Home ಅಪರಾಧ ಲೋಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ನಾಳ ದಿನೇಶ್ ಶೆಟ್ಟಿ ಯಾನೆ ದಿನ್ನು ಬಂಧನ

ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ನಾಳ ದಿನೇಶ್ ಶೆಟ್ಟಿ ಯಾನೆ ದಿನ್ನು ಬಂಧನ

30
0

ಬೆಳ್ತಂಗಡಿ; ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಒಂದುವರೆ ವರ್ಷದಿಂದ ತಲೆ ಮರೆಸಿಕೊಂಡು ಓಡಾಟ ನಡೆಸುತ್ತಿದ್ದ ಬೆಳ್ತಂಗಡಿ ತಾಲೂಕಿನ ನಾಳ ದಿನೇಶ್ ಶೆಟ್ಟಿ ಯಾನೆ ದಿನ್ನು ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ನ್ಯಾಯಾವಾದಿ ಖಾಸಿಂ ನೌಷಾದ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು 11ವರ್ಷಗಳ ಕಾಲ ಶಿಕ್ಷೆ ಅನುಭವಿಸಿ ಹೊರ ಬಂದ ದಿನೇಶ್ ವಿರುದ್ದ ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳುಬದಾಖಲಾಗಿತ್ತು. ಆದರೂ ನ್ಯಾಯಾಲಯಕ್ಕೆ ಹಾಜರಾಗದೆ ಒಂದುವರೆ ವರ್ಷದಿಂದ ತಲೆ ಮರೆಸಿಕೊಂಡು ಓಡಾಟ ನಡೆಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ನ25 ರಂದು ಎಸಿಪಿ ಉತ್ತರ ಉಪವಿಭಾಗ ಹಾಗೂ ಅವರ ತಂಡ ಆರೋಪಿಯನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here