Home ಅಪರಾಧ ಲೋಕ ಕಲ್ಮಂಜ: ಅಕ್ರಮ ಮಧ್ಯ ಮಾರಾಟ ಅಡ್ಡೆಗೆ ಅಬಕಾರಿ ದಳ ದಾಳಿ ಮಧ್ಯ ವಶಕ್ಕೆ : ಆರೋಪಿ...

ಕಲ್ಮಂಜ: ಅಕ್ರಮ ಮಧ್ಯ ಮಾರಾಟ ಅಡ್ಡೆಗೆ ಅಬಕಾರಿ ದಳ ದಾಳಿ ಮಧ್ಯ ವಶಕ್ಕೆ : ಆರೋಪಿ ಬಂಧನ

18
0

ಬೆಳ್ತಂಗಡಿ : ಅಕ್ರಮವಾಗಿ ಮಾರಾಟ ಮಾಡಲು ಕೋಳಿ ಅಂಗಡಿಯಲ್ಲಿ ಮಧ್ಯವನ್ನು ಶೇಖರಿಸಿಟ್ಟಿರುವ ಬಗ್ಗೆ ಅಬಕಾರಿ ಡಿಸಿ ತಂಡಕ್ಕೆ ಬಂದ ಖಚಿತ ಮಾಹಿತಿ ಮೇರೆಗೆ ಮಂಗಳೂರು, ಬಂಟ್ವಾಳ ,ಬೆಳ್ತಂಗಡಿ ಅಬಕಾರಿ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಮಧ್ಯ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕೊಂಬುಗುರಿ ನಿವಾಸಿ  ಲೋಕೇಶ್(36) ಎಂಬಾತನಿಗೆ ಸೇರಿದ ತುಳುನಾಡ ಚಿಕನ್ ಸೆಂಟರ್ ಹೆಸರಿನ ಕೋಳಿ ಅಂಗಡಿಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಮಧ್ಯವನ್ನು ಶೇಖರಿಸಿಟ್ಟ ಬಗ್ಗೆ ಮಂಗಳೂರು ಅಬಕಾರಿ ಡಿಸಿ ತಂಡಕ್ಕೆ ಮಾಹಿತಿ ಬಂದಿದ್ದು ಅದರಂತೆ ಮಂಗಳೂರು , ಬಂಟ್ವಾಳ, ಬೆಳ್ತಂಗಡಿ ಅಬಕಾರಿ ತಂಡದವರು ಏ.28 ಕ್ಕೆ ರಾತ್ರಿ 8 ಗಂಟೆಗೆ ಕಾರ್ಯಾಚರಣೆ ನಡೆಸಿದಾಗ 63.810 ಲೀಟರ್ IML ಮಧ್ಯ ಪತ್ತೆಯಾಗಿದೆ. ಇದರ ಒಟ್ಟು ಮೌಲ್ಯ 29,785 ರೂ ಅಗಿದೆ.ಅಕ್ರಮ ಮಧ್ಯವನ್ನು ವಶಪಡಿಸಿಕೊಂಡು ಆರೋಪಿ ಲೋಕೇಶ್ ನನ್ನು ಬಂಧಿಸಲಾಗಿದೆ. ಈ ಬಗ್ಗೆ ಮಂಗಳೂರು ಅಬಕಾರಿ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ವಿಶ್ವನಾಥ್ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ಬೆಳ್ತಂಗಡಿ ಅಬಕಾರಿ ಇಲಾಖೆ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತ ಟಿ.ಎಮ್‌.ಶ್ರೀನಿವಾಸ್ ಮಾರ್ಗದರ್ಶನದಲ್ಲಿ, ಬಂಟ್ವಾಳ ಉಪ ವಿಭಾಗದ ಅಬಕಾರಿ ಉಪಾಧೀಕ್ಷ ಸಂತೋಷ್ ಮೂಡಾಗಿ ರವರ ನೇತೃತ್ವದಲ್ಲಿ ಅಬಕಾರಿ ಡಿಸಿ ಜಿಲ್ಲಾ ತಂಡ ನಿರೀಕ್ಷಕರು ಸುನಿಲ್ ಕುಮಾರ್, ಸಬ್ ಇನ್ಸ್ಪೆಕ್ಟರ್ ವಿಶ್ವನಾಥ್, ಸಿಬ್ಬಂದಿ ಸುಪ್ರೀತ್ ಹಾಗೂ ಬೆಳ್ತಂಗಡಿ ವಲಯ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಉಪ್ಪಾರ್, ಸಿಬ್ಬಂದಿ ಶಬೀರ್, ಶಿವಶಂಕರ್, ಭೋಜ, ಚಾಲಕ ಯೋಗೀಶ್, ನವೀನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here