Home ಸ್ಥಳೀಯ ಸಮಾಚಾರ ರಿಂಗ್ ಅಳವಡಿಸಲು ಬಾವಿಗಿಳಿದ ಕಾರ್ಮಿಕರಿಬ್ಬರು ಆಕ್ಸಿಜನ್ ಸಿಗದೆ ಸಾವು

ರಿಂಗ್ ಅಳವಡಿಸಲು ಬಾವಿಗಿಳಿದ ಕಾರ್ಮಿಕರಿಬ್ಬರು ಆಕ್ಸಿಜನ್ ಸಿಗದೆ ಸಾವು

162
0

ವಿಟ್ಲ: ಬಾವಿಗೆ ರಿಂಗ್‌ ಹಾಕುವಾಗ ಆಕ್ಸಿಜನ್‌ ಸಿಗದೇ ಇಬ್ಬರು ಮೃತಪಟ್ಟ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಮಂಗಳವಾರ ನಡೆದಿದೆ.
ಮೃತ ಕಾರ್ಮಿಕರನ್ನು ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ(40) ಮತ್ತು ಮಲಾರ್‌ ನಿವಾಸಿ ಅಲಿ(24) ಎಂದು ಗುರುತಿಸಲಾಗಿದೆ.
ಸುಮಾರು30 ಫೀಟ್‌ ಆಳದ ಬಾವಿಗೆ ರಿಂಗ್‌ ಹಾಕಿ ನಂತರ ಕ್ಲೀನಿಂಗ್‌ ಮಾಡಲೆಂದು ಬಾವಿಗೆ ಇಳಿದ ಒಬ್ಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾವಿಗೆ ಇಳಿದವನು ಮೇಲಕ್ಕೆ ಬಾರದೇ ಇದ್ದಾಗ ಅವನನ್ನು ನೋಡಲು ಇನ್ನೊಬ್ಬ ಕಾರ್ಮಿಕ ಇಳಿದಿದ್ದು, ಇಬ್ಬರೂ ಆಕ್ಸಿಜನ್‌ ಸಿಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸ್ಥಳೀಯರ ಸಹಾಯದಿಂದ ಮುರಳೀಧರ ಎಂಬವರು ಎರಡು ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ.

LEAVE A REPLY

Please enter your comment!
Please enter your name here