ಬೆಳ್ತಂಗಡಿ; ಭಾನುವಾರ ಸಂಜೆಯ ವೇಳೆ ಭಾರಿ ಸಿಡಿಲು ಮಳೆಗೆ ರೆಖ್ಯ ಗ್ರಾಮದ ಸುಂದರ ಗೌಡ ಕುರುಡೇಲು ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್ ವೈಯರುಗಳು ಸಂಪೂರ್ಣ ಸುಟ್ಟು ಹೋಗಿ ದನ ಹಾಗೂ ನಾಯಿ ಸಾವಿಗೀಡಾಗಿದ ಘಟನೆ ಸಂಭವಿಸಿದೆ.
ಮನೆಗೆ ಸಿಡಿಲು ಬಡಿದಿದ್ದು ಮನೆಯ ಮೇಲ್ಪಾವಣಿಯ ಒಂದು ಭಾಗಕ್ಕೂ ಹಾನಿಯಾಗಿದೆ. ಟಿವಿ, ಫ್ಯಾನು ಸಹಿತ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ.
ಈ ವೇಳೆ ಹಟ್ಟಿಯಲ್ಲಿದ್ದ ದನ ಹಾಗೂ ಮನೆಯ ಅಂಗಳದಲ್ಲಿದ್ದ ನಾಯಿ ಸಿಡಿಲಿನ ಆಘಾತದಿಂದ ಮೃತಪಟ್ಟಿದೆ.