



ಬೆಳ್ತಂಗಡಿ; ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅ.ವಂ ಫಾ. ಜೇಮ್ಸ್ ಪಟ್ಟೇರಿಲ್ ಅವರು ಆಯ್ಕೆಯಾಗಿದ್ದಾರೆ. ಪೋಪ್ ಲಿಯೋ 14ಅವರ ಆದೇಶದಂತೆ
ಎರ್ನಾಕುಳಂ ನಲ್ಲಿ ಸಿರೋ ಮಲಬಾರ್ ಚರ್ಚ್ ನ ಕಾರ್ಡಿನಲ್ ಅ.ವಂ ರಾಫೇಲ್ ತಟ್ಟಿಲ್ ಅವರು ಹೊಸ ಧರ್ಮಾಧ್ಯಕ್ಷರ ಹೆಸರನ್ನು ಘೋಷಣೆ ಮಾಡಿದ್ದಾರೆ.
ಬೆಳ್ತಂಗಡಿ ಧರ್ಮಪ್ರಾಂತ್ಯದ ಸ್ಥಾಪಕ ಧರ್ಮಾಧ್ಯಕ್ಷರಾಗಿದ್ದ
ಬಿಷಪ್ ಲಾರೆನ್ಸ್ ಮುಕ್ಕುಯಿ ಅವರು ಕಳೆದ 26 ವರ್ಷಗಳಿಂದ ಧರ್ಮಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರುಇದೀಗ ಅವರು ನಿವೃತ್ತರಾಗುತ್ತಿದ್ದು ಇವರ ಸ್ಥಾನಕ್ಕೆ ಹೊಸ ಧರ್ಮಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜೇಮ್ಸ್ ಪಟ್ಟೇರಿಲ್ ಅವರು ಬೆಳ್ತಂಗಡಿ ತಾಲೂಕೊನ ಕಳೆಂಜ ಗ್ರಾಮದವರಾಗಿದ್ದಾರೆ
