ಬೆಳ್ತಂಗಡಿ; ಮೇದಿನ ಎಲ್ಲಾ ದಿನದಂತಲ್ಲ ಜಗತ್ತಿನ ಅತ್ಯಂತ ದೊಡ್ಡ ಶಕ್ತಿಯಾದ ದುಡಿಯುವ ಜನರ ದಿನವಾಗಿದ್ದು, ಕಾರ್ಮಿಕ ವರ್ಗಕ್ಕೆ ಹಕ್ಕು, ಶಕ್ತಿ ತುಂಬಿದ ದಿನವೇ ಈ ಮೇದಿನ ಎಂದು ಸಿಪಿಐ(ಎಂ ರಾಜ್ಯ ಸಮಿತಿ ಸದಸ್ಯರಾದ ಮುನೀರ್ ಕಾಟಿಪಳ್ಳ ಹೇಳಿದರು.
ಅವರು ಇಂದು ಬೆಳ್ತಂಗಡಿಯ ಜಮಾಯಿತುಲ್ ಫಲಾಹ್ ಸಭಾ ಭವನದಲ್ಲಿ ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ಮೇದಿನಾಚರಣೆಯ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಕಾರ್ಮಿಕ ವರ್ಗದ ತ್ಯಾಗ ಬಲಿದಾನಗಳಿಂದ ಕೆಂಬಾವುಟ ಹಿಡಿದು ತಂದ ಕಾರ್ಮಿಕ ವರ್ಗದ ಹಕ್ಕು ಸವಲತ್ತುಗಳನ್ನು ಕಿತ್ತೆಸೆಯುತ್ತಾ ಇರುವ ಕೇಂದ್ರದ ಬಿಜೆಪಿ ಸರಕಾರದ ನಡೆ ಖಂಡನೀಯ ಹಾಗೂ ಇದು ಬಿಜೆಪಿ ಕಾರ್ಮಿಕ ವರ್ಗಕ್ಕೆ ಮಾಡುವ ಮಹಾದ್ರೋಹವಾಗಿದೆ ಎಂದರು. ಕಳೆದ 6 ವರ್ಷಗಳಿಂದ ಬಿಜೆಪಿಗೆ 6 ಶಾಸಕರನ್ನು ನೀಡಿದ್ದರೂ, ಕಳೆದ 33 ವರ್ಷಗಳಿಂದ ಬಿಜೆಪಿ ಎಂಪಿ ಯನ್ನೇ ಗೆಲ್ಲಿಸಿದ್ದರು ಇಲ್ಲಿಯ ಬೀಡಿ ಕಾರ್ಮಿಕರ ದುಡಿದ ವೇತನ ಕೊಡಿಸಲಾಗದ ಇವರಿಂದ ಜಿಲ್ಲೆಗೆ ಇನ್ನೇನು ಪ್ರಯೋಜನ ದೊರೆತೀತು ಹೇಳಿ? ಇಂತಹ ಕಾರ್ಪರೇಟು ಪರವಾದ, ಕಾರ್ಮಿಕ ವರ್ಗದ, ರೈತ ವರ್ಗದ ವಿರುದ್ದ ಇರುವ ಸರಕಾರದ ವಿರುದ್ದ ಸಮರಶೀಲ ಹೋರಾಟಗಳು ನಡೆಯಬೇಕಲು ಮತ್ತು ಅಂತಹ ಸರ್ವಾದಿಕಾರಿ ಸರಕಾರವನ್ನು ಕಿತ್ತೆಸೆಯಲು ಕಾರ್ಮಿಕ ವರ್ಗಕ್ಕೆ ಸಾದ್ಯವಾಗಬೇಕು ಎಂದರು.
ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಕಾರ್ಮಿಕ ನಾಯಕ ಬಿ.ಎಂ.ಭಟ್ ಅವರು ಮಾತಾಡುತ್ತಾ 1886 ರಂದು 8 ಗಂಟೆಯ ಕೆಲಸ. 8 ಗಂಟೆ ವಿಶ್ರಾಂತಿ, 8 ಗಂಟೆ ಮನೋರಂಜನೆ ಎಂಬ ಘೋಷಣೆಯಡಿ ಚಿಕಾಗೋದಲ್ಲಿ ಕಾರ್ಮಿಕರ ತ್ಯಾಗ ಬಲಿದಾನದ ಹೊರಾಟಕ್ಕೆ ಸಿಕ್ಕಜಯದಿಂದ ಇಂದು ನಾವು ಉಸಿರಾಡುತ್ತಾ ಬದುಕುತ್ತಿದ್ದೇವೆ. ಕಾರ್ಮಿಕರ ಇಂದಿನ ಈ ಬದುಕಿಗೆ ಮೂಲ ಶಕ್ತಿಯೇ ಕಮ್ಯೂನಿಸ್ಟ್ ಮ್ಯಾನುಪ್ಯಾಸ್ಟೋ. ಆದರೆ ಇಂದು ನರೇಂದ್ರ ಮೋದಿ ಸರಕಾರ ದುಡಿಯುವ ಜನರ ಹಕ್ಕು ಸವಲತ್ತುಗಳ ಕಿತ್ತೆಸೆಯುವುದನ್ನು ನೋಡುತ್ತಾ ಸುಮ್ಮನೆ ಕೂತರೆ ಇದು ನಾವು ನಮ್ಮ ಹಿರಿಯರಿಗೆ ಮಾಡುವ ದ್ರೋಹ ಮಾತ್ರವಲ್ಲ ನಮ್ಮ ಪೀಳಿಗೆಗೆ ಮಾಡುವ ವಂಚನೆಯೂ ಆಗಿದೆ ಎಂದರು.
