Home ರಾಜಕೀಯ ಸಮಾಚಾರ ಚಾಮರಾಜ ನಗರದಲ್ಲಿ ಅರಣ್ಯ ಇಲಾಖೆಯವರಿಂದ‌ಮೂವರು ರೈತರ ಹತ್ಯೆ ಖಂಡನೀಯ ಬಿ.ಎಂ ಭಟ್

ಚಾಮರಾಜ ನಗರದಲ್ಲಿ ಅರಣ್ಯ ಇಲಾಖೆಯವರಿಂದ‌ಮೂವರು ರೈತರ ಹತ್ಯೆ ಖಂಡನೀಯ ಬಿ.ಎಂ ಭಟ್

1
0

ಚಾಮರಾಜ ನಗರದಲ್ಲಿ ಸ್ವತಂತ್ರ ದೊರೆತ ದಿನವೇ ಅಧಿಕಾರಿಗಳ ಅಕ್ರಮ ನಡೆ ಖಂಡನೀಯ
ಭಾರತ ದೇಶ ಇಂದು 80 ನೇ ಸ್ವಾತಂತ್ರೋತ್ಸವ ಆಚರಣೆಯ ಗುಂಗಿನಲ್ಲಿದ್ದರೆ ಚಾಮರಾಜ ನಗರದಲ್ಲಿ  ಮೂವರು ಬಡ ರೈತರನ್ನು ಅರಣ್ಯ ಅಧಿಕಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿರುವುದು ಅತ್ಯಂತ ವಿಷಾಧನೀಯ ಸಂಗತಿ ಮತ್ತು ಖಂಡನೀಯ ವಿಚಾರ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಹೇಳಿದ್ದಾರೆ.
ಚಾಮರಾಜ ನಗರದ ಮರಿಮಂಗಲ ಗ್ರಾಮದಲ್ಲಿ ಕಾಡಿಗೆ ಹಸು ಹುಡುಕಲು ಹೋದ ಮೂವರು ರೈತರನ್ನು ಶೂಟೌಟ್ ಮಾಡಲಾಗಿದೆ ಎಂಬ ವರದಿಯನ್ನು ಕೇಳಿ ಈ ಅಮಾನವೀಯ ಘಟನೆಯನ್ನು ಖಂಡಿಸಿ ಅವರು ಈ ಹೇಳಿಕೆ ನೀಡಿದರು. ರಾಷ್ಟಿçÃಯ ಉದ್ಯಾನವನ, ಆನೆ ಕಾರಿಡಾರ್, ಪರಿಸರ ಸೂಕ್ಮ ಪ್ರದೇಶ, ವನ್ಯ ಜೀವಿಗಳ ರಕ್ಷಣೆ ಎಂದೆಲ್ಲ ಹೆಸರಲ್ಲಿ ಅರಣ್ಯ ರಕ್ಷಣೆಯ ಹೆಸರಲ್ಲಿ ಮಾನವರ ಭಕ್ಷಣೆ ನಡೆಯುತ್ತಿರುವುದು ಅತ್ಯಂತ ಖಂನೀಯ ವಿಚಾರವಾಗಿದೆ ಎಂದರು. ದೇಶ ಪ್ರಜಾಪ್ರಭುತ್ವ, ಸ್ವತಂತ್ರ, ಸ್ವಾಭಿಮಾನ ಮಾನವಹಕ್ಕುಗಳ ರಕ್ಷಣೆ ಎಂದೆಲ್ಲಾ ಹೇಳುತ್ತಾ ಸರ್ವಾದಿಕಾರಿ ಅಧಿಕಾರಿಗಳ ಹಿಡಿತಕ್ಕೆ ಬಿದ್ದಿದ್ದೇವೆಯೇ ಎಂಬ ಅನುಮಾನ ಬರುತ್ತಿದೆ ಎಂದರು. ನಮ್ಮ ಪವಿತ್ರ ಸಂವಿಧಾನವನ್ನೇ ತುಳಿಯುವ ಇಂತಹ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಅಗತ್ಯವಿದೆ ಎಂದರು. ಸರಕಾರ ಈ ಬಗ್ಗೆ ತಕ್ಷಣ ಪರಿಶೀಲನೆ ನಡೆಸಿ ಈ ರೀತಿ ಕಾನೂನು ಬಾಹಿರವಾಗಿ ಬಡ ರೈತರನ್ನು ಕೊಲೆ ಮಾಡಿದ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಿ ಬಂದಿಸಬೇಕು ಮತ್ತು ಕೊಲೆಗೀಡಾದ ರೈತರ ಕುಟುಂಬಗಳಿಗೆ ತಲಾ 50 ಲಕ್ಷ ರೂಗಳ ಪರಿಹಾರ ಘೋಷಿಸಬೇಕು ಎಂದವರು ಆಗ್ರಹಿಸಿದರು.
ಇಂತಹ ಅಮಾನವೀಯ ನಡವಳಿಕೆ, ಅಧಿಕಾರಿಗಳ ಸರ್ವಾದಿಕಾರೀ ನಡೆಗಳು ನಾಳೆ ಕಸ್ತೂರಿ ರಂಗನ್ ವರದಿ ಜಾರಿಯಾಗುವ ಪ್ರದೇಶದ ರೈತರೂ ಅನುಭವಿಸಬೇಕಾದೀತು ಎಂದೇ ನಾವು ಸದ್ರಿ ವರದಿ ಜಾರಿಯಾಗಬಾರದು ಎನ್ನಲು ಪ್ರಮುಖ ಕಾರಣವೂ ಆಗಿದೆ ಎಂದರು. ಇದನ್ನು ಪ್ರಧಾನಿ ನರೇಂದ್ರ ಮೋದಿ ನೇತೃವದ ಸರಕಾರ ಮನಗಾಣಬೇಕು ಎಂದು ಅವರು ವಿವರಿಸಿದರು. ಇಂತಹ ಅಕ್ರಮ ಅಧಿಕಾರಿಗಳ ಹಸ್ತ ಅಧಿಕಾರ ಎಂಬ ಅಸ್ತç ನೀಡಿ ಜನರ ಬದುಕನ್ನು ನಾಶ ಮಾಡಲು ಅವಕಾಶ ನೀಡಬಾರದು ಎಂದರು. ಈ ಬಗ್ಗೆ ಸರಕಾರ ಎಚ್ಚರ ವಹಿಸಬೇಕೆಂದೂ ಅವರು ಕೇಂದ್ರ ಹಾಗೂ ರಾಜ್ಯದ ಎರಡೂ ಸರಕಾರವನ್ನು ಆಗ್ರಹಿಸಿದರು.

LEAVE A REPLY

Please enter your comment!
Please enter your name here