


ಬೆಳ್ತಂಗಡಿ; ಉಜಿರೆ ಪೇಟೆಯಲ್ಲಿ ನಿಲ್ಲಿಸಿ ಹೋಗಿದ್ದ ಬುಲೆಟ್ ಬೈಕ್ ಅನ್ನು ಕಳ್ಳರು ಅಪಹರಿಸಿದ ಘಟನೆ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆಂಜ ಗ್ರಾಮದ ನಿವಾಸಿಯಾಗಿರುವ ಸಿವಿಲ್ ಎಂಜಿನಿಯರ್ ಆಗಿರುವ ನವೀನ್ ಸಿ.ಕೆ ಎಂಬವರು ಬೈಕ್ ಅನ್ನು ಕಳೆದುಕೊಂಡವರಾಗಿದ್ದಾರೆ ಇವರು ಮೇ 31ರಂದು ಮದ್ಯಾಹ್ನ 12.30 ಅಸಹಜರ ಸುಮಾರಿಗೆ
ಉಜಿರೆಯ ಎಫ್ ಎಂ ಲಾಡ್ಜ್ ನ ಸಮೀಪ ಕೆ.ಎ 19 ಇ. ಹೆಚ್ 2516 ನಂಬರಿನ ಬುಲೆಟ್ ಬೈಕ್ ಅನ್ನು ನಿಲ್ಲಿಸಿ ಹೀಗಿದ್ದರು. ಕಚೇರಿ ಕೆಲಸ ಮುಗಿಸಿಕೊಂಡು 6 ಗಂಟೆಯ ಸುಮಾರಿಗೆ ಬಂದು ನೋಡಿದಾಗ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿತ್ತು. ಬೈಕಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಕಳವಾಗಿರುವ ಬೈಕಿನ ಮೌಲ್ಯ ರೂ 1,20,000 ಎಂದು ಅಂದಾಜಿಸಲಾಗಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
