

ಕುತ್ಲೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನದ ಒಳಗಿರುವ ಕುತ್ಲೂರು ಮಲೆ (ಕುರಿಯಾಡಿ) ಅಂಗನವಾಡಿ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶುಕ್ರವಾರ ಅದ್ದೂರಿಯಾಗಿ ಆಚರಿಸಲಾಯಿತು.
ಕುತ್ಲೂರು ಕುರಿಯಾಡಿ ಅಂಗನವಾಡಿ ಸಮಿತಿ, ಮಲೆಕುಡಿಯ ಸಂಘ ಗ್ರಾಮ ಸಮಿತಿ, ಸ್ತ್ರೀಶಕ್ತಿ ಸ್ವಸಹಾಯ ಸಂಘದ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಗ್ರಾಮದ ಹಿರಿಯರಾದ ಹುಕ್ರ ಮಲೆಕುಡಿಯ ಧ್ವಜಾರೋಹಣ ನೆರವೇರಿಸಿದರು.
ಕುರಿಯಾಡಿ ಅಂಗನವಾಡಿ ಸಮಿತಿಯ ಕಾರ್ಯದರ್ಶಿ ಸುಧಾಕರ ಮಲೆಕುಡಿಯ ಅವರು ವರದಿಯನ್ನು ಮಂಡಿಸಿ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿದರು.



ಕುತ್ಲೂರು ಮಲೆ ಅಂಗನವಾಡಿ ಸಮಿತಿ ಅಧ್ಯಕ್ಷ ವಿಶ್ವನಾಥ ಪೆರಿಂಚ, ನೇಲ್ಯಪಲ್ಕೆ ಅಂಗನವಾಡಿ ಕೇಂದ್ರದ ಶಶಿಕಲಾ ಬಾರ್ದಜೆ, ಸ್ತ್ರೀಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಶಶಿಕಲಾ ಅಂಜರೊಟ್ಟು, ಮಲೆಕುಡಿಯ ಸಂಘ ಗ್ರಾಮ ಸಮಿತಿಯ ಸುರೇಶ ಮಲೆಕುಡಿಯ, ಹೊನ್ನಯ್ಯ ಮಲೆಕುಡಿಯ, ಪೂವಪ್ಪ ಮಲೆಕುಡಿಯ, ಹರೀಶ ಪಂಜಾಲು, ಸುಮಿತ್ರ ಏರ್ದಡಿ, ವಾರಿಜಾ ಏರ್ದಡಿ, ಹೊನ್ನಮ್ಮ ಮಣಿಲ, ವೆಂಕಪ್ಪ ಪೆರಿಂಚ, ರಮೇಶ ನಂಗಾಜೆ, ಜಯ ಒಂಜರ್ದಡಿ, ವಾರಿಜ ಬರೆಂಗಾಡಿ, ಗಿರಿಜ, ಸ್ವಾತಿ ಅಂಜರೊಟ್ಟು, ಲಕ್ಷ್ಮಿ ಬಾರ್ದಜೆ, ಸದಾಶಿವ ಅಂಜರೊಟ್ಟು, ವಸಂತ ಪಂಜಾಲು, ಸದಾನಂದ ಪೆರಿಂಚ, ಅವಿನಾಶ್ ಕೋಟ್ಯಂದಡ್ಕ, ಚೀಂಕ್ರ ಮಲೆಕುಡಿಯ, ಉದಯ ಮಲೆಕುಡಿಯ, ಶ್ರೀಧರ ಮಲೆಕುಡಿಯ, ಅಂಗನವಾಡಿಯ ಮಕ್ಕಳು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
