


ಬೆಳ್ತಂಗಡಿ; ಶುಭ ಶುಕ್ರವಾರವನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಎಲ್ಲ ಚರ್ಚ್ ಗಳಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆಚರಿಸಲಾಯಿತು.
ಬೆಳ್ತಂಗಡಿ ಧರ್ಮಪ್ರಾಂತ್ಯದ 55 ಚರ್ಚ್ ಗಳಲ್ಲಿ ಶುಭ ಶುಕ್ರವಾರದ ವಿಧಿವಿದಾನಗೆಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಗಳಾದರು. ಬೆಳ್ತಂಗಡಿ ಸಂತ ಲಾರೆನ್ಸ್ ಅವರ ಪ್ರಧಾನ ದೇವಾಲಯದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ದಮಾದ್ಯಕ್ಷರಾದ ಅ. ವ. ಬಿಷಪ್ಪ್ ಲಾರೆನ್ಸ್ ಮುಕ್ಕುಯಿಯವರು ಶುಭ ಶುಕ್ರವಾರ ವಿಧಿವಿದಾನಗೆಳನ್ನು ನೆರವೆರಿಸಿ ಪ್ರವಚನ ನೀಡಿದರು.

ನಂತರ ಯೆಸುಸ್ವಾಮಿಯು ಅನುಭವಿಸಿದ ಯಾತನೆಯನ್ನು ಸ್ಮರಿಸುವ ಶಿಲುಬೆಯ ಹಾದಿ ನಡೆಯಿತು. ಧರ್ಮಭಗಿನಿಯರು, ಭಕ್ತಾದಿಗಳು ಭಕ್ತಿಪೂರ್ವಕವಾಗಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಫಾ. ತೋಮಸ್ ಕಣ್ಣಾಂಙಳ್, ಫಾ. ಕುರಿಯಾಕೋಸ್ ವೆಟ್ಟುವಯಿ, ಫಾ. ಅಬ್ರಹಾಂ ಪಟ್ಟೇರಿಲ್, ಉಪಸ್ಧಿತರಿದ್ದರು.
