Home ಅಪರಾಧ ಲೋಕ ಪುತ್ತೂರು; ಅಕ್ರಮ ಗೋಸಾಗಾಟ ಪ್ರಕರಣ: ದಾಖಲೆಗಳಿಲ್ಲದೆ ದನ‌ ಮಾರಾಟ ಮಾಡಿದ‌ ಆರೋಪ ಶಿವಪ್ರಸಾದ್ ಮನೆ ಮನೆ,...

ಪುತ್ತೂರು; ಅಕ್ರಮ ಗೋಸಾಗಾಟ ಪ್ರಕರಣ: ದಾಖಲೆಗಳಿಲ್ಲದೆ ದನ‌ ಮಾರಾಟ ಮಾಡಿದ‌ ಆರೋಪ ಶಿವಪ್ರಸಾದ್ ಮನೆ ಮನೆ, ಕೊಟ್ಟಿಗೆ ಜಪ್ತಿ

1
0

ಪುತ್ತೂರು: ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಶಿವಪ್ರಸಾದ್‌ಗೆ ಸೇರಿದ ಮನೆ ಹಾಗೂ ಕೊಟ್ಟಿಗೆ ಪರಿಸರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
2026ರ ಅಕ್ಟೋಬರ್ 5ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಕ್ರಮ ಗೋಸಾಗಾಟಕ್ಕೆ ಸಂಬಂಧಿಸಿದಂತೆ ಠಾಣೆಯಲ್ಲಿ ಅ.ಕ್ರ. 125/2026ರಂತೆ ಪ್ರಕರಣ ದಾಖಲಾಗಿತ್ತು. ಆರೋಪಿತ ಶಿವಪ್ರಸಾದ್ ತನ್ನ ಮನೆಯಲ್ಲಿದ್ದ ಜಾನುವಾರುಗಳನ್ನು ಅಗತ್ಯ ದಾಖಲೆಪತ್ರಗಳನ್ನು ಪಡೆಯದೇ ಅಕ್ರಮವಾಗಿ ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ, ನಿಯಮಾನುಸಾರ ಕ್ರಮ ಕೈಗೊಂಡ ಪೊಲೀಸರು ಅಕ್ಟೋಬರ್ 8ರಂದು ಆರೋಪಿತನ ಮನೆ ಹಾಗೂ ಕೊಟ್ಟಿಗೆ ಪರಿಸರವನ್ನು ಜಪ್ತಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here