Home ಅಪರಾಧ ಲೋಕ ಧರ್ಮಸ್ಥಳ ಪರ, ಶಾಸಕರ ಪರ ಪೋಸ್ಟ್ ಯುವಕನ ಮೇಲೆ ಹಲ್ಲೆ ಆರೋಪ ಪ್ರಕರಣ ದಾಖಲು

ಧರ್ಮಸ್ಥಳ ಪರ, ಶಾಸಕರ ಪರ ಪೋಸ್ಟ್ ಯುವಕನ ಮೇಲೆ ಹಲ್ಲೆ ಆರೋಪ ಪ್ರಕರಣ ದಾಖಲು

0
3

ಬೆಳ್ತಂಗಡಿ: ಧರ್ಮಸ್ಥಳದ ಪರ ಸ್ಟೇಟಸ್ ಹಾಕಿದ ವಿಚಾರದಲ್ಲಿ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿ ಬಳಿಕ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಪ್ರಕರಣ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯಲ್ಲಿರುವ ಪ್ರಜ್ಞಾ ಹೇರ್ ಡ್ರೇಸ್ಸಸ್ ನಲ್ಲಿ ಕೆಲಸ ಮಾಡುತ್ತಿದ್ದ ಕೊಕ್ಕಡ ಗ್ರಾಮದ ಕೋರುಗದ್ದೆ ನಿವಾಸಿ ರಜತ್ ಭಂಡಾರಿ(25) ಎಂಬಾತ ಆ.25 ರಂದು ಬೆಳಗ್ಗೆ 9:50 ರ ಸಮಯದಲ್ಲಿರುವ ಅಂಗಡಿಗೆ ಕಿರಣ್ ಶಿಶಿಲ ಎಂಬಾತ ಕಾರಿನಲ್ಲಿ ಬಂದು ರಜತ್ ಎಂಬಾತನಲ್ಲಿ ಹೊರಗೆ ಬಾ ನಿನ್ನ ಜೊತೆ ಮಾತನಾಡಲಿ ಇದೆ ಎಂದು ಕರೆದಾಗ ಹೊರಗೆ ಬಾರದ ರಜತ್ ನನ್ನು ಅಂಗಡಿ ಒಳಗೆ ಅಕ್ರಮ ಪ್ರವೇಶಿಸಿ ರಜತ್ ಶಾರ್ಟ್ ನ ಕಾಲರ್ ಹಿಡಿದು ಅಂಗಡಿ ಹೊರಗೆ ಎಳೆದುಕೊಂಡು ಬಂದು ಅವ್ಯಾಚ ಶಬ್ದಗಳಿಂದ ಬೈದು ಧರ್ಮಸ್ಥಳದ ಪರ ಸ್ಟೇಟಸ್ ಹಾಕ್ತೀಯ ಎಂದು ಬೈದು ಹಲ್ಲೆ ನಡೆಸಿದ್ದು ನೀನು ನನ್ನ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿದರೆ ಕೊಲೆಮಾಡುವುದಾಗಿ ಆರೋಪಿ ಜೀವಬೆದರಿಕೆ ಹಾಕಿರುವುದಾಗಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲ್ಲೆಗೊಳಗಾದ ರಜತ್ ಭಂಡಾರಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಆ.25 ರಂದು ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ಹಲ್ಲೆಗೊಳಗಾದ ರಜತ್ ಭಂಡಾರಿ ನೀಡಿದ ದೂರಿನ ಮೇರೆಗೆ ಆ.25 ರಂದು ಸಂಜೆ ಕಲಂ 329(4),352,115(2),351(2),110- BNS-2023 ಅಡಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿ ಕಿರಣ್ ಶಿಶಿಲ ವಿರುದ್ಧ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY

Please enter your comment!
Please enter your name here