Home ಅಪರಾಧ ಲೋಕ ಬೆಳ್ತಂಗಡಿ : ಬೆಳಾಲು ಅಕ್ರಮ ಕೋಳಿ ಅಂಕದ ಮೇಲೆ ಧರ್ಮಸ್ಥಳ ಪೊಲೀಸ್ ದಾಳಿ

ಬೆಳ್ತಂಗಡಿ : ಬೆಳಾಲು ಅಕ್ರಮ ಕೋಳಿ ಅಂಕದ ಮೇಲೆ ಧರ್ಮಸ್ಥಳ ಪೊಲೀಸ್ ದಾಳಿ

1
0

ಬೆಳ್ತಂಗಡಿ : ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮಾ.4 ರಂದು ಬೆಳಾಲು ಗ್ರಾಮದ ಕೀನ್ಯಾಜೆ ಎಂಬಲ್ಲಿ ಸರಕಾರಿ ಜಾಗದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟವಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಬ್ ಇನ್ಸ್‌ಪೆಕ್ಟರ್ ಸಮರ್ಥ ಆರ್‌ ಗಾಣಿಗೇರವರು ನೇತೃತ್ವದ
ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಹಣವನ್ನು ಪಣವಾಗಿಟ್ಟುಕೊಂಡು ಹಿಂಸಾತ್ಮಕವಾಗಿ ಕೊಳಿ ಅಂಕ ಜೂಜಾಟ ನಡೆಯುತ್ತಿದ್ದಾಗ ಸ್ಥಳದಲ್ಲಿದ್ದ 7 ಜನರನ್ನು ಹಿಡಿದು ವಿಚಾರಿಸಲಾಗಿ ಹರಿಶ್ಚಂದ್ರ (32), ರಮೇಶ ಕುಲಾಲ್‌ (46), ಸುಧಾಕರ (30), ಅಶೋಕ ಮಲೆಕುಡಿಯ (40), ಪುಷ್ಪರಾಜ್‌ (25), ಶ್ರೀಧರ ಕುಂಬಾರ (48), ಚೆನ್ನಪ್ಪ ಗೌಡ (70) ಎಂಬವರಾಗಿದ್ದು. ಉಳಿದವರು ದಾಳಿ ವೇಳೆ ಸ್ಥಳದಿಂದ ಪರಾರಿಯಾಗಿದ್ದಾರೆ.

ಸ್ಥಳದಲ್ಲಿದ್ದ 5 ಕೋಳಿಗಳನ್ನು ಮತ್ತು ಕೋಳಿಗಳ ಕಾಲಿಗೆ ಕಟ್ಟುವ ಬಾಲುಗಳು(ಸಣ್ಣಕತ್ತಿ) 2 ಹಾಗೂ ನಗದು 970 ರೂಪಾಯಿ ವಶಪಡಿಸಿಕೊಳ್ಳಲಾಗಿದೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕಲಂ: 87 KP Act AND ಕಲಂ 11(1)(m)(ii), 11(1)(n), . prevention of animals cruelty Act -1960ರಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here