

ಬೆಳ್ತಂಗಡಿ: ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಅಗಲೀಕರಣ ಸಂಬಂಧ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿಯನ್ನು ಹಾಗೂ 33 ಕೆವಿ ಬೆಳ್ತಂಗಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 11ಕೆವಿ ಲಾಯಿಲ, ಕುವೆಟ್ಟು, ಬಂಗಾಡಿ, ಕೊಲ್ಲಿ, ಕೊಯ್ಯರು, ಉಜಿರೆ, ಬೆಳಾಲು ಫೀಡರುಗಳಲ್ಲಿ ನ.26ರಂದು ಬೆಳಿಗ್ಗೆ ಗಂಟೆ: 10:00ರಿಂದ ಸಂಜೆ ಗಂಟೆ:5:30ರ ತನಕ ಹಾಗೂ ಧರ್ಮಸ್ಥಳ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುತ್ತಿರುವ ಧರ್ಮಸ್ಥಳ ಟೆಂಪಲ್, ಕನ್ಯಾಡಿ, ಪುದುವೆಟ್ಟು, ಪಟ್ರಮೆ, ಅರಸಿನಮಕ್ಕಿ, ನಿಡ್ಲೆ ಫೀಡರುಗಳಲ್ಲಿ ನ.26ರಂದು ಬೆಳಿಗ್ಗೆ ಗಂಟೆ:10:00ರಿಂದ ಮಧ್ಯಾಹ್ನ ಗಂಟೆ:2:0ರ ತನಕ ವಿದ್ಯುತ್ ನಿಲುಗಡೆ ಆಗಲಿದೆ. ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.









