ಬೆಳ್ತಂಗಡಿ; ತಾಲೂಕಿನ ಕಾಶಿಪಟ್ಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾದ್ಯಮ (ದ್ವಿಭಾಷಾ ಮಾದ್ಯಮ ) ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ.ಈ ಬಗ್ಗೆ ಸರ್ಕಾರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮನವಿಯನ್ನು ಸಲ್ಲಿಸಿದರು.
ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾದ್ಯಮ ತರಗತಿಗಳ ಜೊತೆಗೆ ಆಂಗ್ಲ ಮಾದ್ಯಮ ತರಗತಿಗಳನ್ನು ಆರಂಭಿಸಲಾಗುವುದು.ಇದರಿಂದ ಹೆಚ್ಚು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಆಕರ್ಷಿಸಬಹುದಾಗಿದೆ ಸರ್ಕಾರ ಆರಂಭಿಕವಾಗಿ 1000 ಶಾಲೆಗಳಲ್ಲಿ ಇಂತಹ ಯೋಜನೆಯನ್ನು ಜಾರಿ ಮಾಡಿದೆ.ಆಂಗ್ಲ ಮಾದ್ಯಮ ತರಗತಿ ಪ್ರಾರಂಭಕ್ಕೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರು ,ಕಾಶಿಪಟ್ಣ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕೆ ಬಂಗೇರ ಮುತುವರ್ಜಿ ವಹಿಸಿದ್ದರು.
Home ಸ್ಥಳೀಯ ಸಮಾಚಾರ ರಕ್ಷಿತ್ ಶಿವರಾಂ ಮನವಿಗೆ ಸ್ಪಂದಿಸಿದ ಸರಕಾರ ಕಾಶೀಪಟ್ಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾದ್ಯಮ...