ಅಂದು ಹರ ದೇವೆರೆಂದರೆ ರಾಕ್ಷಸರು ಎನ್ನುತ್ತಾ ಹರಿಯ ಪೂಜಿಸುವರೇ ನಿಜವಾದ ಭಕ್ತರು ಎಂದು ಹರ ಭಕ್ತರ ಕೊಲ್ಲುತ್ತಿದ್ದಂತೆ ಇಂದು ರಾಮನೊಬ್ಬನೇ ದೇವರೆಂದು ಇತರ ದೇವರನ್ನು ನಂಬುವವರ ದ್ರೋಹಿಗಳೆಂದು ಹೀಯಾಳಿಸುತ್ತಾ ಜನರನ್ನು ಮೌಡ್ಯತೆಯಲ್ಲಿ ಮುಳುಗಿಸಿ ಬಂಡವಾಳದಾರರ ಹಿತ ಕಾಪಾಡುವ ಸರಕಾರದ ಅಡಿಯಲ್ಲಿ ನಾವಿದ್ದೇವೆ. ಇಂತ ಕಾರ್ಮಿಕ ವರ್ಗದ ರೈತ ವರ್ಗದ ವಿರೋದಿ ಸರಕಾರದ ವಿರುದ್ದ ಸಮರ ಶೀಲ ಹೋರಾಟಕ್ಕೆ ಸಿದ್ದರಾಗಲು ನಮಗೆ ಈ ಮೇ ದಿನದ ಸ್ಪೂರ್ತಿ ಸಹಕಾರಿಯಾಗಲಿ ಎಂದರು. ಕಳಕೊಳ್ಳುವುದು ಸುಲಭ ಮತ್ತೆ ಪಡೆಯುವುದು ಕಷ್ಟವಿದೆ ಎಂದರು
ಈ ಸಂದರ್ಭ ಮಾತನಾಡಿದ ರೈತ ಮುಖಂಡ ಶ್ಯಾಮರಾಜ್ ಅವರು ಚಾಲಕ ರಸ್ತೆಯಲ್ಲಿ ಸರಿಯಾಗಿ ಗಾಡಿ ಓಡಿಸದಿದ್ದರೆ ಜನ ಕೂರಲು ಹೇಗೆ ಒದ್ದಾಡಿತ್ತಾ ಚಾಲಕನಿಗೆ ದಬಾಯಿಸುತ್ತಾರೋ ಅದೇ ರೀತಿ ದೇಶದ ಚಾಲಕ ದೇಶವನ್ನು ಗುಂಡಿಗಳಿಗೆ ಹಾಕುತ್ತಾ, ನಾಶದತ್ತ ಚಲಾಯಿಸುವಾಗ ಮೌನವಾಗಿದ್ದರೆ ಬದುಕೇ ನಾಶವಾದೀತು ಎಚ್ಚರದಿಂದ ಮುನ್ನಡೆಯೋಣ ಎಂದರು.
ಮೊದಲಿಗೆ ಶ್ಯಾಮರಾಜ್ ಎಲ್ಲರನ್ನೂ ಸ್ವಾಗತಿಸಿ ಕೊನೆಗೆ ಜಯಶ್ರೀ ವಂದಿಸಿದರು. ವೇದಿಕೆಯಲ್ಲಿ ಸಿಪಿಐಎಂ ತಾಲೂಕು ಮುಖಂಡರುಗಲಾದ ನೆಬಿಸಾ, ಈಶ್ವರಿ, ಕಾರ್ಮಿಕ ಮುಖಂಡರುಗಳಾದ ರಝಾಕ್ ಬಿ.ಎ., ಜೆ.ಎಂ.ಎಸ್ ನ ಕಿರಣಪ್ರಭಾ, ಕುಮಾರಿ, ಯುವಜನ ನಾಯಕ ಶ್ರೀನಿವಾಸ ಲ್ಯಾಲ, ವಿದ್ಯಾರ್ಥಿ ನಾಯಕ ವಿನುಶರಮಣ ಇದ್ದರು. ಸಮಾರಂಭದಲ್ಲಿ ಪುಷ್ಪಾ, ರಾಮಚಂದ್ರ, ಅಶ್ವಿತ, ಅಭಿ಼ಷೇಕ್, ಜಯರಾಮ ಮಯ್ಯ, ಫಾರೂಕ್ ಮಡಂಜೋಡಿ, ವಿಶ್ವನಾಥ ಶಿಬಾಜೆ, ಪ್ರದೀಪ್, ಡಾಗಯ ಗೌಡ ಕಳೆಂಜ, ಜನಾರ್ಧನ ಆಚಾರ್ಯ ಕಳೆಂಜ, ಮೊದಲಾದವರು ಇದ್ದರು.