ಬೆಳ್ತಂಗಡಿ; ಪಡುಬಿದ್ರೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅರಸಿನಮಕ್ಕಿ ನಿವಾಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.
ಮೃತ ಮಹಿಳೆ ಅರಸಿನಮಕ್ಕಿ ನಿವಾಸಿ ಪುರುಷೋತ್ತಮ ಅಭ್ಯಂಕರ್ ಅವರ ಪತ್ನಿ ಸುಮಂಗಲ(55)ಎಂಬವರಾಗಿದ್ದಾರೆ. ಮಂಗಳೂರಿನಿಂದ
ಪಡುಬಿದ್ರೆಗೆ ಬರುವ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ಸುಮಂಗಳ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಪುರುಷೋತ್ತಮ ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.