Home ರಾಜಕೀಯ ಸಮಾಚಾರ ವಸಂತ ಗಿಳಿಯಾರ್ ವಿರುದ್ದ ಬೆಳ್ತಂಗಡಿ ಠಾಣೆಗೆ ದೂರು

ವಸಂತ ಗಿಳಿಯಾರ್ ವಿರುದ್ದ ಬೆಳ್ತಂಗಡಿ ಠಾಣೆಗೆ ದೂರು

20
0

ಬೆಳ್ತಂಗಡಿ;  ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಕಾಂಗ್ರೆಸ್ ನಾಯಕರುಗಳನ್ನು ತೇಜೋವಧೆ ಮಾಡಿ ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಅಪಪ್ರಚಾರ ಮಾಡುತ್ತಿರುವ ಬಗ್ಗೆ ವಸಂತ ಗಿಳಿಯಾರ್ ಅವರ ವಿರುದ್ದ ಬೆಳ್ತಂಗಡಿ ಗ್ರಾಮೀಣ‌ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗೇಶ್ ಕುಮಾರ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬಗ್ಗೆ ಹಾಗೂ ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಸುಳ್ಳು ಸುದ್ದಿಯನ್ನು ಹರಡಿದ್ದು ರಕ್ಷಿತ್ ಶಿವರಾಂ ಅವರ ಮಾನಹಾನಿ ನಡೆಸಿ ಘನತೆ ಗೌರವಕ್ಕೆ ಧಕ್ಕೆಯುಂಟುಮಾಡಿದ್ದಲ್ಲದೆ ಇದರಿಂದಾಗಿ ಜನರಲ್ಲಿ ಗೊಂದಲ‌ ಸೃಷ್ಟಿಯಾಗಲು ಕಾರಣವಾಗಿದ್ದು ಈಬಗ್ಗೆ ವಸಂತ ಗಿಳಿಯಾರ್ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here