Home ಅಪಘಾತ ಬೆಳ್ತಂಗಡಿ; ಹತ್ಯಡ್ಕದಲ್ಲಿ ರಸ್ತಗೆ ಬಿದ್ದ ಹೆಮ್ಮರ ಸಂಚಾರ ಅಸ್ತವ್ಯಸ್ತ

ಬೆಳ್ತಂಗಡಿ; ಹತ್ಯಡ್ಕದಲ್ಲಿ ರಸ್ತಗೆ ಬಿದ್ದ ಹೆಮ್ಮರ ಸಂಚಾರ ಅಸ್ತವ್ಯಸ್ತ

0
5

ಬೆಳ್ತಂಗಡಿ: ಭಾರೀ ಗಾಳಿ ಮಳೆಯಿಂದಾಗಿ ಅರಸಿನಮಕ್ಕಿ ಕೊಕ್ಕಡ ಮುಖ್ಯ ರಸ್ತೆಯ ಹತ್ಯಡ್ಕ ಗ್ರಾಮದ ಪಲಸ್ತಡ್ಕ ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಜೂ.23 ಮಂಗಳವಾರ ಮಧ್ಯಾಹ್ನ ನಡೆದಿದೆ.
ಮರವು ವಿದ್ಯುತ್ ತಂತಿಯ ಮೇಲೆ ಬಿದ್ದ ಕಾರಣ ವಿದ್ಯುತ್ ಕಂಬವೂ ಮುರಿದು ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟನಕದ ಶಿಶಿಲ -ಅರಸಿನಮಕ್ಕಿ ನಿರ್ವಹಣಾ ತಂಡದ ಸದಸ್ಯರಾದ ಅವಿನಾಶ್ ಬಿಡೆ, ಆನಂದ ನಾಯ್ಕ, ರಮೇಶ್ಚರ ಕಟ್ಟ,ಉಮೇಶ್ ಶಿಶಿಲ, ಸ್ಥಳಕ್ಕೆ ಆಗಮಿಸಿ ಸ್ಥಳೀಯರಾದ ಶಿವರಾಮ ಫಲಸ್ತಡ್ಕ ಹಾಗೂ ಶಶಿಕಾಂತ್ ಉಪ್ಪರಡ್ಕ ಇವರೊಂದಿಗೆ ಸೇರಿ ಮರವನ್ನು ತೆರವುಗೊಳಿಸುವ ಕಾರ್ಯ ಮಾಡಿದ್ದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮರ ತೆವುಗೊಳಿಸುವ ವರೆಗೂ ವಾಹನಗಳು ರಸ್ತೆಯ ಎರಡೂ ಬದಿಯಲ್ಲಿ ಕಾಯಬೇಕಾಗಿ ಬಂತು.

NO COMMENTS

LEAVE A REPLY

Please enter your comment!
Please enter your name here