Home ಅಪರಾಧ ಲೋಕ ಬಾಲಕನ ಮೃತದೇಹ ಪತ್ತೆಯಾದ ಕೆರೆಯಲ್ಲಿ ಲೈಟ್ ಪತ್ತೆ ಮುಂದುವರಿದ ತನಿಖೆ

ಬಾಲಕನ ಮೃತದೇಹ ಪತ್ತೆಯಾದ ಕೆರೆಯಲ್ಲಿ ಲೈಟ್ ಪತ್ತೆ ಮುಂದುವರಿದ ತನಿಖೆ

0
4

ಬೆಳ್ತಂಗಡಿ: ಸಂಬೋಳ್ಯ ದಲ್ಲಿ ಬಾಲಕನ ಮೃತದೇಹ ಪತ್ತೆಯಾದ ಕೆರೆಯಲ್ಲಿ ಬಾಲಕ ಹಿಡಿದುಕೊಂಡು ಹೋದ ನೀಲಿ ಬಣ್ಣದ ಲೈಟ್ ಪತ್ತೆಯಾಗಿದೆ. ಕೆರೆಯಲ್ಲಿ ಹಳೆಯ ತುಕ್ಕುಹಿಡಿದ ಕತ್ತಿಯೂ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಬುಧವಾರ ಮನೆಯಿಂದ ಬೆಳಗ್ಗೆ ಚದೇವಸ್ಥಾನಕ್ಕೆಂದು ಹೋದ ಸುಮಂತ್ (೧೫) ಬಾಲಕನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿತ್ತು.
ಗುರುವಾರ ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಕೆರೆಯ ನೀರನ್ನು ಸಂಪೂರ್ಣ ಬತ್ತಿಸಿ ಪರಿಶೀಲನೆ ನಡೆಸಿದ್ದಾರೆ.
ಕೆರೆಯಲ್ಲಿ ಬಾಲಕ ಮನೆಯಿಂದ ತಂದಿದ್ದ ಲೈಟ್ ಪತ್ರೆಯಾಗಿದೆ. ಅದೇರೀತಿ ಹಳೆಯ ಕತ್ತಿಯೊಂದು ಕೆರೆಯಲ್ಲಿ ಪತ್ತೆಯಾಗಿದೆ.
ಸೋಕೋ ತಂಡ ಹಾಗೂ ಪೊಲೀಸರು ಈ ವಸ್ತಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದ್ದು ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಯುತ್ತಿದೆ.

NO COMMENTS

LEAVE A REPLY

Please enter your comment!
Please enter your name here