
ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣದಲ್ಲಿ ಎಸ್.ಐ.ಟಿ ಸಲ್ಲಿಸಿರುವ ವರದಿಯ ಕುರಿತಾಗಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ಎಸ್.ಐ.ಟಿ ಪರವಾಗಿ ವಾದ ಮಂಡನೆ ಮುಕ್ತಾಯವಾಗಿದ್ದು ಅಪೂರ್ಣ ವರದಿಯ ಹಿನ್ನಲೆಯಲ್ಲಿ ಸುಳ್ಳು ಸಾಕ್ಷಿಯ ಕುರಿತು ಈ ಕೂಲೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಕರಣದ ತೀರ್ಪನ್ನು ಡಿ.26 ಕ್ಕೆ ಮುಂದೂಡಿ ದೆ
ಎಸ್.ಐ.ಟಿ ಪರವಾಗಿ ವಾದ ಮಂಡಿಸಿದ ಸರಕಾರಿ ವಕೀಲರು ಮುಂದಿನ ತನಿಖೆಯ ಕುರಿತು ನ್ಯಾಯಾಲಯದಿಂದ ನಿರ್ದೇಶನ ನೀಡುವಂತೆ ಕೇಳಿಕೊಂಡಿತ್ತು. ವಾದ ಆಲಿಸಿದ ನ್ಯಾಯಾಲಯ
ಎಸ್.ಐ.ಟಿ ನ್ಯಾಯಾಲಯದಲ್ಲಿ ಸಲ್ಲಿಸಿರುವ ವರದಿಯು ಪರಿಪೂರ್ಣ ವರದಿಯಲ್ಲ ಇದರಿಂದಾಗಿ ಸುಳ್ಳು ಸಾಕ್ಷಿಯ ಕುರಿತು ತೀರ್ಮಾನ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಸೂಕ್ತ ಕಾನೂನು ಸಲಹೆ ಪಡೆದು ಅಂತಿಮ ವರದಿಯನ್ನು ಸಿದ್ದಪಡಿಸುವಂತೆ ನ್ಯಾಯಾಲಯ ಎಸ್.ಐ.ಟಿಗೆ ಸೂಚಿಸಿದೆ,
ಲಭಿಸಿರುವ ತಲೆ ಬುರುಡೆಯ ಸಾಕ್ಷಿಯು ಆರೋಪಿಗಳ ಸುಳ್ಳು ಸಾಕ್ಷಿಯನ್ನು ತಿಳಿಸುತ್ತದೆ ಕೂಡಲೇ ಮುಂದಿನ ಕ್ರಮಕ್ಕೆ ಸೂಚನೆ ನೀಡಬೇಕು ಎಂಬ ವಕೀಲರು ವಾದ ಮಂಡಿಸಿದ್ದರೂ ತಕ್ಷಣ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಪ್ರಕರಣದ ಬಗ್ಗೆ ಇನ್ನಷ್ಟು ಪರಿಶೀಲಿಸಬೇಕಾಗಿದೆ ಎಂದು ಡಿ 26ಕ್ಕೆ ತೀರ್ಪು ನೀಡಲು ಮುಂದೂಡಿದ್ದಾರೆ









