Home ಸ್ಥಳೀಯ ಸಮಾಚಾರ ಬೆಳ್ತಂಗಡಿ; ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ

ಬೆಳ್ತಂಗಡಿ; ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ

63
0

ಬೆಳ್ತಂಗಡಿ ಸರಕಾರಿ ಸಮುದಾಯ ಆಸ್ಪತ್ರೆಯ ರಕ್ಷಾ ಸಮಿತಿ ಸಭೆಯು ಶಾಸಕರಾದ ಹರೀಶ್ ಪೂಂಜಾ ಅಧ್ಯಕ್ಷತೆಯಲ್ಲಿ ನಡೆಯಿತು.
ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್,ನಗರ ಪಂಚಾಯತ್ ಅಧ್ಯಕ್ಷರಾದ ಜಯಾನಂದ ಗೌಡ,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್,ವೈದ್ಯಾಧಿಕಾರಿ ಡಾ.ರಮೇಶ್ ಸ್ವಾಗತಿಸಿದರು., ಆರೋಗ್ಯಾಧಿಕಾರಿಯಾದ ಡಾ.ಸಂಜಾತ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಬಂಕಪ್ಪ,ಮೆಸ್ಕಾಮ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಕ್ಲೆಮೆಂಟ್ ಬೆಂಜಮಿನ್ ಬ್ರಾಗ್ಸ್,ಡಾ.ಶಶಿಕಾಂತ್ ಡೋಂಗ್ರೆ,ಡಾ.ಶಶಾಂಕ್,
ಡಾ.ತಾರಕೇಶ್ವರಿ, ಡಾ.ಆಶಾಲತಾ,
ಡಾ.ಹೇಮಲತಾ,ಡಾ.ರಶ್ಮಿ ಉಪಸ್ಥಿತರಿದ್ದರು.
ಸಭೆಯಲ್ಲಿ ಆಸ್ಪತ್ರೆಯ ಅಭಿವೃದ್ದಿಯ ಬಗ್ಗೆ ಚರ್ಚಿಸಲಾಯಿತು. ಆಸ್ಪತ್ರೆಯ ಮೂಲಭೂತ ಸೌಕರ್ಯಗಳಿಗೆ ಸರಕಾರದಿಂದ ಅನುದಾನ ಪಡೆಯಲು ಅಂದಾಜು ಪಟ್ಟಿ ತಯಾರಿಸುವಂತೆ ಸಭೆಯಲ್ಲಿ ತಿಳಿಸಿದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಔಷಧವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲು ಬರೆದು ಮಾಹಿತಿ ನೀಡುವಂತೆ ತಿಳಿಸಲಾಯಿತು.ಕೊರತೆ ಇರುವ ಔಷಧವನ್ನು ಇಲಾಖೆಯಿಂದ ತಕ್ಷಣ ತರಿಸುವಂತೆ ಹೇಳಿದರು. ಆಸ್ಪತ್ರೆಯ ಆವರಣದ ಒಳಗೆ ಖಾಸಗಿ ವಾಹನವನ್ನು ನಿಲ್ಲಿಸುವುದರಿಂದ ತೊಂದರೆ ಆಗುತ್ತಿದೆ ಕೂಡಲೇ ಕ್ರಮ ವಹಿಸುವಂತೆ ತಿಳಿಸಿದರು.
ಒಳರೋಗಿ ಮತ್ತು ಹೊರರೋಗಿಗಳಿಗೆ ಪ್ರತ್ಯೇಕ ಕೌಂಟರ್ ಮಾಡುವಂತೆ ಸಭೆಯಲ್ಲಿ ಸದಸ್ಯರು ತಿಳಿಸಿದರು.ಆಸ್ಪತ್ರೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕೆಂದು ತಿಳಿಸಿದರು.
ರಕ್ಷಾ ಸಮಿತಿ ಸದಸ್ಯರಾದ ನವೀನ್ ಗೌಡ ಸವಣಾಲು, ಸೆಬಾಸ್ಟಿಯನ್ ಪಿ.ಟಿ., ವೆಂಕಣ್ಣ ಕೊಯ್ಯೂರು, ವೀರೆಂದ್ರ ಕುಮಾರ್ ಜೈನ್, ಅಬ್ದುಲ್ ರಶೀದ್ ಕಕ್ಕಿಂಜೆ, ಸ್ಟೀವನ್ ಮೋನಿಸ್, ಶ್ರೀಮತಿ ಸವಿತಾ ಸುಲ್ಕೇರಿ, ಆರೋಗ್ಯಾಧಿಕಾರಿ ಕಛೇರಿಯ ಸಿಬ್ಬಂದಿ ಅಜಯ್ ಕಲ್ಲೇಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here