Home ಅಪರಾಧ ಲೋಕ ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ 35ನೇ ವರ್ಷದ ಸಂಭ್ರಮ”ಚಾಲೆಂಜರ್ಸ್ ಉತ್ಸವ”

ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ 35ನೇ ವರ್ಷದ ಸಂಭ್ರಮ”ಚಾಲೆಂಜರ್ಸ್ ಉತ್ಸವ”

21
0

ಬೆಳ್ತಂಗಡಿ; ಯುವ ಜನತೆಯ ಸಮಯದ ಸದ್ವಿನಿಯೋಗದೊಂದಿಗೆ ಅವರನ್ನು ಸಜ್ಜನರಾಗಿ ರೂಪಿಸುವಲ್ಲಿ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಚೂಣಿಯಲ್ಲಿದೆ. ಸಮಾಜದ ಕಷ್ಟಗಳಿಗೆ ಸ್ಪಂದಿಸುವವರೇ ನಿಜವಾದ ಸೇವಕರು ಎಂದು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಗೌರವಾಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು.
ಅವರು ಗುರುವಾರ ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ 35ನೇ ವರ್ಷದ ಸಂಭ್ರಮ “ಚಾಲೆಂಜರ್ಸ್ ಉತ್ಸವ”ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗುರುವಾಯನಕೆರೆ
ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ,
ಉತ್ತಮ ವ್ಯಕ್ತಿತ್ವ ಉಳ್ಳವರು ನಿಜವಾದ ಶ್ರೀಮಂತರು. ಮಕ್ಕಳ ವ್ಯಕ್ತಿತ್ವ ರೂಪಿಸುವುದು ಪೋಷಕರ ಕರ್ತವ್ಯ. ಹೈಸ್ಕೂಲಿನಿಂದ ಪಿಯುಸಿ ವರೆಗಿನ ಹಂತ ಮಹತ್ವದ್ದಾಗಿದ್ದು, ಈ ಸಮಯ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಯಂಗ್ ಚಾಲೆಂಜರ್ಸ್ ನಂತಹ ಸಂಘ-ಸಂಸ್ಥೆಗಳು ಬಹುದೊಡ್ಡ ಪಾತ್ರ ವಹಿಸುತ್ತವೆ ಎಂದರು. ಮಂಗಳೂರು
ಗೋವರ್ಧನ ಗಿರಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ನಿಶಾನ್ ಕೃಷ್ಣ ಭಂಡಾರಿ ಮಾತನಾಡಿ, ಹೆಸರು ಉಳಿಯಬೇಕಾದರೆ ಒಳ್ಳೆಯ ಕೆಲಸಗಳ ಮೂಲಕ ಸಮಾಜ ಕಟ್ಟಬೇಕು. ಒಗ್ಗಟ್ಟಿನಿಂದ ಜೀವಿಸುವುದು ಅಭಿವೃದ್ಧಿಗೆ ಪೂರಕ ಎಂದರು.
ಮುಂಡಾಜೆ ಗ್ರಾಪಂ ಅಧ್ಯಕ್ಷ ಗಣೇಶ ಬಂಗೇರ ಶುಭಕೋರಿದರು.
ಸಂಘದ ಸಂಸ್ಥಾಪಕ ನಾಮದೇವ ರಾವ್, ಸಂಘ ನಡೆದು ಬಂದ ದಾರಿ ಬಗ್ಗೆ ಮಾಹಿತಿ ಪ್ರಸ್ತಾವನೆಗೈದರು. ಅಧ್ಯಕ್ಷ ಶೀನಪ್ಪ ಗೌಡ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ ಠೋಸರ್ ವಂದಿಸಿದರು. ಪೂರ್ವಾಧ್ಯಕ್ಷ ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು.
ನೃತ್ಯ, ರಸಮಂಜರಿ, ತುಳು ನಾಟಕ ನಡೆಯಿತು.


-ಪ್ರಶಸ್ತಿ ಪ್ರದಾನ-
ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಯು.ಸಿ.ಪೌಲೋಸ್ ಅವರಿಗೆ
ಕೀರ್ತಿಶೇಷ ಜಿ. ಎನ್.ಭಿಡೆ ಪ್ರಶಸ್ತಿ, ಚಾರ್ಮಾಡಿಯ ಹಿರಿಯ ಸಹಕಾರಿ ಕೆ ಅನಂತ ರಾವ್ ಅವರಿಗೆ ದಿ.ಎನ್.ಎಸ್. ಗೋಖಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಅರ್ಥಶಾಸ್ತ್ರಜ್ಞ ಮುಂಡಾಜೆಯ ಡಾ. ಶಶಾಂಕ ಭಿಡೆಯವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ
ಜಾಲಿ ಡಿಸೋಜಾ, ಧಾರ್ಮಿಕ, ಸಾಮಾಜಿಕ ಕ್ಷೇತ್ರದ ರಾಘವ ಶೆಟ್ಟಿ ನೆಯ್ಯಾಲು, ಉದ್ಯಮ ಕ್ಷೇತ್ರದ ಝಾಕೀರ್
ಶರೀಫ್, ಹೈನುಗಾರಿಕೆಯ ಸ್ವಾತಿ ನವೀನ್ ಕುಮಾರ್, ಶ್ರಮಿಕರಾದ ಇಸ್ಮಾಯಿಲ್ ಎನ್. ಮತ್ತು ಅಶೋಕ ರೈ, ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಗೋಪಾಲ ನಾಯ್ಕ ಇವರಿಗೆ “ಚಾಲೆಂಜರ್ಸ್ ಸಮ್ಮಾನ್” ಪುರಸ್ಕಾರ ನೀಡಲಾಯಿತು. ನಿರ್ಗಮನಾಧ್ಯಕ್ಷ ಶೀನಪ್ಪ ಗೌಡರಿಗೆ ಕೃತಜ್ಞತಾ ಪತ್ರ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here