ಕೆ ಸರ್ಕಾರ 9 ಕೋಟಿ ಅನುದಾನ ಮಂಜೂರು ಗೊಳಿಸಿದೆ. ಇಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಸಚಿವರಾದ ಎಚ್ ಕೆ ಪಾಟೀಲ್ ರವರನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಯಿತು....
ಬೆಳ್ತಂಗಡಿ; ಉಜಿರೆ ಟಿ. ಬಿ ಕ್ರಾಸ್ ನಲ್ಲಿ ವಾಹನ ತೊಳೆಯುತ್ತಿದ್ದ ವೇಳೆ ನೀರು ಹಾಯಿಸುವ ಗನ್ ಮೂಲಕ ವಿದ್ಯುತ್ ಹರಿದು ಶಾಕ್ ಹೊಡೆದು ಅದರಲ್ಲಿಯೇ ಸಿಲುಕಿಕೊಂಡ ವ್ಯಕ್ತಿಯನ್ನು ಸ್ಥಳೀಯರು ಸಾಹಸಿಕವಾಗಿ ರಕ್ಷಿಸದ್ದಾರೆ.ಇಲ್ಲಿನ ನಿವಾಸಿ ಸಾದಿಕ್ ಎಂಬಾತ ವಾಹನ ತೊಳೆಯುತ್ತಿದ್ದ ವೇಳೆ ವಿದ್ಯುತ್ ಗೆ ಆಘಾತಕ್ಕೆ ಈಡಾಗಿದ್ದಾರೆ. ಈ ಸಂದರ್ಭದಲ್ಲಿ ಇದನ್ನು ಗಮನಿಸಿದ ಸ್ಥಳೀಯರಾದ ಉಸ್ಮಾನ್...
ಬೆಳ್ತಂಗಡಿ; ಮಳೆ ಹಾನಿ- ವಿಪತ್ತು ನಿರ್ವಹಣೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಯವರು ನೀಡಿರುವ ಸೂಚನೆಯಂತೆ ಬೆಳ್ತಂಗಡಿ ತಾ. ಪಂ. ಸಭಾಂಗಣದಲ್ಲಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ರವರು ಲೋಕೋಪಯೋಗಿ ಇಲಾಖೆ, ಶಿಕ್ಷಣ ಇಲಾಖೆ, ಮೆಸ್ಕಾಂ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ...
ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಸುಣ್ಣ ಲಡ್ಡ ಎಂಬಲ್ಲಿ ಆಸಿಫ್ ಎಂಬವರ ಮನೆಗೆ ದಿನಾಂಕ :09:06:2025 ರಂದು ತಡರಾತ್ರಿ ಯಾರೋ ಕಳ್ಳರು ನುಗ್ಗಿ ಮಲಗಿದ್ದ ಕೋಣೆಯಲ್ಲಿದ್ದ ಗೋದ್ರೆಜ್ ನಲ್ಲಿಟ್ಟಿದ್ದ ದಾಖಲೆ ಪತ್ರ, ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಗೊಳಿಸಿ ನಗದು ಕಳ್ಳತನ ನಡೆಸಿದ್ದಾರೆ. ಗೋದ್ರೇಜ್ ನ ಬಾಗಿಲು ತೆರೆಯುವ ಶಬ್ದ ಕೇಳಿ ಅಲ್ಲೇ ಮಲಗಿದ್ದ...
ಬೆಳ್ತಂಗಡಿ; ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸತ್ಯ ಶೋಧಕ ವೇದಿಕೆಯಿಂದ ಭಾನುವಾರ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಹಚ್ಚಾಡಿ ಅಂಗನವಾಡಿ ಕೇಂದ್ರದ ಪುಟ್ಟ ಮಕ್ಕಳೊಂದಿಗೆ, ಅಂಗನವಾಡಿ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಸತ್ಯ ಶೋಧಕ ವೇದಿಕೆಯ ಅಧ್ಯಕ್ಷರಾದ ಸುಕೇಶ್ ಮಾಲಾಡಿ ರವರು ಮಾತಾಡಿ, ನಮ್ಮ ಮುಂದಿನ ಬದುಕಿಗಾಗಿ ನಾವು ಪರಿಸರವನ್ನು...
ಬೆಳ್ತಂಗಡಿ: ಚಿತ್ರದುಗದಿಂದ ಬಂದುಬೆಳ್ತಂಗಡಿ ಮೂಲಕ ಬಲ್ಲಾಳರಾಯನ ದುರ್ಗಕ್ಕೆ ಚಾರಣಕ್ಕೆ ತೆರಳಿದ್ದ 10 ತಂಡ ಬಲ್ಲಾಳರಾಯನ ದುರ್ಗಾದ ಕಾಡಿನಲ್ಲಿ ಸಿಲುಕಿದ ಘಡನೆ ಸೋಮವಾರ ನಡೆದಿದ್ದು ತಡರಾತ್ರಿಯ ವೇಳೆ ಹತ್ತು ಮಂದಿಯನ್ನು ಪೊಲೀಸರು ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿಸುರಕ್ಷಿತವಾಗಿ ಹೊರತರಲಾಗಿರುವುದಾಗಿ ತಿಳಿದು ಬಂದಿದೆ.
ಸೋಮವಾರ ಬೆಳಗ್ಗೆ ಬೆಳ್ತಂಗಡಿ ಗೆ ಬಂದು ಅರಣ್ಯದ...
ಬೆಳ್ತಂಗಡಿ : ನಾಯಿ ಅಡ್ಡ ಬಂದ ಕಾರಣ ನಿಯಂತ್ರಣ ತಪ್ಪಿದ ಬೊಲೆರೋ ವಾಹನ ಪಲ್ಟಿಯಾಗಿ ಚರಂಡಿಗೆ ಬಿದ್ದು ಸಿಲುಕಿಕೊಂಡ ಘಟನೆ ಚಾರ್ಮಾಡಿ ಗ್ರಾಮದ ಬೀಟಿಗೆಯ ಹೆದ್ದಾರಿಯಲ್ಲಿ ಜೂ.8 ರಂದು ರಾತ್ರಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿಗಳಾದ ಚೇತನ್ ಮತ್ತು ಸುರೇಶ್ ಇಬ್ಬರು ಉಡುಪಿ ಜಿಲ್ಲೆಯ ಕಾರ್ಕಳ ಸಂಬಂಧ ಮನೆಗೆ ಹೋಗಿ ವಾಪಸ್ ಬರುವಾಗ ಬೆಳ್ತಂಗಡಿ...
ಬೆಳ್ತಂಗಡಿ; ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಭೀಕರ ಹತ್ಯೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಕಾ ದಳಕ್ಕೆ ವಹಿಸಿದ್ದು ದಕ್ಷಿಣ ಕನ್ನಡದ ಸಮಸ್ತ ಹಿಂದೂ ಸಮಾಜ ಇದನ್ನು ಮನಪೂರ್ವಕವಾಗಿ ಸ್ವಾಗತಿಸುತ್ತಿದೆ. ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರೆ.ಸುಹಸ್ ಶೆಟ್ಟಿ ಅವರ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಪಿ ಎಫ್ ಐ ಹಾಗೂ ಇನ್ನಿತರ...