Home ರಾಜಕೀಯ ಸಮಾಚಾರ ಮರ್ಹೂಮ್ ಹಸನ್ ಗಿಂಡಾಡಿ ಇವರ ಸ್ಮರಣಾರ್ಥ ಎಸ್‌ಡಿಪಿಐ ವತಿಯಿಂದ ಪೇರಲ್ದರಕಟ್ಟೆಯಲ್ಲಿ ಇಫ್ತಾರ್ ಮೀಟ್

ಮರ್ಹೂಮ್ ಹಸನ್ ಗಿಂಡಾಡಿ ಇವರ ಸ್ಮರಣಾರ್ಥ ಎಸ್‌ಡಿಪಿಐ ವತಿಯಿಂದ ಪೇರಲ್ದರಕಟ್ಟೆಯಲ್ಲಿ ಇಫ್ತಾರ್ ಮೀಟ್

24
0

ಬೆಳ್ತಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ತೆಂಕಕಾರಂದೂರು ಬ್ರಾಂಚ್ ಸಮಿತಿ ವತಿಯಿಂದ, ಮರ್ಹೂಮ್ ಹಸನ್ ಗಿಂಡಾಡಿ ಇವರ ಸ್ಮರಣಾರ್ಥ ಶುಕ್ರವಾರ, ಬದ್ರಿಯಾ ಜುಮ್ಮಾ ಮಸೀದಿ ಪೇರಲ್ದರಕಟ್ಟೆಯಲ್ಲಿ ಇಫ್ತಾರ್ ಮೀಟ್ ಕಾರ್ಯಕ್ರಮ ನಡೆಯಿತು.

ಎಸ್‌ಡಿಪಿಐ ತೆಂಕಕಾರಂದೂರು ಬ್ರಾಂಚ್ ಅಧ್ಯಕ್ಷರಾದ ನವಾಝ್ ಮಂಜೊಟ್ಟಿ ನೇತೃತ್ವದಲ್ಲಿ ಇಫ್ತಾರ್ ಕಾರ್ಯಕ್ರಮ ನಡೆಯಿತು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ, ಕ್ಷೇತ್ರ ನಾಯಕರಾದ ಮುಸ್ತಾಫಾ ಜಿ. ಕೆರೆ, ಅಶ್ರಫ್ ಕಟ್ಟೆ, ರೌಫ್ ಪುಂಜಾಲಕಟ್ಟೆ, ಹಾಜಿ ಶಮೀಮ್ ಯೂಸುಫ್, ವೇಣೂರು ಬ್ಲಾಕ್ ಅಧ್ಯಕ್ಷರಾದ ಅಶ್ರಫ್ ಬದ್ಯಾರು ,ಗ್ರಾ.ಪಂ. ಸದಸ್ಯ ನಿಝಾಮ್ ಕಟ್ಟೆ, ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾದ ನವಾಝ್ ಕಟ್ಟೆ, ಖತಿಬರಾದ ಶಂಸುದ್ದಿನ್ ದಾರಿಮಿ, ಮಸೀದಿಯ ನಾಯಕರಾದ ಸ್ವಾದಿಕ್ ಎಮ್.ಬಿ,ಸಿದ್ದೀಕ್ ಮಸೀದಿಬಳಿ,ಹಾಜಿ ಅಬೂಬಕ್ಕರ್ ಮಂಜೋಟ್ಟಿ ,ಹಾಜಿ ಅಬ್ದುಲ್ ಕರೀಂ ,ಅಶ್ರಫ್ ಗುಂಡೇರಿ ,ಸಂಶುದ್ದೀನ್ ಕಟ್ಟೆ ,ರಿಯಾಜ್ ಮಂಜೋಟ್ಚಿ ,ಮುಸ್ತಫಾ ಮಂಜೋಟ್ಟಿ ,ಅಸೀಪ್ ಗುಂಡೇರಿ ,ಜಮಾತ್ ಬಾಂದವರು, ಕಾರ್ಯಕರ್ತರು ಇಫ್ತಾರ್ ಕಾರ್ಯಕ್ರಮ ಪಾಲ್ಗೊಂಡರು.

LEAVE A REPLY

Please enter your comment!
Please enter your name here