Home ಅಪರಾಧ ಲೋಕ ತತಲೆಮರೆಸಿ ಕೊಂಡಿದ್ದ 34 ಕಳ್ಳತನ ಪ್ರಕರಣಗಳ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

ತತಲೆಮರೆಸಿ ಕೊಂಡಿದ್ದ 34 ಕಳ್ಳತನ ಪ್ರಕರಣಗಳ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

32
0

ಬೆಳ್ತಂಗಡಿ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ವಾರೆಂಟ್ ಅರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಪಡಂಗಡಿಯ ಲಾಡಿ ಮನೆ ನಿವಾಸಿ ಹಮೀದ್ ಯಾನೆ ಜಬ್ಬಾರ್ ಹಮೀದ್ ಯಾನೆ ಕುಂಞಿಮೋನು ಬಂಧಿತ ಆರೋಪಿ.

ಈತನನ್ನು ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕರು ಬಿ ಜಿ ಸುಬ್ಬಾಪೂರ್ ಮಠ, ಉಪ ನೀರಿಕ್ಷಕರು ಮುರಳೀಧರ್ ಮತ್ತು ಯಲ್ಲಪ್ಪ ರವರ ನಿರ್ದೇಶನದಂತೆ ಠಾಣಾ ಹೆಚ್ ಸಿ 418 ವ್ರಷಭ, ಹೆಚ್ ಸಿ 863 ಬೆಣ್ಣಿಚ್ಚನ್, ಮತ್ತು ಪಿಸಿ 2398 ಮುನಿಯ ನಾಯ್, ಪಿ ಸಿ 433 ಸುನಿಲ್ ರವರು ಪಡಂಗಡಿ ಎಂಬಲ್ಲಿಂದ ದಸ್ತಗಿರಿ ಮಾಡಿ ನ್ಯಾಯಾಧಿಶರ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಈತನ ಮೇಲೆ ದ. ಕ ಜಿಲ್ಲೆಯ ಬಂಟ್ವಾಳ, ಉಪ್ಪಿನಂಗಡಿ, ಕಡಬ, ಪುತ್ತೂರು, ವೇಣೂರ್, ಧರ್ಮಸ್ಥಳ, ಪುಂಜಾಲಕಟ್ಟೆ, ಮಂಗಳೂರು ನಗರ, ಬಂದರು ಠಾಣೆ, ಹೊರ ಜಿಲ್ಲೆಗಳಾದ ಹಾಸನದ ಬೇಲೂರು ಚಿಕ್ಕಮಂಗಳೂರು ಜಿಲ್ಲೆ N. R ಪುರ, ಕೊಪ್ಪ, ಹರಿಹರ ಪುರ, ಚಿಕ್ಕಮಂಗಳೂರು, ಮೂಡಿಗೆರೆ ಉಡುಪಿ ಜಿಲ್ಲೆ ಪಡುಬಿದ್ರೆ ಮಡಿಕೇರಿ ಹಾಗೂ ಹೊರ ರಾಜ್ಯ ಕೇರಳದಲ್ಲಿ ಸುಮಾರು 34 ಕಳ್ಳತನಾದ ಪ್ರಕರಣಗಳು ಇರುತ್ತದೆ.

LEAVE A REPLY

Please enter your comment!
Please enter your name here