


ಬೆಳ್ತಂಗಡಿ: ತಾಲೂಕಿನಲ್ಲಿ ಕ್ರೈಸ್ತ ಬಾಂಧವರು ಗರಿಗಳ ಭಾನುವಾರವನ್ನು ಸಂಭ್ರಮದಿಂದ ಆಚರಿಸಿದರು.
ತಾಲೂಕಿನ ಎಲ್ಲ ಚರ್ಚ್ ಗಳಲ್ಲಿಯೂ ವಿಶೇಷ ಪ್ರಾರ್ಥನೆಗಳು ನಡೆಯಿತು, ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರಥಾನ ದೇವಾಲಯವಾದ ಸಂತ ಲಾರೆನ್ಸ್ ದೇವಾಲಯದಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ ಲಾರೆನ್ಸ್ ಮುಕ್ಕುಯಿ ಅವರ ಕಾರ್ಮಿಕತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.
ಗರಿಗಳ ಭಾನುವಾರದೊಂದಿಗೆ ಕ್ರೈಸ್ತರ ಪವಿತ್ರ ವಾರ ಆರಂಭವಾಗುತ್ತದೆ.
ಪ್ರಭು ಕ್ರಿಸ್ತನ ಜೆರುಸೆಲಂ ಪ್ರವೇಶನದ ನೆನಪಿನಲ್ಲಿ ಆಚರಿಸುವ ಈ ಹಬ್ಬ ಇದಾಗಿದೆ.

ಈ ಹಬ್ಬವು ಪ್ರಭು ಕ್ರಿಸ್ತರ ಶಿಲುಬೆಯ ಮರಣದ ಹಾಗೂ ಪುನರುದ್ಧಾನದ ಸ್ಮರಣೆಯನ್ನು ಆಚರಿಸುವ ಪವಿತ್ರ ವಾರದ ಮೊದಲನೆಯ ದಿನವಾಗಿದೆ.
ತಾಲೂಕಿನ ಎಲ್ಲ ಚರ್ಚ್ ಗಳಲ್ಲಿಯು ಸ್ಥಳೀಯ ಧರ್ಮಗುರುಗಳು ಹಬ್ಬದ ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸಿದರು. ಸಾವಿರಾರು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಹಬ್ಬದ ಕಾರ್ಯಕ್ರಮಗಳಲ್ಲಿ ಭಾಗಿಗಳಾದರು.


