ಬೆಳ್ತಂಗಡಿ : ಗರ್ಡಾಡಿಯಲ್ಲಿರುವ ಪಟ್ಟಾ ಜಾಗಕ್ಕೆ ಆರೋಪಿಗಳು ಅಕ್ರಮವಾಗಿ ಪ್ರವೇಶ ಮಾಡಿ ಕೈಯಿಂದ ಮತ್ತು ಲೈಸೆನ್ಸ್ ಇಲ್ಲದ ಗನ್ ನಿಂದ ಹಲ್ಲೆ ಮಾಡಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 8 ಮಂದಿ ಆರೋಪಿಗಳ ವಿರುದ್ಧ ಆರ್ಮ್ಸ್ ಆಕ್ಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಸಾರಾಂಶ: ದೂರುದಾರರಾದ ಪಿ.ಆರ್.ಮನೋಹರ ಎಂಬವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದು ನೀಡಿದ ಪಿರ್ಯಾದಿಯ ಸಾರಾಂಶವೇನೆಂದರೆ ದಿನಾಂಕ: 24.04.2026 ರಂದು 12:30 ಗಂಟೆಗೆ ಮನೋಹರ ಹಾಗೂ ಅವರ ವಕೀಲೆಯಾದ ಟಿಸ್ಮಿ ಮತ್ತು ಶಾಂತಲಾ ರಾಜೇಶ್ ಪ್ರಭು ಹಾಗೂ ಅವರ ಕೆಲಸದವರ ಜೊತೆಯಲ್ಲಿ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದಲ್ಲಿರುವ ಅವರ ಪಟ್ಟಾ ಜಾಗಕ್ಕೆ ಭೇಟಿ ನೀಡಿದಾಗ ಆರೋಪಿದಾರರಾದ ಗೋಪ ಕುಮಾರ್, ಶ್ರೀಜಾ ಗೋಪ ಕುಮಾರ್, ಸುಮೇಶ್ ಕುಮಾರ್, ಅಂಜಿ ಸುಮೇಶ್ ಕುಮಾರ್, ರಾಮು ಯಾನೆ ಬಾಬು, ಧೂಮ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ಶಶಿರಾಜ್ ಶೆಟ್ಟಿ ಇವರುಗಳು ಆಕ್ರಮವಾಗಿ ಪ್ರವೇಶಿಸಿ ಕೈಯಿಂದ ಹಾಗೂ ಲೈಸನ್ಸ್ ಇಲ್ಲದ ಗನ್ ನಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲು: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮನೋಹರ್ ನೀಡಿದ ದೂರಿನ ಮೇರೆಗೆ ಎ.26 ರಂದು ಆರೋಪಿಗಳಾದ ಗೋಪ ಕುಮಾರ್, ಶ್ರೀಜಾ ಗೋಪ ಕುಮಾರ್, ಸುಮೇಶ್ ಕುಮಾರ್, ಅಂಜಿ ಸುಮೇಶ್ ಕುಮಾರ್, ರಾಮು ಯಾನೆ ಬಾಬು, ಧೂಮ ಶೆಟ್ಟಿ, ರಿಷಬ್ ಶೆಟ್ಟಿ, ಶಶಿರಾಜ್ ಶೆಟ್ಟಿ ಹಾಗೂ ಇತರರ ಮೇಲೆ BNS- 2023(U/s-189(2),191(2), 115(2), 118(1),329(3),351(2),352,190), ARMS ACT 1959 (U/s-25(1)(A)) ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.



