Home ಸ್ಥಳೀಯ ಸಮಾಚಾರ ಧರ್ಮಸ್ಥಳ: ಹದಗೆಟ್ಟ ನೇರ್ತನೆ ರಸ್ತೆ; ಟಿ.ವಿ‌ ದೇವಸ್ಯ ನೇತೃತ್ವದಲ್ಲಿ   ಸ್ಥಳೀಯರಿಂದ ಶ್ರಮದಾನದ ಮೂಲಕ ದುರಸ್ತಿ

ಧರ್ಮಸ್ಥಳ: ಹದಗೆಟ್ಟ ನೇರ್ತನೆ ರಸ್ತೆ; ಟಿ.ವಿ‌ ದೇವಸ್ಯ ನೇತೃತ್ವದಲ್ಲಿ   ಸ್ಥಳೀಯರಿಂದ ಶ್ರಮದಾನದ ಮೂಲಕ ದುರಸ್ತಿ

1
0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ನೇರ್ತನೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ವಾಹನ ಸಂಚಾರವೇ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದ್ದು ಮಾಜಿ ಗ್ರಾ.ಪಂ‌ ಸದಸ್ಯ ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ.ವಿ ದೇವಸ್ಯ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಭಾ‌ನುವಾರ ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡಿದರು.
ಮಳೆ ಕಡಿಮೆಯಾದರೂ ಗ್ರಾಮಪಂಚಾಯತು ಅಡಳಿತ ಕನಿಷ್ಟ ದುರಸ್ತಿಗೂ ಮುಂದಾಗಿರಲಿಲ್ಲ ಈ ಹಿನ್ನಲೆಯಲ್ಲಿ ಇದೀಗ ಸ್ಥಳೀಯರ ನೇತೃತ್ವದಲ್ಲಿ ರಸ್ತೆಯ ದುರಸ್ತಿ ಕಾರ್ಯವನ್ನು ಮಾಡಲಾಗಿದೆ. ತಮ್ಮದೇ ಖರ್ಚಿನಲ್ಲಿ ಕಲ್ಲಿನ ಹುಡಿಯನ್ನು ತಂದು ಸುಮಾರು ಎರಡು ಕಿ.ಮೀ‌ ವರೆಗೆ ರಸ್ತೆಯಲ್ಲಿ ಬಿದ್ದಿದ್ದ ಹೊಂಡಗಳನ್ನು ಮುಚ್ಚುವ ಕಾರ್ಯ ಮಾಡಿದ್ದಾರೆ.
ಸ್ಥಳೀಯ ಮುಖಂಡರುಗಳಾದ ಸದಾಶಿವ, ತೋಮಸ್, ಅಬ್ರಹಾಂ ಜೇಮ್ಸ್, ಹಾಗೂ ಸ್ಥಳೀಯ ನಿವಾಸಿಗಳು ಶ್ರಮದಾನದಲ್ಲಿ ಭಾಗಿಗಳಾದರು. ಕೆಲವು ವರ್ಷಗಳ‌ ಹಿಂದೆ ರಸ್ತೆ ಕಾಂಕ್ರಿಟೀಕರಣಕ್ಕೆಂದು ಜಲ್ಲಿ ತಂದು ಹಾಕಿದ್ದರೂ ಕಾಮಗಾರಿ ನಡೆದೆ‌ ಇರಲಿಲ್ಲ‌ ಈ ಮಳೆಗಾಲದಲ್ಲಂತೂ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿತ್ತು.

LEAVE A REPLY

Please enter your comment!
Please enter your name here