


ಬೆಳ್ತಂಗಡಿ; ಕಾನೂನು ಬಾಹಿರವಾಗಿ ತೆಂಕ ಕಾರಂದೂರು ಗ್ರಾಮದಲ್ಲಿ ಮರಳನ್ನು ತೆಗೆದು ಸರಕಾರಿ ಜಾಗದಲ್ಲಿ ದಾಸ್ತಾನು ಇರಿಸಿದ್ದ ಪ್ರಕರಣವೊಂದನ್ನು ವೇಣೂರು ಪೊಲೀಸರು ಪತ್ತೆಹಚ್ಚಿ ಮರಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಸೆ.20 ರಂದು ರೌಂಡ್ ನಲ್ಲಿದ್ದವೇಳೆ ತೆಂಕ ಕಾರಂದೂರು ಗ್ರಾಮದ ಅಂಗನವಾಡಿ ಕಟ್ಟೆಯ ಬಳಿ ಸರಕಾರಿ ಜಾಗದಲ್ಲಿ ಸುಮಾರು ಒಂದುವರೆ ಯೂನಿಟ್ ನಷ್ಟು ಮರಳನ್ನು ಶೇಖರಿಸಿಟ್ಟಿರುವುದು ಕಂಡು ಬಂದಿದೆ. ಪರಿಶೀಲನೆ ನಡೆಸಿದಾಗ ಇದು ಅಕ್ರಮವಾಗಿ ಶೇಖರಿಸಿರುವ ಮರಳು ಆಗಿದೆ ಎಂಬುದು ತಿಳಿದು ಬಂದಿದ್ದು ಈ ಹಿನ್ನಲೆಯಲ್ಲಿ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
