2026-27 ನೇ ಸಾಲಿನ ದ್ವಿತೀಯ ತ್ರೈಮಾಸಿಕ ಜಿಲ್ಲಾ ಕೆ. ಡಿ.ಪಿ ಪ್ರಗತಿ ಪರಿಶೀಲನ ಸಭೆಯು ದಿನಾಂಕ 15-09-2026ರ ಮಂಗಳವಾರ ಪೂರ್ವಹ್ನ 11.00 ಗಂಟೆಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ ಯು. ಟಿ. ಖಾದರ್ ಇವರ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್ ನೇತ್ರಾವತಿ ಸಂಭಾಗಣ ಮಂಗಳೂರು ಇಲ್ಲಿ ನಡೆಯಲಿರುತ್ತದೆ ಎಂದು ಜಿಲ್ಲಾ ಕೆ.ಡಿ.ಪಿ. ಸದಸ್ಯರಾದ ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲ ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಆದ್ದರಿಂದ ಸಾರ್ವಜನಿಕರು ಸರಕಾರಿ ಕಾಮಗಾರಿಗಳ ಹಾಗೂ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ವಿಳಂಬದ ಕುರಿತು ಯಾವುದೇ ಮಾಹಿತಿಗಳನ್ನು ಕಛೇರಿಗೆ ನೀಡುವಂತೆ ಕೋರಲಾಗಿರುತ್ತದೆ.




