ಚಾರ್ಮಾಡಿ ಘಾಟಿಯ ಎಂಟು ಒಂಬತ್ತನೇ ತಿರುವಿನ ಮಧ್ಯೆ ಒಂಟಿ ಸಲಗ ಭಾನುವಾರ ರಾತ್ರಿ ಮತ್ತೆ ಕಂಡುಬಂದಿದೆ.
ಭಾನುವಾರ ರಾತ್ರಿ 8ರ ಸುಮಾರಿಗೆ ಕಾಡಾನೆ ರಸ್ತೆಯ ತೀರಾ ಬದಿಯಲ್ಲಿ ಇದ್ದು ಕೊಂಚ ಹೊತ್ತು ವಾಹನ ಸವಾರರು ಎರಡು ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದರು. ಆನೆ ಕಾಡಿನತ್ತ ತಿರುಗುತ್ತಿದ್ದಂತೆ ವಾಹನಗಳು ಓಡಾಟ ನಡೆಸಿದವು.
ಕಳೆದ ಎರಡು ದಿನಗಳ ಹಿಂದೆ ಘಾಟಿ ಪ್ರದೇಶದಲ್ಲಿ ಹಗಲು ಹೊತ್ತು ಕಂಡುಬಂದಿತ್ತು.
ಘಾಟಿ ಪರಿಸರದಲ್ಲಿ ಭಾನುವಾರ ಉತ್ತಮ ಮಳೆಯಾಗಿದ್ದು ಮಂಜು ಕವಿದ ವಾತಾವರಣವು ಇದ್ದು ಆನೆ ಇರುವುದು ತೀರ ಸಮೀಪಕ್ಕೆ ಬರುತ್ತಿದ್ದಂತೆ ವಾಹನ ಸವಾರರಿಗೆ ತಿಳಿದುಬಂದಿತ್ತು. ಆನೆ ಕಂಡ ಜೀಪು ಚಾಲಕನೋರ್ವ ಗಲಿಬಿಲಿಗೊಂಡ ಕಾರಣ ಆನೆಯ ಸಮೀಪವೇ ವಾಹನ ಚರಂಡಿಗೆ ಇಳಿದ ಘಟನೆಯು ನಡೆಯಿತು.