ಮಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್ ನ ಹನ್ನೊಂದು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಅವಕಾಶ ಪಡೆಯಲು ಈಗಾಗಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಲಾಬಿ ಶುರುವಾಗಿದೆ.
ಆದರೆ ಇದೀಗ ಅದರ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ, ದಿನೇಶ್ ಅಮಿನ್ ಮಟ್ಟು ಅವರನ್ನು ವಿಧಾನ ಪರಿಷತ್ ಸ್ಥಾನಕ್ಕೆ ಪರಿಗಣಿಸಬೇಕು ಎಂಬ ಬಲವಾದ ಆಗ್ರಹ ಕರಾವಳಿ ಜಿಲ್ಲೆಗಳಿಂದ ಕೇಳಿ ಬಂದಿದೆ. ದಿನೇಶ್ ಅಮೀನ್ ಮಟ್ಟು ಅಭಿಮಾನಿ ಬಳಗ ಎಂದು ಪೋಸ್ಟರ್ ಗಳನ್ನು ಸಮಾಜಿಕ ಜಾಲತಾಣದಮೂಲಕ ಹರಿಬಿಡಲಾಗಿದೆ. , ಸಿದ್ದರಾಮಯ್ಯ ಅವರು ಸಿಎಂ ಆಗಿ ಮೊದಲ ಅವಧಿಯಲ್ಲಿ ಅವರ ಮಾಧ್ಯಮ ಸಲಹೆಗಾರರಾಗಿದ್ದ ಮಟ್ಟು ಅವರು ಬಿಜೆಪಿ ಹಾಗೂ ಸಂಘಪರಿವಾರದ ನಿರಂತರ ಟೀಕಾ ಕಾರರಾಗಿದ್ದಾರೆ. ವಿಧಾನಪರಿಷತ್ ಸ್ಥಾನಕ್ಕಾಗಿ ಕರಾವಳಿಯಿಂದ ಹಲವರು ನಾಯಕರುಗಳು ಬೆಂಗಳೂರು ದೆಹಲಿ ಮಟ್ಟದಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅದರ ನಡುವೆ ಮಟ್ಟು ಅಭಿಮಾನಿಗಳ ಈ ಪ್ರಯತ್ನ ಯಾವ ಫಲ ನೀಡಲಿದೆಯೇ ಎಂಬುದು ಕುತೂಹಲದ ವಿಚಾರವಾಗಿದೆ.