ಮುರುಗೋಳಿ: ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಇದೀಗ ಮುಂದಿನ ಎರಡುವರೆ ವರ್ಷಗಳ ಕಾಲ ಆಡಳಿತ ಮಂಡಳಿ ಅಧ್ಯಕ್ಷರಾಗಿ ಶೇಸಪ್ಪ ಸಾಲಿಯಾನ್, ಉಪಾಧ್ಯಕ್ಷರಾಗಿ ಮೋಹನ್ ಗೌಡ ಅಜಿರ ಅವಿರೋಧವಾಗಿ ನ.14 ರಂದು ಆಯ್ಕೆಯಾದರು.
ನಿರ್ದೇಶಕರಾಗಿ ಪ್ರಸನ್ನ ಗೌಡ ಎನ್, ಪ್ರವೀಣ ರೈ ಪಿ., ಪ್ರಶಾಂತ್ ಪೈ, ಚಂದ್ರಶೇಖರ್ ಕುಂಡಡ್ಕ, ಹರ್ಷಿತ್ ಪೂಜಾರಿ ಕಲಾಯ, ರಾಜೇಶ್ ರೈ ಹೆನ್ನಡ್ಕ, ಸವಿತಾ ವೆಂಕಟೇಶ್, ಹೇಮಾವತಿ ಸುರೇಶ್ ಹೇರಾಜೆ, ಶಿವಾರಮ್ ಕೆಳಗಿನಂಗಡಿ ಹಾಗೂ ಸುರೇಶ್ ಸುಣ್ಣಾಜೆ ಆಯ್ಕೆಯಾಗಿದ್ದಾರೆ.
ಸಿಡಿಒ ಪ್ರತಿಮಾ ಹಾಗೂ ಸಹಾಯಕ ಚುನಾವಣಾಧಿಕಾರಿ ಸತೀಶ್ ಟಿ.ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರು. ಬ್ಯಾಂಕಿನ ಸಿಬ್ಬಂದಿಗಳು ಸಹಕರಿಸಿದರು. ಚುನಾವಣಾ ಉಸ್ತುವಾರಿ ವೇಣೂರು ಪ್ಯಾಕ್ಸ್ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ., ಕಣಿಯೂರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಹೇಶ್ ಕೋಟ್ಯಾನ್ ಜೆಂಕ್ಯಾರ್ ಸಹಿತಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.




