
ಬೆಳ್ತಂಗಡಿ; ಚಿರತೆಯೊಂದು ದಾಳಿ ಮಾಡಿ ಕರುವನ್ನು ಕೊಂದು ತಿಂದು ಹಾಕಿದ ಘಟನೆ ಪಡಂಗಡಿಯ ದೇಜಪ್ಪ ಎಂಬವರ ಮನೆಯಲ್ಲಿ ನಡೆದಿದೆ. ಚಿರತೆಯು ಕರುವಿನ ಹೊಟ್ಟೆಯ ಭಾಗವನ್ನು ಸಂಪೂರ್ಣವಾಗಿ ತಿಂದು ಹಾಕಿದೆ.
ಫಾರೆಸ್ಟ್ ಇಲಾಖೆ ಮತ್ತು ಪಶು ವೈದ್ಯಾಧಿಕಾರಿಗಳು ಭೇಟಿ ಕೊಟ್ಟು ಪೋಸ್ಟ್ ಮಾರ್ಟಂ ನಡೆಸಿದ್ದಾರೆ. ಚಿರತೆ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಚಿರತೆಯನ್ನು ಆದಷ್ಟು ಶೀಘ್ರವಾಗಿ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.








