Home ಅಪಘಾತ ಬೆಳ್ತಂಗಡಿ : ನಡ ಅಂತ್ರಾಯ ಗುಂಡಿಗೆ ಈಜಲು ಹೋದ ಬಾಲಕ ಸಾವು

ಬೆಳ್ತಂಗಡಿ : ನಡ ಅಂತ್ರಾಯ ಗುಂಡಿಗೆ ಈಜಲು ಹೋದ ಬಾಲಕ ಸಾವು

0
4

ಬೆಳ್ತಂಗಡಿ : ನಡ ಗ್ರಾಮದ ಅಂತ್ರಾಯಪಲ್ಕೆ ಎಂಬಲ್ಲಿರುವ ಅಂತ್ರಾಯ ಗುಂಡಿಗೆ ಈಜಲು ಹೋದ ನಾಲ್ಕು ಮಂದಿ ಬಾಲಕರಲ್ಲಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾ.28 ರಂದು ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕುಂಟಿನಿ ನಿವಾಸಿ ಹಸನಬ್ಬ ಎಂಬವರ ಪುತ್ರ ಮಹಮ್ಮದ್ ಹಫೀಝ್(14) ಸಾವನ್ನಪ್ಪಿದ ಬಾಲಕನಾಗಿದ್ದಾ‌ನೆ. ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು.ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here