

ಬೆಳ್ತಂಗಡಿ : ಅನುಮತಿ ಇಲ್ಲದೆ ಮರ ಕಡಿದ ಪರಿಣಾಮ ವಿದ್ಯುತ್ ವೈಯರ್ ಗೆ ಬಿದ್ದು ಮೂರು ಕಂಬ ಹಾನಿಯಾಗಿದೆ .ಇದರಿಂದ ಪಕ್ಕದ ಮನೆಯ ನಿವಾಸಿ ಮನೆಯ ಮೇಲೂ ವಿದ್ಯುತ್ ವೈಯರ್ ಬಿದ್ದಿತ್ತು. ಇದಕ್ಕೆ ಮೆಸ್ಕಾಂ ಸಹಾಯವಾಣಿಗೆ ದೂರು ನೀಡದ್ದಕ್ಕೆ ಮೂವರು ಸೇರಿ ದಂಪತಿಗಳಿಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗೆ.ಇದೀಗ ದಂಪತಿಗಳು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ನೆತ್ತಾರ ಬಳಿಯ ಹಂಡಾಲು ನಿವಾಸಿ ಅಬುಬಕ್ಕರ್ ಮನೆಯ ಅಂಗಳದಲ್ಲಿದ್ದ ಹಳೆಯ ಮರವನ್ನು ಕಡಿಯಲ್ಲಿ ಮೆಸ್ಕಾಂ ಇಲಾಖೆಗೆ ಮನವಿ ಮಾಡಿಕೊಂಡಿದ್ದರು ಇದಕ್ಕೆ ಮೆಸ್ಕಾಂ ಅಧಿಕಾರಿಗಳು ಮರ ಕಡಿಯಲು ಅನುಮತಿ ಕೊಟ್ಟಿರಲಿಲ್ಲ ಆದ್ರೆ ಅಬುಬಕ್ಕರ್ ಏಕಾಏಕಿ ಜನ ಕರೆಸಿ ಮಾ.9 ರಂದು ಮಧ್ಯಾಹ್ನ ಮರ ಕಡಿಸಿದ್ದಾರೆ. ಇದರಿಂದ ವಿದ್ಯುತ್ ವೈಯರ್ ಗೆ ಬಿದ್ದು ಮೂರು ವಿದ್ಯುತ್ ಕಂಬ ಮುರಿದು ಬಿದ್ದಿದೆ.ಅಶ್ರಫ್ ಅವರ ಮನೆಯ ಮೇಲೂ ಕೂಡ ವೈಯರ್ ಬಿದ್ದು ವಿದ್ಯುತ್ ಸಂಪರ್ಕ ಕಟ್ ಅಗಿದೆ. ಸಂಜೆ ಸುಮಾರು 3 ಗಂಟೆಗೆ ಅಶ್ರಫ್ ಮೆಸ್ಕಾಂ ಸಹಾಯವಾಣಿ 1912 ಗೆ ಕರೆ ಮಾಡಿ ದೂರು ನೀಡಿದ್ದಾರೆ. ಇದರಿಂದ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದು ದೂರು ಪಡೆದುಕೊಂಡು ಹೋಗಿದ್ದರು.
ಘಟನೆ ಬಳಿಕ ಪಕ್ಕದ ಮನೆಯ ಹನೀಫ್ ಮತ್ತು ಮಕ್ಕಳಾದ ಇರ್ಫಾನ್, ಇರ್ಷಾದ್ ಸೇರಿ ಅಶ್ರಫ್ ಮನೆಗೆ ಬಂದು ನೀನು ದೂರು ನೀಡುತ್ತಿಯಾ ಎಂದು ಹೇಳಿ ಹಲ್ಲೆ ಮಾಡಿದ್ದಾರೆ.ಸಹಾಯಕ್ಕೆ ಬಂದ ಪತ್ನಿ ಅಸ್ಮಾ ಕಾಲಿಗೆ ಹಲ್ಲೆಯಿಂದ ಗಾಯವಾಗಿದೆ ಎಂದು ಆರೋಪಿಸಲಾಗಿದೆ

ಹಂಡಾಲು ನಿವಾಸಿ ಅಶ್ರಫ್ (45) ಮತ್ತು ಪತ್ನಿ ಅಸ್ಮಾ(38). ಹಲ್ಲೆಗೊಳಾದ ದಂಪತಿಗಳು. ಸದ್ಯ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು.ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಅಶ್ರಫ್ ದೂರು ನೀಡಿದ್ದಾರೆ.
ವಿದ್ಯುತ್ ಕಂಬದ ಬಗ್ಗೆ ಮಚ್ಚಿನ ಮೆಸ್ಕಾಂ ಅಧಿಕಾರಿಗಳಿಂದ ಮಾಹಿತಿ ಪಡೆದಾಗ ಅನುಮತಿ ಇಲ್ಲದೆ ಮರವನ್ನು ಕಡಿದಿದ್ದಾರೆ ಇದಕ್ಕೆ ಮೆಸ್ಕಾಂ ಸಹಾಯವಾಣಿಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ಹೋಗಿ ವರದಿ ಮಾಡಿಕೊಂಡಿದ್ದು. ಅಬುಬಕ್ಕರ್ ಅವರಿಗೆ ಮೂರು ಕಂಬಕ್ಕೆ ಹಾನಿ ಮಾಡಿದ್ದಕ್ಕೆ ಸುಮಾರು 30 ರಿಂದ 35 ಸಾವಿರ ದಂಡ ಹಾಕಲಾಗುತ್ತೆ ಎಂದಿದ್ದಾರೆ.