ಬೆಳ್ತಂಗಡಿ: ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೊರೆನ್ಸಿಕ್ಸ್ ಸೆಂಟರ್ ಕೆಎಂಸಿ ಮಣಿಪಾಲ ವತಿಯಿಂದ ಕೆಎಂಸಿ ಡಾ.ಟಿ.ಎಂ.ಎ ಪೈ ಸಭಾಂಗಣದಲ್ಲಿ ಸೆ.1 ರಂದು ಪಶ್ಚಿಮ ವಲಯ ಮಟ್ಟದ 8ನೇ ಪೊಲೀಸ್ ಕರ್ತವ್ಯ ಕೂಟ ಸಮಾರಂಭ ನಡೆಯಿತು. ವೈಜಾನಿಕ ತನಿಖಾ ವಿಭಾಗ ಸ್ಪರ್ಧೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ವೃತ್ತ ನೀರಿಕ್ಷಕ ರವಿ.ಬಿಎಸ್ಅವರಿಗೆ ಐದು ಪ್ರಶಸ್ತಿ, ಅಪಾರಾಧ ಸ್ಥಳ ನೀರೀಕ್ಷಣೆ ಹಾಗೂ ಪೊಟ್ರೆಟ್ ವಿಭಾಗದಲ್ಲಿ ಪುಂಜಾಲಕಟ್ಟೆ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿಜಯಕುಮಾರ್ ರೈ ಎರಡು ಪ್ರಶಸ್ತಿ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಪ್ರಸನ್ನ ಮತ್ತು ವೇಣೂರು ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಮೋಹನ್ ಅವರಿಗೆ ಜಾವ ಪ್ರೋಗ್ರಮಿಂಗ್ ವಿಭಾಗದಲ್ಲಿ ಪಶ್ಚಿಮ ವಲಯ ಐಜಿಪಿ ಆರ್ ಚೇತನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.



ಮಣಿಪಾಲ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಮಂಗಳೂರು ವಲಯ ಅಭಿಯೋಜನೆ ಇಲಾಖೆ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ ಕೆ., ಮಂಗಳೂರು ಆರ್.ಎಫ್.ಎಸ್.ಎಲ್. ಉಪನಿರ್ದೇಶಕಿ ಸುಜಾತಾ ಕೆ.ಎಂ. ಉಪಸ್ಥಿತರಿದ್ದರು. ಪಶ್ಚಿಮ ವಲಯ ಬೆರಳಚ್ಚು ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಸೋಮ ಶೇಖರ್ ಸ್ವಾಗತಿಸಿದರು. ಶಿವಾನಂದ ನಾಯರಿ ನಿರೂಪಿಸಿದರು










