Home ಅಪರಾಧ ಲೋಕ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ದ ಹೋರಾಟಕ್ಕೆ ಧಾರ್ಮಿಕ ಬಣ್ಣ ನೀಡಿ ಅವಹೇಳನ ವ್ಯಕ್ತಿಯ ಬಂಧನ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ದ ಹೋರಾಟಕ್ಕೆ ಧಾರ್ಮಿಕ ಬಣ್ಣ ನೀಡಿ ಅವಹೇಳನ ವ್ಯಕ್ತಿಯ ಬಂಧನ

0
2

ಮಂಗಳೂರು: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಧಾರ್ಮಿಕ ವಿಚಾರಗಳಿಗೆ ಥಳಕು ಹಾಕಿ, ಜಾಲತಾಣಗಳಲ್ಲಿ ಸೌಹಾರ್ದಕ್ಕೆ ಧಕ್ಕೆ ತರುವಂತಹ ಅವಹೇಳನಕಾರಿ ಬರಹ ಪ್ರಸಾರ ಮಾಡಿದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕೇಪು ನಿವಾಸಿ ಭರತ್ (36) ಬಂಧಿತ ಆರೋಪಿ.

‘KFC KHANDIGA’ ವಾಟ್ಸ್‌ ಆಪ್ ಗ್ರೂಪ್‌ನ ಸದಸ್ಯರಾಗಿದ್ದು, ಜುಲೈ 23ರಂದು ಸದ್ರಿ ಗ್ರೂಪ್‌ನಲ್ಲಿ ಹರಿಯಬಿಡಲಾಗಿದ್ದ ಸ್ಕ್ರೀನ್ ಶಾಟ್ ಒಂದನ್ನು ವೀಕ್ಷಿಸಿದ್ದರು. ಅದರಲ್ಲಿ ಎರಡು ಸಮುದಾಯಗಳ ನಡುವೆ ವೈಮನಸ್ಸು ಮೂಡಿಸುವ

ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗ ತರುವಂತಹ ಕೋಮು ಪ್ರಚೋದನಾತ್ಮಕ ಬರಹಗಳಿದ್ದವು. ಈ ಕುರಿತು ಪರಿಶೀಲನೆ ನಡೆಸಿದಾಗ, ಆರೋಪಿ ಭರತ್ ಎಂಬಾತ ಈ ಅವಹೇಳನಕಾರಿ ಪೋಸ್ಟ್‌ನ್ನು ತನ್ನ ವಾಟ್ಸ್ ಆಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿರುವುದು ಬೆಳಕಿಗೆ ಬಂದಿತ್ತು.

ಈ ಕುರಿತು ಹನೀಫ್ ಬಂಟ್ವಾಳ ಅವರ ದೂರಿನನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ

NO COMMENTS

LEAVE A REPLY

Please enter your comment!
Please enter your name here