


ಬೆಳ್ತಂಗಡಿ; ಮಕ್ಕಳು ದೇವರ ಸ್ವರೂಪ ಮತ್ತು ದೇವರು ನಮಗೆ ನೀಡಿದ ಕಾಣಿಕೆ. ಅವರನ್ನು ಸರಿಯಾದ ರೀತಿಯಲ್ಲಿ ಪೋಷಿಸಿ ಆರೋಗ್ಯಕರವಾಗಿ ಮತ್ತು ಉತ್ತಮ ಸಂಸ್ಕಾರ ನೀಡಿ ಬೆಳೆಸುವುದು ಹೆತ್ತವರ ಆದ್ಯ ಕರ್ತವ್ಯ. ಚಿಕಿತ್ಸೆಗಿಂದ ಮುಂಜಾಗ್ರತೆ ಮೇಲು ಎಂಬಂತೆ ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡರೂ ಕೂಡಲೇ ಅವರನ್ನು ವೈದ್ಯರಿಗೆ ತೋರಿಸಿ ತಪಾಸಣೆ ನಡೆಸಿ ಸಲಹೆ ಪಡೆಯುವುದು ಪ್ರಾಮುಖ್ಯವಾದದ್ದು, ಎಂದು NABH ಪುರಸ್ಕೃತ ಬೆನಕ ಹೆಲ್ತ್ ಸೆಂಟರ್ ಉಜಿರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ರವರು ಹೇಳಿದರು.
ಅವರು ಬೆನಕ ಆಸ್ಪತ್ರೆಯಲ್ಲಿ ಜರುಗಿದ ಮಕ್ಕಳ ಉಚಿತ ಆರೋಗ್ಯ ತಪಾಸಣೆಯ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬೇಸಿಗೆಯಲ್ಲಿ ಮಕ್ಕಳ ಪಾಲನೆ ಮತ್ತು ಪೋಷಿಸುವ ವಿಧಾನಗಳು ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತೆ ಕುರಿತು ಬೆನಕ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ಸೂರಜ್ ಎಸ್ ಶೆಟ್ಟಿ ಇವರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಡಾ. ಸೂರಜ್ ಎಸ್ ಶೆಟ್ಟಿ ಪ್ರಸ್ತುತ ಬೆನಕ ಆಸ್ಪತ್ರೆಯಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದಾರೆ . ಈ ಸಂಧರ್ಭದಲ್ಲಿ ಡಾ. ಭಾರತಿ ಜಿ ಕೆ ಯವರು ಉಪಸ್ಥಿತರಿದ್ದು, ತಾಯಂದಿರಿಗೆ ಮಕ್ಕಳ ಪಾಲನೆಯಲ್ಲಿ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು.
ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಧಿಕಾರಿ ಎಸ್.ಜಿ ಭಟ್ ರವರು ಸ್ವಾಗತಿಸಿ ವಂದಿಸಿದರು.
