Home ಅಪಘಾತ ಮುಂಡಾಜೆ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಇಬ್ಬರಿಗೆ ಗಾಯ

ಮುಂಡಾಜೆ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಇಬ್ಬರಿಗೆ ಗಾಯ

0
2

ಬೆಳ್ತಂಗಡಿ;  ಮಂಗಳೂರು-ವಿಲ್ಲು ಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಕಾಪು ಎಂಬಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಬಡಿದು ಕಂಬ ತುಂಡಾಗಿ, ಕಾರು ಮಗುಚಿ ಬಿದ್ದ ಘಟನೆ ನಡೆದಿದೆ.
ತಿಪಟೂರಿನಿಂದ ಉಜಿರೆ ಕಡೆ ಸಂಚರಿಸುತ್ತಿದ್ದ ಕಾರು ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ರಸ್ತೆಯ ತೀರಾ ಬಲಬದಿಗೆ ಚಲಿಸಿ ವಿದ್ಯುತ್ ಕಂಬಕ್ಕೆ ಬಡಿದು ವಿದ್ಯುತ್ ಕಂಬ ತುಂಡಾದ ಕಾರಣ ಕಕ್ಕಿಂಜೆ ವಿದ್ಯುತ್ ಸಬ್ ಸ್ಟೇಷನ್ ನ ಮುಂಡಾಜೆ ಹಾಗೂ ದಿಡುಪೆ ಫೀಡರ್ ನ ಸಾವಿರಾರು ಗ್ರಾಹಕರಿಗೆ ಮಧ್ಯಾಹ್ನ 2 ಗಂಟೆ ತನಕವು ವಿದ್ಯುತ್ ವ್ಯತ್ಯಯ ಉಂಟಾಯಿತು.
ಘಟನೆಯಲ್ಲಿ ಕಾರು ಮಗುಚಿ ಬಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತಿಪಟೂರು ಮೂಲದ ಶ್ರೀನಿವಾಸ (53) ಹಾಗೂ ಷಣ್ಮುಖ (46) ಎಂಬವರು ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದು ಕಕ್ಕಿಂಜೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here